Site icon Vistara News

Paris Olympics 2024 : ಒಲಿಂಪಿಕ್ಸ್​ನಲ್ಲಿ ವಿವಾದ; ಮಹಿಳೆ ವಿರುದ್ಧ ಸ್ಪರ್ಧಿಸಲು ಬಾಕ್ಸಿಂಗ್​ ಕಣಕ್ಕೆ ಇಳಿದ ಪುರುಷ!

Paris Olympics 2024

ಪ್ಯಾರಿಸ್: ಕುಂದು ಕೊರತೆಗಳ ಕಾರಣಕ್ಕೆ ಚರ್ಚೆಗೆ ಒಳಗಾಗುತ್ತಿದ್ದ ಪ್ಯಾರಿಸ್​ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟ ಇದೀಗ ದೊಡ್ಡ ವಿವಾದವೊಂದಕ್ಕೆ ಕಾರಣವಾಗಿದೆ. ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯೊಂದಕ್ಕೆ ಪುರುಷ ಸ್ಪರ್ಧಿಯೊಬ್ಬರು ಇಳಿದು ಕೇವಲ 46 ಸೆಕೆಂಡ್​ಗಳಲ್ಲಿ ಎದುರಾಳಿಯನ್ನು ಸೋಲಿಸಿದ್ದು ಜಾಗತಿಕವಾಗಿ ಕಿಡಿ ಹಚ್ಚಿಸಿದೆ. ಸೋಶೀಯಲ್ ಮೀಡಿಯಾಗಳಲ್ಲಿ ಇದು ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದ್ದು ಆಯೋಜಕರ ವಿರುದ್ಧ ಟೀಕೆಗಳ ಸುರಿಮಳೆ ಸುರಿಯುತ್ತಿವೆ. ಸ್ವತಃ ಇಟಲಿಯ ಸ್ಪರ್ಧಿ ರಿಂಗ್​ನಲ್ಲಿ ಕಣ್ಣೀರು ಹಾಕುವ ಜತೆಗೆ ಬಳಿಕ ಮಾಧ್ಯಮದ ಮುಂದೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾಗಿದ್ದ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ವಿವಾದಕ್ಕೆ ಕಾರಣವಾದ ಬಾಕ್ಸರ್​. ಒಲಿಂಪಿಕ್ಸ್​ ಸ್ಪರ್ಧೆಯಲ್ಲಿ ಇಟಲಿಯ ಎದುರಾಳಿ ಏಂಜೆಲಾ ಕ್ಯಾರಿನಿ ಅವರನ್ನು 46 ಸೆಕೆಂಡುಗಳಲ್ಲಿ ಸೋಲಿಸಿದ್ದಾರೆ ಅವರು. ಪೆಟ್ಟು ತಿಂದ ಇಟಲಿಯ ಸ್ಪರ್ಧಿ ಬಾಕ್ಸಿಂಗ್ ರಿಂಗ್​ನೊಳಗೆ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಏಂಜೆಲಾ ಕ್ಯಾರಿನಿ ನಂತರ ಖೇಲಿಫ್ ಅವರ ಕೈ ಕುಲುಕುವುದಕ್ಕೂ ನಿರಾಕರಿಸಿದರು. ಅಂದ ಹಾಗೆ ಅಲ್ಜೀರಿಯಾದ ಅಥ್ಲೀಟ್ ಕಳೆದ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿದ್ದರು.ಆದಾಗ್ಯೂ ಅವರಿಗೆ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಟ್ಟಿರುವುದು ವಿವಾದ ಹುಟ್ಟುಹಾಕಿದೆ. 25 ವರ್ಷದ ಖೆಲಿಫಾ ಅವರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗಿದೆ ಎಂದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಇದು ಪುರುಷರ ದೇಹದಲ್ಲಿರುವ ಅಂಶವಾಗಿದೆ.

ಮಹಿಳೆಯರ 66 ಕೆ.ಜಿ ವಿಭಾಗದಲ್ಲಿ ಖೇಲಿಫ್ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದ್ದರು. ಅಲ್ಲಿ ಅವರು ಕ್ಯಾರಿನಿ ಮೂಗಿಗೆ ಕೊಟ್ಟ ಪಂಚ್ ಅವರನ್ನು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿತು. ಅವರು ತಕ್ಷಣ ಸ್ಪರ್ಧೆಯನ್ನು ನಿಲ್ಲಿಸಿ ಶರಣಾದರು. ಅಲ್ಲದೆ ಪುರುಷ ಸ್ಪರ್ಧಿಗೆ ಅವಕಾಶ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಏಕಪಕ್ಷೀಯ ಪಂದ್ಯದ ಬಗ್ಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸರಿಯಾದ ರೀತಿಯ ಸ್ಪರ್ಧೆಯಲ್ಲ ಎಂದು ಹೇಳಿದ್ದಾರೆ.

ನನ್ನ ಮೂಗಿನಲ್ಲಿ ನೋವು ಇದೆ. ಮತ್ತು ನಾನು ನಿಲ್ಲಿಸಿ ಎಂದು ಹೇಳಿದೆ. ಮೊದಲ ಹೊಡೆತದಿಂದ ನನ್ನ ಮೂಗಿನಿಂದ ರಕ್ತ ಸೋರಲು ಪ್ರಾರಂಭಿಸಿತು ಎಂದು ದುಃಖಿತ ಕ್ಯಾರಿನಿ ಹೇಳಿದ್ದಾರೆ. 25ರ ಹರೆಯದ ಕ್ಯಾರಿನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾನು ರಾಷ್ಟ್ರೀಯ ತಂಡದಲ್ಲಿ ಆಗಾಗ್ಗೆ ಪುರುಷರ ಜತೆ ಸ್ಪರ್ಧೆ ಮಾಡಿದ್ದೆ . ನಾನು ನನ್ನ ಸಹೋದರನೊಂದಿಗೆ ತರಬೇತಿ ಪಡೆಯುತ್ತೇನೆ. ಆದರೆ ಇಂದು ನಾನು ತುಂಬಾ ಆಘಾತಕಾರಿ ಎಂದು ಕ್ಯಾರಿನಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

ನಾನು ಅಗಲಿರುವ ತಂದೆಗಾಗಿ ಇಲ್ಲಿ ಸ್ಪರ್ಧೆಗೆ ಬಂದಿದ್ದೆ. ಆದರೆ, ಇದು ಅನ್ಯಾಯ. ಪುರುಷ ಸ್ಪರ್ಧಿಯ ಪಂಚ್ ಎದುರಿಸುವುದು ಅಸಾಧ್ಯ ಎಂದು ಕ್ಯಾರಿನಿ ಹೇಳಿಕೊಂಡಿದ್ದಾರೆ.

ಆಯೋಜಕರ ಪ್ರಮಾದ

ಶುಕ್ರವಾರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಖೇಲಿಫ್ ಮತ್ತು ತೈವಾನ್ ನ ಲಿನ್ ಯು-ಟಿಂಗ್ ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್ ಗೆ ಅನರ್ಹರಾಗಿದ್ದರು ಆದರೆ ಪ್ಯಾರಿಸ್ ನಲ್ಲಿ ನಡೆದ ಮಹಿಳಾ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಕೊಡಲಾಗಿದೆ. ಟೆಸ್ಟೋಸ್ಟೆರಾನ್ ಮಟ್ಟದ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ನಂತರ 25 ವರ್ಷದ ಖೇಲಿಫ್ ಅವರನ್ನು ಅನರ್ಹಗೊಳಿಸಲಾಗಿತ್ತು.

ಪುರುಷ ಆನುವಂಶಿಕ ಗುಣಲಕ್ಷಣಗಳನ್ನು ಹೊಂದಿರುವ ಕ್ರೀಡಾಪಟುಗಳನ್ನು ಮಹಿಳಾ ಸ್ಪರ್ಧೆಗಳಿಗೆ ಸೇರಿಸಬಾರದು ಎಂದು ನಾನು ಭಾವಿಸುತ್ತೇನೆ ಎಂದು ಇಟಲಿ ಪ್ರಧಾನಿ ಮೆಲೋನಿ ಹೇಳಿದ್ದಾರೆ.

ಮಹಿಳೆಯರ ಮೇಲಿನ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ವರದಿಗಾರ ರೀಮ್ ಅಲ್ಸಲೇಮ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. . ಕ್ಯಾರಿನಿ ಮತ್ತು ಇತರ ಮಹಿಳಾ ಕ್ರೀಡಾಪಟುಗಳು ದೈಹಿಕ ಮತ್ತು ಮಾನಸಿಕ ಹಿಂಸೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖೇಲಿಫ್, “ಅಂತಹ ಪ್ರಮುಖ ಸ್ಪರ್ಧೆಯಲ್ಲಿ ಗೆಲ್ಲುವುದು ಯಾವಾಗಲೂ ತೃಪ್ತಿಕರವಾಗಿದೆ, ಆದರೆ ನಾನು ಪದಕದ ಗುರಿಯತ್ತ ಗಮನ ಹರಿಸಿದ್ದೇನೆ” ಎಂದು ಹೇಳಿದರು.

ಅಲ್ಜೀರಿಯಾದ ಒಲಿಂಪಿಕ್ ಸಮಿತಿ (ಸಿಒಎ) “ನಮ್ಮ ಅಥ್ಲೀಟ್ ಇಮಾನೆ ಖೇಲಿಫ್ ವಿರುದ್ಧ ಕೆಲವು ವಿದೇಶಿ ಮಾಧ್ಯಮಗಳು ದುರುದ್ದೇಶಪೂರಿತ ಮತ್ತು ಅನೈತಿಕ ದಾಳಿಗಳನ್ನು ನಡೆಸಿವೆ” ಎಂದು ಕರೆದಿದೆ.

ವೃತ್ತಿಪರ ಬಾಕ್ಸರ್​

ಖೇಲಿಫ್ ಅವರು ಮೇ 2, 1999 ರಂದು ಅಲ್ಜೀರಿಯಾದ ಟಿಯಾರೆಟ್​ನಲ್ಲಿ ಜನಿಸಿದ್ದಾರೆ, ಅವರು ಮೊದಲ ಬಾರಿಗೆ 2018 ರಲ್ಲಿ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ವೃತ್ತಿಪರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು. ಖೇಲಿಫ್ 2021 ರ ಟೋಕಿಯೊ ಒಲಿಂಪಿಕ್ಸ್​​ನ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದರು ಮತ್ತು ಮುಂದಿನ ವರ್ಷ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಫ್​ ಫೈನಲ್​​ನಲ್ಲಿ ಸ್ಥಾನ ಪಡೆದ ಮೊದಲ ಅಲ್ಜೀರಿಯಾದ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2023 ರ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಿಂದ ಅವರು ಅನರ್ಹಗೊಂಡಿದ್ದರು.

Exit mobile version