Site icon Vistara News

Birthday Cake : ಬರ್ತ್​ಡೇ ದಿನ ಆನ್​ಲೈನ್​ನಲ್ಲಿ ತರಿಸಿದ ಕೇಕ್​ ತಿಂದು ಮೃತಪಟ್ಟ ಬಾಲಕಿ! ಇಲ್ಲಿದೆ ವಿಡಿಯೊ

birthday Cake

ಚಂಡೀಗಢ: ಬರ್ತ್​ಡೇ ದಿನ ಆನ್​ಲೈನ್​ ಫುಡ್​ ಡೆಲಿವರಿ ಆ್ಯಪ್​ಗಳ ಮೂಲಕ ಕೇಕ್​ ತರಿಸುವುದು ಸಾಮಾನ್ಯ. ಆದರೆ, ಇಂಥ ಮೂಲಗಳಿಂದ ಬರುವ ಕೇಕ್​ಗಳ ತಾಜಾತನದ ಬಗ್ಗೆ ಖಾತರಿ ಇರುವುದಿಲ್ಲ. ಹಳೆಯ ಅಥವಾ ಕೆಟ್ಟು ಹೋಗಿರವು ಕೇಕ್​ ತಿಂದವರು ಅಸ್ವಸ್ಥರಾಗುವುದು ಗ್ಯಾರಂಟಿ. ಇಂಥದ್ದೇ ಒಂದು ಘಟನೆ ಪಂಜಾಬ್​ನಲ್ಲಿ ನಡೆದಿದೆ. 10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು (Birthday Cake) ಆನ್​ಲೈನ್ ಮೂಲಕ ತರಿಸಿದ ಕೇಕ್ ತಿಂದು ಮೃತಪಟ್ಟ ಘಟನೆ ನಡೆದಿದೆ.

ಹುಡುಗಿ ಮೃತಪಡುವ ಜತೆಗೆ ಜತೆಗೆ ಕೇಕ್ ತಿಂದ ನಂತರ ಬಾಲಕಿಯ ತಂಗಿ ಸೇರಿದಂತೆ ಇಡೀ ಕುಟುಂಬ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ಆಕೆಯ ಅಜ್ಜ ತಿಳಿಸಿದ್ದಾರೆ. ಪಟಿಯಾಲದ ಬೇಕರಿಯಿಂದ ಕೇಕ್ ಅನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಾಲಕಿ ಬರ್ತ್​ಡೇ ಆಚರಿಸುವ ವಿಡಿಯೊ ಇಲ್ಲಿದೆ

ಮಾನ್ವಿ ಎಂಬ ಬಾಲಕಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಕೇಕ್ ಕತ್ತರಿಸಿ ತನ್ನ ಕುಟುಂಬದೊಂದಿಗೆ ಸಂಭ್ರಮ ಆಚರಿಸಿಕೊಳ್ಳುತ್ತಿರುವ ವಿಡಿಯೊ ಆಚರಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮಾರ್ಚ್ 24 ರಂದು ಸಂಜೆ 7 ಗಂಟೆ ಸುಮಾರಿಗೆ ಅವಳು ಕೇಕ್ ಕತ್ತರಿಸಿದಳು, ಅದೇ ರಾತ್ರಿ 10 ಗಂಟೆಯ ಹೊತ್ತಿಗೆ, ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು ಎಂದು ಆಕೆಯ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ. ಮಾನ್ವಿ ತೀವ್ರ ಬಾಯಾರಿಕೆಯಿಂದ ನೀರು ಕೇಳಿದಳು ಮತ್ತು ಬಾಯಿ ಒಣಗುತ್ತಿರುವ ಬಗ್ಗೆ ದೂರು ನೀಡಿದ್ದಳು ಎಂದು ಅವರು ಹೇಳಿದ್ದಾರೆ.. ನಂತರ, ಅವಳು ನಿದ್ರೆಗೆ ಹೋದಳು ಎಂದು ಅವರು ಹೇಳಿದರು.

ಇದನ್ನೂ ಓದಿ: Saina Nehwal: ಸ್ತ್ರೀಯರು ಅಡುಗೆ ಮನೆಗೆ ಸೀಮಿತ; ಶಾಮನೂರು ಹೇಳಿಕೆಗೆ ಸೈನಾ ನೆಹ್ವಾಲ್ ಆಕ್ರೋಶ

ಆಕೆಯ ಆರೋಗ್ಯ ಹದಗೆಟ್ಟ ನಂತರ ಕುಟುಂಬವು ಮರುದಿನ ಬೆಳಿಗ್ಗೆ ಅವಳನ್ನು ಆಸ್ಪತ್ರೆಗೆ ಕರೆದೊಯ್ದಿತು. ಆಕೆಗೆ ಆಮ್ಲಜನಕವನ್ನು ನೀಡಲಾಯಿತು ಮತ್ತು ಹೃದಯದ ವಿದ್ಯುತ್ ಚಟುವಟಿಕೆಯ ರೆಕಾರ್ಡಿಂಗ್ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ನಡೆಸಲಾಯಿತು ಎಂದು ಹರ್ಬನ್ ಲಾಲ್ ಹೇಳಿದರು. ಆದರೆ ಅವರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದರು.

‘ಕೇಕ್ ಕನ್ಹಾ’ ಎಂಬ ಅಂಗಡಿಯಿಂದ ಆರ್ಡರ್ ಮಾಡಲಾದ ಚಾಕೊಲೇಟ್ ಕೇಕ್​ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬ ಆರೋಪಿಸಿದೆ. ಬೇಕರಿ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. “ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೇಕ್ ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ” ಎಂದು ಪೊಲೀಸರುಹೇಳಿದ್ದಾರೆ.

Exit mobile version