Site icon Vistara News

BJP Karnataka: ಪ್ರತಿಭಟನೆಗೆ ಹಸು ಬಳಸಬೇಡಿ ಎಂದ ಮಾನವ ಹಕ್ಕುಗಳ ಆಯೋಗ; ರೈತರ ಆಕ್ರೋಶ

BJP Karnataka Protest

ಬೆಂಗಳೂರು: ಹಾಲು ಉತ್ಪಾದಕರಿಗೆ ಸಬ್ಸಿಡಿ ದರ (Subsidised for milk producers) ಕೊಡುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ಸರ್ಕಾರ ಇದುವರೆಗೂ ನೀಡಿಲ್ಲ. ಈ ಮೂಲಕ ರೈತರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಹಸುಗಳನ್ನು ಬಳಸಿಕೊಂಡು ಬಿಜೆಪಿ (BJP Karnataka) ಪ್ರತಿಭಟನೆ ಮಾಡಿದೆ. ಇದಕ್ಕೆ ಮಾನವ ಹಕ್ಕುಗಳ ಆಯೋಗದ ಸದಸ್ಯರು ತೀವ್ರ ಅಸಮಾಧಾನವನ್ನು ಹೊರಹಾಕಿದರು. ಪ್ರತಿಭಟನೆಗೆ ಹಸುಗಳನ್ನು ತರುವ ಹಾಗಿಲ್ಲ ಎಂದು ಹೇಳಿದರು. ಇದು ಹಸು ಮಾಲೀಕರು ಹಾಗೂ ರೈತರನ್ನು ಕೆರಳಿಸಿದ್ದು, ಕೆಲ ಕಾಲ ವಾಗ್ವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ಈ ವೇಳೆ ಹಸುಗಳನ್ನು ಕರೆತಂದಿರುವ ವಿಷಯ ತಿಳಿದ ಮಾನವ ಹಕ್ಕುಗಳ ಆಯೋಗದ ಸದಸ್ಯರು ಫ್ರೀಡಂ ಪಾರ್ಕ್‌ಗೆ ಬಂದಿದ್ದಾರೆ. ಹಸುಗಳನ್ನು ಹೀಗೆಲ್ಲ ಬಳಕೆ ಮಾಡಬಾರದು ಎಂದು ಹೇಳಿದ್ದಾರೆ. ಮಾನವ ಹಕ್ಕುಗಳ ಸದಸ್ಯರ ಈ ಮಾತಿಗೆ ರೈತರು ಕೆರಳಿದ್ದಾರೆ. ಆದರೆ, ಇದೇ ವೇಳೆ ಮಾತನಾಡಿದ ಇಬ್ಬರು ಮಾನವ ಹಕ್ಕುಗಳ ಆಯೋಗದ ಸದಸ್ಯರು, “ಹಸುಗಳಿಗೆ ಮೂಗುದಾರವನ್ನು ಹಾಕಿದ್ದೀರಿ. ಅದಕ್ಕೆ ಹಿಂಸೆ ಆಗುತ್ತದೆ ಎಂದು ತಗಾದೆ ತೆಗೆದಿದ್ದಾರೆ. ಇದಕ್ಕೆ ರೈತರು ತೀವ್ರವಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.

BJP Karnataka Protest

ಇದನ್ನೂ ಓದಿ: Lok Sabha Election 2024: 28 ಲೋಕಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ಟಾಸ್ಕ್;‌ 10ಕ್ಕೂ ಹೆಚ್ಚು ಕ್ಷೇತ್ರದಲ್ಲಿದೆ ತೊಂದರೆ!

ಈ ವೇಳೆ ಮಾನವ ಹಕ್ಕುಗಳ ಆಯೋಗದ ಸದಸ್ಯರೊಂದಿಗೆ ವಾಗ್ವಾದ ನಡೆಸಿದ ಬಿಜೆಪಿ ನಾಯಕರು ಹಾಗೂ ಹಸು ಮಾಲೀಕರು, ಹಸುಗಳಿಗೆ ಈ ಸರ್ಕಾರ ಬಾಕಿ ನೀಡಬೇಕು. ಮೇವಿಲ್ಲದೆ ಸಾಯುತ್ತಿವೆ. ಅದೆಲ್ಲ ನಿಮ್ಮ ಕಣ್ಣಿಗೆ ಕಾಣಲ್ವಾ.? ಪ್ರತಿಭಟನೆಗೆ ಕರೆತಂದದ್ದು ನಮ್ಮ ಹಸುಗಳಿಗೆ ಅನ್ಯಾಯವಾಗಿದೆ. ಇನ್ನು ಗೋ ಶಾಲೆಯಲ್ಲಿ ಮೇವಿಲ್ಲದೆ ಹಸುಗಳು ಸಾಯುತ್ತಿವೆ. ಮೊದಲು ಅದನ್ನು ಹೋಗಿ ತಡಿಯಿರಿ ಅಂತ ರೈತರ ಆಕ್ರೋಶವನ್ನು ಹೊರಹಾಕಿದರು. ಬಳಿಕ ಪೊಲೀಸರು ಮಧ್ಯಪ್ರವೇಶ ಮಾಡಿ ಸಂಘದ ಸದಸ್ಯರನ್ನು ಪೊಲೀಸರು ಕರೆದೊಯ್ದದರು.

ಫ್ರೀಡಂ ಪಾರ್ಕ್‌ನಲ್ಲಿ ಗೋವುಗಳ ಪ್ರತಿಭಟನೆ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರತಿಭಟನೆಗೆ ಗೋವುಗಳನ್ನು ತರಲಾಗಿದ್ದು, ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

BJP Karnataka Protest

ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇವಲ ಜನತೆಗೆ ಮಾತ್ರವಲ್ಲ, ಜಾನುವಾರುಗಳಿಗೂ ಶಾಕ್‌ ನೀಡುತ್ತದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ಹೆಚ್ಚಳ, ಹಸು-ಎಮ್ಮೆ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂಬಿತ್ಯಾದಿ ಕಲರ್‌ ಕಲರ್‌ ಹೂವುಗಳನ್ನು ಕಿವಿ ಮೇಲೆ ಇಟ್ಟು ಅಧಿಕಾರಕ್ಕೆ ಬಂದು, ಈಗ ಸಾಲವನ್ನು ನೀಡುತ್ತಿಲ್ಲ, ಸಬ್ಸಿಡಿಯನ್ನೂ ಹೆಚ್ಚಿಸುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ. ಈಗ ರೈತರಿಗೆ ಹಾಲಿನ ಸಬ್ಸಿಡಿಯಾಗಿ 716 ಕೋಟಿ ರೂಪಾಯಿ ನೀಡಬೇಕಿದ್ದು. ಆ ಬಾಕಿ ಹಣವನ್ನೂ ನೀಡದೆ ಹಾಗೇ ಉಳಿಸಿಕೊಂಡಿದೆ ಎಂದು ಬಿಜೆಪಿ ಆಕ್ರೋಶವನ್ನು ಹೊರಹಾಕಿದೆ.

ಇದರ ಪರಿಣಾಮ ರಾಜ್ಯದಲ್ಲಿ ಹಾಲಿನ ಉತ್ಪಾದನೆಯು ಭಾರಿ ಪ್ರಮಾಣದಲ್ಲಿ ಕುಂಠಿತವಾಗಿದೆ. ಜನತೆಯ ಜತೆ ಜಾನುವಾರುಗಳ ಶಾಪವೂ ಸಹ ಸಿಎಂ ಸಿದ್ದರಾಮಯ್ಯ ಅವರಿಗೆ ತಟ್ಟುತ್ತದೆ ಎಂದು ಬಿಜೆಪಿ ನಾಯಕರು ಆಕ್ರೋಶವನ್ನು ಹೊರಹಾಕಿದ್ದಾರೆ.

BJP Karnataka Protest

ಪ್ರತಿಭಟನೆಗೆ ಬಂದ ಗೋವುಗಳು

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಗೋವುಗಳ ಪ್ರತಿಭಟನೆಯನ್ನು ನಡೆಸಲಾಗಿದೆ. “ಅನ್ನದಾತರಿಗೆ ಟೋಪಿ ಹಾಕಿರುವ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ” ಎಂಬಿತ್ಯಾದಿ ಪ್ಲೆಕಾರ್ಡ್‌ಗಳನ್ನು ಹಸುಗಳ ಕೊರಳಿಗೆ ಕಟ್ಟಿ ಪ್ರತಿಭಟನೆಯನ್ನು ನಡೆಸಲಾಗಿದೆ. ಆರಕ್ಕೂ ಹೆಚ್ಚು ಹಸುಗಳನ್ನು ತಂದಿರುವ ಬಿಜೆಪಿಗರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಶ್ ರೆಡ್ಡಿ, ಪಿ. ರಾಜೀವ್, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಕೆ.ಸಿ. ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗಿದೆ. ಬಿಜೆಪಿ ಮುಖಂಡ ತಮ್ಮೇಶ್ ಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಪಿ. ರಾಜೀವ್‌, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜನರಿಗೆ ಮಾತ್ರವಲ್ಲ, ದನಗಳಿಗೂ ಮೋಸ ಮಾಡುತ್ತಿದೆ. ರೈತರಿಗೆ ಕೊಡಬೇಕಾದ ಸಬ್ಸಿಡಿ ಹಣವನ್ನು 2023 ಜುಲೈನಿಂದ ಇಲ್ಲಿಯವರೆಗೆ ನೀಡಲಾಗಿಲ್ಲ. ಈಗ ಅದರ ಮೊತ್ತವೇ 716 ಕೋಟಿ ರೂಪಾಯಿ ಆಗಿದೆ. ಐಷಾರಾಮಿ ಚಾರ್ಟರ್‌ ಫ್ಲೈಟ್‌ನಲ್ಲಿ ಹೋಗಲು ನಿಮಗೆ ದುಡ್ಡಿದೆ. ಆದರೆ, ರೈತರಿಗೆ ಕೊಡಬೇಕಾದ ಹಣವನ್ನು ಕೊಡಲು ನಿಮ್ಮ ಬಳಿ ಆಗುವುದಿಲ್ಲವೇ? ನಾವು ಗೋವುಗಳನ್ನು ತೆಗೆದುಕೊಂಡು ವಿಧಾನಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ಹತ್ತು ಸಾವಿರ ದಂಡ ವಿಧಿಸಿದ ಕೋರ್ಟ್!

ಹಸು ಬಿಟ್ಟು ಬಿಜೆಪಿ ಕಾರ್ಯಕರ್ತರ ಬಂಧನ

ಈ ವೇಳೆ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ತೆರಳಿ ಅಲ್ಲಿ ಗೋವುಗಳ ಸಹಿತ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ನಾಯಕರು ಸಹಿತ ಕಾರ್ಯಕರ್ತರನ್ನು ತಡೆದ ಪೊಲೀಸರು, ಆ ಹಸುಗಳನ್ನು ಬಿಟ್ಟು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಹೀಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಕೆಲಕಾಲ ಹೈಡ್ರಾಮಾವೇ ನಡೆಯಿತು.

Exit mobile version