Site icon Vistara News

ಚಂಡೀಗಢ ಮೇಯರ್ ಎಲೆಕ್ಷನ್ ಗೆದ್ದ ಬಿಜೆಪಿ, ಇಂಡಿಯಾ ಕೂಟಕ್ಕೆ ಸೋಲು! ಹೈಕೋರ್ಟ್ ಮೊರೆ ಹೋದ ಆಪ್

BJP wins Chandigarh mayor election and AAP appealed to High Court

ಚಂಡೀಗಢ: ಚಂಡೀಗಢ ಮೇಯರ್ ಎಲೆಕ್ಷನ್‌ನಲ್ಲಿ (Chandigarh Mayor Election) ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ (BJP Party Candidate) ಮನೋಜ್ ಸೋನ್ಕರ್ ಅವರು ಗೆಲವು ಸಾಧಿಸಿದ್ದಾರೆ. ಆಪ್ ಮತ್ತು ಕಾಂಗ್ರೆಸ್ ಕೂಟದ (AAP-Congress Candidate) ಅಭ್ಯರ್ಥಿಯಾಗಿದ್ದ ಆಪ್‌ನ ಕುಲ್ದೀಪ್ ಕುಮಾರ್ ಅವರು ಸೋಲುಂಡಿದ್ದಾರೆ. ಈ ಮೂಲಕ, ಇಂಡಿಯಾ ಬ್ಲಾಕ್‌ಗೆ (INDIA Bloc) ಮೊದಲು ಸೋಲು ಎದುರಾಗಿದೆ. ಈ ಮಧ್ಯೆ, ಮೇಯರ್ ಎಲೆಕ್ಷನ್ ರಿಸಲ್ಟ್ ಪ್ರಶ್ನಿಸಿ ಆಪ್ ಪಂಜಾಬ್-ಹರ್ಯಾಣ ಹೈಕೋರ್ಟ್‌ (Punjab-Haryana High Court) ಮೊರೆ ಹೋಗಿದೆ. ಯಾವುದೇ ಕಾರಣ ನೀಡಿದೆ 8 ಮತಗಳನ್ನು ಅಸಿಂಧು ಘೋಷಿಸಿರುವುದನ್ನು ಆಪ್ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಆಪ್ ಮನವಿಯನ್ನು ಸ್ವೀಕರಿಸಿರುವ ಹೈಕೋರ್ಟ್, ನಾಳೆ ವಿಚಾರಣೆ ನಡೆಸಲಿದೆ.

ಬಿಜೆಪಿಯ ಸೋನ್ಕರ್ 16 ಮತಗಳನ್ನು ಪಡೆಯಲು ಯಶಸ್ವಿಯಾದರೆ, ಆಪ್‌ನ ಕುಲ್ದೀಪ್ ಕುಮಾರ್ ಅವರ 12 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರು. ಮತ ಎಣಿಕೆ ವೇಳೆ 8 ಮತಗಳನ್ನು ಅಸಿಂಧು ಎಂದು ಘೋಷಿಸಿಸಲಾಯಿತು. ಇದು ಆಪ್ ಮತ್ತು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಬಿಜೆಪಿಯು 14 ಕೌನ್ಸಿಲರ್‌ಗಳನ್ನು ಹೊಂದಿದ್ದರೆ, ಆಪ್ 14 ಮತ್ತು ಕಾಂಗ್ರೆಸ್‌ನ ಏಳು ಸದಸ್ಯರಿದ್ದಾರೆ. ಆದಾಗ್ಯೂ, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಫಲಿತಾಂಶವು ಪ್ರಕಟವಾಗುತ್ತಿದ್ದಂತೆ ಆಪ್ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಸಿಎಂ ಅವರು ಬಿಜೆಪಿಯು ಮೋಸ ಮಾಡುತ್ತಿದೆ ಆರೋಪಿಸಿದ್ದು, ನಡೆದ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಮೇಯರ್ ಚುನಾವಣೆಯಲ್ಲಿ ಬಿಜೆಪಿಯವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಅವರು ಸಾರ್ವತ್ರಿಕ ಚುನಾವಣೆ ಗೆಲ್ಲುವುದಕ್ಕಾಗಿ ಯಾವ ಹಂತಕ್ಕಾದರೂ ಹೋಗಬಲ್ಲರು. ಇದು ಆತಂಕಕಾರಿಯಾಗಿದೆ ಎಂದು ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.

ಆಪ್-ಕಾಂಗ್ರೆಸ್ ಮೈತ್ರಿಕೂಟವು ಕಾರ್ಯತಂತ್ರದಿಂದ ವಿವಿಧ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ಆಪ್ ಪ್ರತಿನಿಧಿಸುವ ಕುಮಾರ್ ಅವರು ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಹಿರಿಯ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಕುಲ್ಜೀತ್ ಸಂಧು ಮತ್ತು ಕಾಂಗ್ರೆಸ್‌ನ ಗುರುಪ್ರೀತ್ ಸಿಂಗ್ ಗಾಬಿ ಅವರ ನಡುವೆ ಸ್ಪರ್ಧೆ ಇದೆ. ಉಪ ಮೇಯರ್ ಸ್ಥಆನಕ್ಕೆ ಬಿಜೆಪಿಯ ರಾಜೀಂದೇರ್ ಸಿಂಗ್ ಹಾಗೂ ಕಾಂಗ್ರೆಸ್‌ನ ನಿರ್ಮಲಾ ದೇವಿ ಸ್ಪರ್ಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: BS Yediyurappa: ರೆಡ್ಡಿ, ಆಯನೂರು ಸೇರಿ ಪಕ್ಷ ಬಿಟ್ಟವರು ವಾಪಸ್‌ ಬರ್ತಾರೆ: ಬಿ.ಎಸ್.‌ ಯಡಿಯೂರಪ್ಪ

Exit mobile version