Site icon Vistara News

B L Shankar : ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿದ ಬಿ ಎಲ್ ಶಂಕರ್

BL shankar

#image_title

ಬೆಂಗಳೂರು: ಮಾಜಿ ಸಭಾಪತಿ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ (B L Shankar) ಅವರು ವಿಸ್ತಾರ ನ್ಯೂಸ್ ಕಚೇರಿಗೆ ಗುರುವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು, ವಿಸ್ತಾರ ಮೀಡಿಯಾ ಸಂಸ್ಥೆಯ ಹೊಸತನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಸ್ತಾರ ನ್ಯೂಸ್ ಸ್ಟುಡಿಯೊ ವಿಸ್ಮಯ ಮೂಡಿಸುವಂಥದ್ದು ಎಂದು ಬಿ ಎಲ್ ಶಂಕರ್ ಹೇಳಿದರು. ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಬಿ ಎಲ್ ಶಂಕರ್ ಅವರಿಗೆ ವಿಸ್ತಾರ ಮೀಡಿಯಾ ಸಂಸ್ಥೆಯ ಟಿವಿ ಚಾನೆಲ್, ವೆಬ್ ಸೈಟ್, ಯುಟ್ಯೂಬ್ ಚಾನೆಲ್, ವಿಸ್ತಾರ ಪ್ರಕಾಶನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.

ವಿಸ್ತಾರ ಟಿವಿ ಚಾನೆಲ್ ವಿಭಿನ್ನವಾಗಿದೆ ಮತ್ತು ಗುಣಮಟ್ಟದಿಂದ ಕೂಡಿದೆ. ವಿಸ್ತಾರ ಡಿಜಿಟಲ್ ಮತ್ತು ವಿಸ್ತಾರ ಯುಟ್ಯೂಬ್ ಚಾನೆಲ್ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿವೆ ಎಂದು ಬಿ ಎಲ್ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version