Site icon Vistara News

Bomb Threat : ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದೆ ಸುಹೈಬ್​ ಎಂಬಾತನ ಬಂಧನ

Bomb Threat

ಬೆಂಗಳೂರು : ಕೇರಳದ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಸಿಐಎಎಲ್) ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿದ್ದ ಏರ್ ಇಂಡಿಯಾ ಸಂಸ್ಥೆಯ ವಿಮಾನಕ್ಕೆ ಜೂನ್ 25 ರಂದು ಬಾಂಬ್ ಬೆದರಿಕೆ (Bomb Threat) ಬಂದಿತ್ತು. ವಿಮಾನವನ್ನು ವ್ಯಾಪಕ ತಪಾಸಣೆ ಮಾಡಿದ ಬಳಿಕ ಅದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು. ಬಾಂಬ್​ ಬೆದರಿಕೆ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದಾಗಿಯೂ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಭದ್ರತಾ ಸಿಬ್ಬಂದಿಗೆ ವಿಮಾನದಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಯಾವುದೇ ಅಪಾಯವಿಲ್ಲ ಎಂದು ತೀರ್ಮಾನಿಸಿದ ಬಳಿಕ ಯೋಜಿಸಿದಂತೆ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಜೂನ್ 25 ರಂದು ಮುಂಬೈನ ಏರ್ ಇಂಡಿಯಾ ಕಾಲ್ ಸೆಂಟರ್ ಗೆ ಕೊಚ್ಚಿನ್ ನಿಂದ ಲಂಡನ್ ಗೆ ತೆರಳುತ್ತಿದ್ದ ಎಐ ವಿಮಾನ 149 ಬಗ್ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೊಚ್ಚಿನ್ ನಲ್ಲಿರುವ ಏರ್ ಇಂಡಿಯಾ ಕಚೇರಿ ಮತ್ತು ವಿಮಾನ ನಿಲ್ದಾಣಕ್ಕೆ ಮುಂಜಾನೆ 1.22ಕ್ಕೆ ಕ್ಕೆ ಎಚ್ಚರಿಕೆಯನ್ನು ತಿಳಿಸಲಾಯಿತು ಎಂದು ಏರ್​ ಇಂಡಿಯಾ ಮೂಲಗಳು ತಿಳಿಸಿವೆ.

ಪ್ರೋಟೋಕಾಲ್​ಗಳ ಪ್ರಕಾರ, ಸಿಐಎಎಲ್​​ನಲ್ಲಿ ಬಾಂಬ್ ಬೆದರಿಕೆ ಮೌಲ್ಯಮಾಪನಾ ಸಮಿತಿ (ಬಿಟಿಎಸಿ) ಅನ್ನು ನಿಯೋಜಿಸಲಾಯಿತು. ಅವರ ತಪಾಸಣೆ ಬಳಿಕ ಹುಸಿ ಬಾಂಬ್​ ಎಂಬುದನ್ನು ಪತ್ತೆ ಹಚ್ಚಲಾಯಿತು ಎಂದು ಮೂಲಗಳು ತಿಳಿಸಿವೆ. ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್ (ಎಎಸ್​​ಜಿ -ಸಿಐಎಸ್ಎಫ್), ವಿಮಾನಯಾನ ಭದ್ರತಾ ಸಿಬ್ಬಂದಿ ಮತ್ತು ಇನ್​ಲೈನ್​ ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆಗಳು ಸಹ ಸಂಪೂರ್ಣ ಭದ್ರತಾ ತಪಾಸಣೆ ನಡೆಸಿದವು. ಕೊಚ್ಚಿನ್ ವಿಮಾನ ನಿಲ್ದಾಣ ಬಿಟಿಎಸಿಯ ಶಿಫಾರಸುಗಳ ಪ್ರಕಾರ ವಿಮಾನವನ್ನು ಪ್ರತ್ಯೇಕ ಪಾರ್ಕಿಂಗ್ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿದವು.

ಇದನ್ನೂ ಓದಿ: Pune Porsche crash : ಪೋರ್ಶೆ ಕಾರನ್ನು ಗುದ್ದಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನಿಗೆ ಬಂಧನದಿಂದ ಮುಕ್ತಿ ಕರುಣಿಸಿದ ಕೋರ್ಟ್​​

ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ನಂತರ ಹಾರಾಟಕ್ಕಾಗಿ ತೆರವುಗೊಳಿಸಲಾಯಿತು. ಚೆಕ್-ಇನ್ ಪ್ರಕ್ರಿಯೆಯು ಬೆಳಿಗ್ಗೆ 10:30 ಕ್ಕೆ ಪೂರ್ಣಗೊಂಡಿತು ಮತ್ತು ನಿಗದಿತ ನಿರ್ಗಮನವು ಬೆಳಗೆ 11:50 ಕ್ಕೆ ನಡೆದಿದೆ.

ತನಿಖೆ ಆರಂಭ

ಮುಂಬೈ ಕಾಲ್ ಸೆಂಟರ್​ಗೆ ಬೆದರಿಕೆಯನ್ನು ವರದಿ ಕರೆ ಮಾಡಿದ ವ್ಯಕ್ತಿಯನ್ನು 29 ವರ್ಷದ ಸುಹೈಬ್ ಎಂದು ಗುರುತಿಸಲಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಮೂಲದ ಸುಹೈಬ್ ಅದೇ ವಿಮಾನದಲ್ಲಿ ಪ್ರಯಾಣಿಸಲು ಸಜ್ಜಾಗಿದ್ದರು. ಕೊಚ್ಚಿನ್ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ನಿರ್ಗಮನ ಟರ್ಮಿನಲ್​​ನ ಎಎಸ್​​ಜಿ ಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ಚೆಕ್-ಇನ್ ಆಗಿದ್ದ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Exit mobile version