Site icon Vistara News

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Bomb Threat

ಹೈದರಾಬಾದ್: ದೇಶದ ಮೂಲೆ ಮೂಲೆಯಿಂದ ದಿನ ಬೆಳಗ್ಗೆದ್ದ ಬಾಂಬ್​ ಬೆದರಿಕೆಯ (Bomb Threat) ಸುದ್ದಿಗಳು ಹರದಿ ಬರುತ್ತಿವೆ. ಅಂತೆಯೇ ಮಂಗಳವಾರ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಅಧಿಕೃತ ನಿವಾಸ ಪ್ರಜಾ ಭವನಕ್ಕೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ‘ಡಯಲ್-100’ ಗೆ ಕರೆ ಮಾಡಿ ಬಾಂಬ್ ಇರಿಸಲಾಗಿದೆ ಮತ್ತು ಅದು ಹೈದರಾಬಾದ್ ನಗರದ ಪ್ರಜಾ ಭವನದಲ್ಲಿ ಸ್ಫೋಟಗೊಳ್ಳುತ್ತದೆ ಎಂದು ಎಚ್ಚರಿಸಿದ್ದ. ಬಳಿಕ ಅದು ಹುಸಿ ಬಾಂಬ್​ ಕರೆ ಎಂದು ಗೊತ್ತಾಗಿದೆ.

ಫೋನ್ ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಆವರಣದಲ್ಲಿ ಶೋಧ ನಡೆಸಿದ್ದಾರೆ.. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಮತ್ತು ಬಾಂಬ್ ಬೆದರಿಕೆ ಕರೆ ಹುಸಿ ಎಂದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಸಿ ಕರೆ ಹೈದರಾಬಾದ್​ನಿಂದ ಮಾಡಲಾಗಿದೆ. ಕರೆ ಮಾಡಿದವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಪ್ರಾಥಮಿಕ ತನಿಖೆಯ ಸಮಯದಲ್ಲಿ, ಕರೆ ಮಾಡಿದವರು ಬೆಳಿಗ್ಗೆಯಿಂದ ಇಂತಹ ಕರೆಗಳನ್ನು ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದಕ್ಕೂ ಮುನ್ನ ತೆಲಂಗಾಣದ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಿ.ಅನಸೂಯಾ ಅವರು ಪ್ರಜಾ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಉಪ ಮುಖ್ಯಮಂತ್ರಿಯ ಕುಟುಂಬ ಸದಸ್ಯರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಚರ್ಚಿಸಿದರು. ಸಂದರ್ಶಕರನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ಪ್ರಜಾ ಭವನದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಜಾ ಭವನದ ಒಂದು ಭಾಗವನ್ನು ವಾರಕ್ಕೆ ಎರಡು ಬಾರಿ ನಡೆಯುವ ಕುಂದುಕೊರತೆ ನಿವಾರಣಾ ಸಭೆಯಾದ ‘ಪ್ರಜಾ ವಾಣಿ’ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ.

Exit mobile version