Site icon Vistara News

Saweety Boora : ಕಾಂಗ್ರೆಸ್​ ಜೋಡೊಗೆ ಕೈಜೋಡಿಸಿದ್ದ ಬಾಕ್ಸರ್​ ಸ್ವೀಟಿ ಬೂರಾ ಬಿಜೆಪಿಗೆ

Boxer Saweety boora

ರೋಹ್ಟಕ್. ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಮತ್ತು ಚಿನ್ನದ ಪದಕ ವಿಜೇತೆ ಸ್ವೀಟಿ ಬೂರಾ (Saweety Boora) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಅವರೊಂದಿಗೆ ಪತಿ ಹಾಗೂ ಕಬಡ್ಡಿ ಆಟಗಾರ ದೀಪಕ್ ಹೂಡಾ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸ್ವೀಟಿ ರಾಹುಲ್ ಗಾಂಧಿ ನಡೆಸಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡವರು. ಈ ಯಾತ್ರೆ ದೌಸಾ ಮೂಲಕ ಹಾದುಹೋದಾಗ ಜತೆ ಸ್ವೀಟಿ ಹಾಗೂ ದೀಪಕ್ ಹೆಜ್ಜೆ ಹಾಕಿದ್ದರು.

ವಿಶೇಷವೆಂದರೆ ಈ ಸಮಯದಲ್ಲಿ ಮಾಜಿ ಕಾಂಗ್ರೆಸ್ ಸಚಿವ ಕೃಷ್ಣಮೂರ್ತಿ ಹೂಡಾ ಮತ್ತು ಮಾಜಿ ಶಾಸಕ ಆಜಾದ್ ಮೊಹಮ್ಮದ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದರು. ಬಿಜೆಪಿ ರಾಜ್ಯ ಅಧ್ಯಕ್ಷ ನಯಾಬ್ ಸೈನಿ ಮತ್ತು ಕ್ಯಾಬಿನೆಟ್ ಸಚಿವ ಜೆಪಿ ದಲಾಲ್ ಅವರಿಂದ ಪಕ್ಷದ ಸದಸ್ಯತ್ವ ಪಡೆದರು. ಬಾಕ್ಸರ್ ಸ್ವೀಟಿ ಬೂರಾ ಮತ್ತು ಪತಿ ದೀಪಕ್ ಹೂಡಾ ರೋಹ್ಟಕ್ನ ಸನ್ಸಿಟಿಯಲ್ಲಿರುವ ಭಾರತೀಯ ಜನತಾ ಪಕ್ಷದ ಹೊಸ ರಾಜ್ಯ ಕಚೇರಿಗೆ ತಲುಪಿ ಪಕ್ಷಕ್ಕೆ ಸೇರಿಕೊಂಡರು.

ಇದಕ್ಕೂ ಮುನ್ನ ಭಾನುವಾರ, ಸ್ವೀಟಿ ಬೂರಾ ಮತ್ತು ದೀಪಕ್ ಹೂಡಾ ಬಿಜೆಪಿಗೆ ಸೇರುವ ಬಗ್ಗೆ ಮಾಹಿತಿ ನೀಡುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ವೀಡಿಯೊದಲ್ಲಿ, ದೀಪಕ್ ಹೂಡಾ. ತಮ್ಮ ಜೀವನದ ಹೊಸ ಹಾದಿಯನ್ನು ಕಂಡುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಭಾವಿತರಾಗಿದ್ದಾರೆ. ಅದು 370 ನೇ ವಿಧಿಯನ್ನು ತೆಗೆದುಹಾಕುವುದು, ರಾಮ ಮಂದಿರ ನಿರ್ಮಾಣ, ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವುದು. ಅಥವಾ ಕ್ರೀಡಾ ಕ್ಷೇತ್ರದಲ್ಲಿ ಒದಗಿಸಲಾದ ಸೌಲಭ್ಯಗಳು ಮತ್ತು ಬಜೆಟ್ ಗಾತ್ರ ಹೆಚ್ಚಿಸಿದ ಬಿಜೆಪಿಯ ಕಾರ್ಯಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಭಾರತದ ವಿಶ್ವಕಪ್​ ಗೆಲುವಿಗೆ ಅಡ್ಡಗಾಲಿಕ್ಕಿದ ಹರ್ಜಸ್ ಸಿಂಗ್ ಯಾರು?, ಭಾರತಕ್ಕಿರುವ ನಂಟೇನು?

ಹಿಸಾರ್ ನಿವಾಸಿಯಾಗಿರುವ ಸ್ವೀಟಿ, ರಾಜಕೀಯ ಜೀವನದ ಇನ್ನಿಂಗ್ಸ್ ಪ್ರಾರಂಭಿಸಲಿದ್ದೇನೆ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ಪ್ರಯತ್ನದಿಂದಾಗಿ ವಿಶ್ವ ಭೂಪಟದಲ್ಲಿ ಭಾರತದ ಗೌರವ ಹೆಚ್ಚಿದೆ. ಅವರ ನಾಯಕತ್ವದಲ್ಲಿ ದೇಶ ಸೇವೆ ಮಾಡಲು ನನಗೆ ಅವಕಾಶ ಸಿಕ್ಕರೆ ಸದುಪಯೋಗಪಡಿಸಿಕೊಳ್ಳಲಿದ್ದೇನೆ ಎಂದು ಹೇಳಿದರು.

ಡಿಸೆಂಬರ್ 2022 ರಲ್ಲಿ, ಸ್ವೀಟಿ ಬೂರಾ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ತಮ್ಮ ರಾಜಕೀಯ ಯಾತ್ರೆಯನ್ನೂ ಆರಂಭಿಸಿದ್ದರು. ಭಾರತ್​ ಜೋಡೋ ದೌಸಾ ಮೂಲಕ ಹಾದುಹೋದಾಗ ರಾಹುಲ್ ಗಾಂಧಿ ಜತೆ ಸ್ವೀಟಿ ಹಾಗೂ ದೀಪಕ್ ಜತೆಯಾಗಿ ನಡೆದಿದ್ದರು. ಈ ಸಮಯದಲ್ಲಿ, ಅವರು ಮತ್ತು ರಾಹುಲ್ ಅವರ ಚಿತ್ರಗಳು ಸಹ ವೈರಲ್ ಆಗಿದ್ದವು. ಬಾಕ್ಸರ್ ಸ್ವೀಟಿ ಬೂರಾ ಜನವರಿ 10, 1993 ರಂದು ಹರಿಯಾಣದ ಹಿಸಾರ್ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ್ದಾರೆ.

Exit mobile version