ಬೆಂಗಳೂರು ; 2022 ರ ಡಿಸೆಂಬರ್ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant), ಮಾರ್ಚ್ 22 ರಿಂದ ಪ್ರಾರಂಭವಾಗಲಿರುವ ಐಪಿಎಲ್ 2024 (IPL 2024) ಆವೃತ್ತಿಯಲ್ಲಿ ಕ್ರಿಕೆಟ್ ಮರಳುವ ಹಾದಿಯಲ್ಲಿದ್ದಾರೆ. ವಿಶೇಷವೆಂದರೆ, ಪಂತ್ ತಮ್ಮ ಬಲ ಮೊಣಕಾಲಿನ ಎಲ್ಲಾ ಮೂರು ಪ್ರಮುಖ ಅಸ್ಥಿರಜ್ಜುಗಳ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಯಿತು. ಆದರೆ, ಅವರು ಅತಿ ವೇಗದಲ್ಲಿ ಸುಧಾರಿಸಿಕೊಂಡು ಐಪಿಎಲ್ನಲ್ಲಿ ಆಡಲು ಮುಂದಾಗಿದ್ದಾರೆ.
ಶಸ್ತ್ರ ಚಿಕಿತ್ಸೆ ಬಿಕ ವಿಕೆಟ್ ಕೀಪರ್-ಬ್ಯಾಟರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ವೈದ್ಯಕೀಯ ಚಿಕಿತ್ಸೆ ಹಾಗೂ ಪುನಶ್ಚೇತನಕ್ಕಾಗಿ ರಿಷಭ್ ಐಪಿಎಲ್, ಡಬ್ಲ್ಯುಟಿಸಿ ಫೈನಲ್, ಏಷ್ಯಾ ಕಪ್ ಮತ್ತು ವಿಶ್ವಕಪ್ ಸೇರಿದಂತೆ ಎಲ್ಲಾ ಪಂದ್ಯಗಳಿಂದ ವಂಚಿತರಾದರು. ಇದೀಗ ಅವರು ಕಣಕ್ಕೆ ಇಳಿಯಲು ಮುಂದಾಗಿದ್ದು, ಟೂರ್ನಿ ಆರಂಭಕ್ಕೆ ಒಂದು ತಿಂಗಳಿಗಿಂತ ಕಡಿಮೆ ಇರುವಾಗ ರಿಷಭ್ ಪಂತ್ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಹೆಚ್ಚು ಪ್ರೀತಿ ಹಂಚಿಕೊಳ್ಳಲು ಬಯಸಿದ್ದಾರೆ. ಅದಕ್ಕಾಗಿ ಅವರು 26 ವರ್ಷದ ಪಂತ್ ಸ್ಟಾರ್ ಸ್ಪೋರ್ಟ್ಸ್ನ ‘ಸ್ಟಾರ್ ನಹೀ ಫಾರ್’ ಉಪಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.
ಸ್ಮರಣೀಯಗೊಳಿಸುವ ಗುರಿ
“ಐಪಿಎಲ್ ಕೇವಲ ಕ್ರಿಕೆಟ್ಗೆ ಸಂಬಂಧಿಸಿದ್ದಲ್ಲ. ಇದು ಪ್ರತಿ ಪಂದ್ಯವನ್ನು ಸ್ಮರಣೀಯವಾಗಿಸುವ ಅಭಿಮಾನಿಗಳ ನೆನಪೂ ಆಗಿದೆ. ಸ್ಟಾರ್ ಸ್ಪೋರ್ಟ್ಸ್ನ ‘ಸ್ಟಾರ್ ನಹೀ ಫಾರ್’ ಉಪಕ್ರಮದೊಂದಿಗೆ, ನಾನು ಆಟದ ಉತ್ಸಾಹವನ್ನು ನೇರವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತೇನೆ. ಐಪಿಎಲ್ 2024 ರ ಸಮಯದಲ್ಲಿ ದೆಹಲಿಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಮತ್ತು ಒಟ್ಟಿಗೆ ಎಲ್ಲ ವಿಶೇಷ ನೆನಪುಗಳನ್ನು ಹಂಚಿಕೊಳ್ಳುತ್ತೇನೆ ” ಎಂದು ಪಂತ್ ಟ್ವೀಟ್ ಮಾಡಿದ್ದಾರೆ
ಇದನ್ನೂ ಓದಿ: IPL 2024 : ಆರ್ಸಿಬಿ ತಂಡದ ವೇಳಾಪಟ್ಟಿ, ಪಂದ್ಯದ ವಿವರಗಳು ಇಲ್ಲಿವೆ
ಹೈದರಾಬಾದ್ ಜೊತೆಗೆ ತಮಿಳುನಾಡಿನ ಸೇಲಂ ಮತ್ತು ಕೊಯಮತ್ತೂರಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕಾರ್ಯಕ್ರಮಗಳು ಅಭಿಮಾನಿಗಳು ಮತ್ತು ಅವರ ಕ್ರೀಡಾ ಐಕಾನ್ಗಳ ನಡುವೆ ಆಳ ಸಂಪರ್ಕ ನಿರ್ಮಿಸಿತ್ತು. ಹೈ ದರಾಬಾದ್ನಲ್ಲಿ ಎಂಎಸ್ಕೆ ಪ್ರಸಾದ್ ಮತ್ತು ಇರ್ಫಾನ್ ಪಠಾಣ್ ಮತ್ತು ತಮಿಳುನಾಡಿನಲ್ಲಿ ವಿಜಯ್ ಶಂಕರ್, ಸಾಯಿ ಕಿಶೋರ್, ಎಲ್ ಬಾಲಾಜಿ, ಟಿ ನಟರಾಜನ್ ಮತ್ತು ಶಾರುಖ್ ಖಾನ್ ಅವರಂತಹ ಕ್ರಿಕೆಟ್ ದಿಗ್ಗಜರನ್ನು ಭೇಟಿಯಾಗಲು 10,000 ಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರು.
ಸಿಎಸ್ಕೆ ತಂಡದ ಇನ್ನೊಬ್ಬ ಆಲ್ರೌಂಡರ್ ಗೆ ಗಾಯ; ಟೂರ್ನಿಗೆ ಮೊದಲೇ ಆಘಾತ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಪ್ರಾರಂಭವಾಗುವ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ಗಾಯದ ಪಟ್ಟಿ ಬೆಳೆಯುತ್ತಿದೆ. ಶಿವಂ ದುಬೆ ನಂತರ, ಅವರ ಸ್ಟಾರ್ ಆಲ್ರೌಂಡರ್ ರಚಿನ್ ರವೀಂದ್ರ ಮೊಣಕಾಲಿಗೆ ಗಾಯವಾಗಿದ್ದು, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ 20 ಪಂದ್ಯದಿಂದ ಹೊರಗುಳಿದಿದ್ದಾರೆ. ಬ್ಲ್ಯಾಕ್ ಕ್ಯಾಪ್ಸ್ನ ಅಧಿಕೃತ ಪೇಜ್ನಲ್ಲಿ ಆಟಗಾರನ ಆರೋಗ್ಯ ಸ್ಥಿತಿಯ ಬಗ್ಗೆ ಅಪ್ಡೇಟ್ ಮಾಡಲಾಗಿದೆ. ಐಪಿಎಲ್ ವೇಳಾಪಟ್ಟಿ ಘೋಷಣೆಯಾಗಿದ್ದು ಅವರ ಲಭ್ಯತೆ ಬಗ್ಗೆ ಖಾತರಿ ಇಲ್ಲದಂತಾಗಿದೆ.
“ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಪಂದ್ಯದ ನಂತರ ಎಡ ಮೊಣಕಾಲಿನ ನೋವಿನಿಂದಾಗಿ ರಚಿನ್ ರವೀಂದ್ರ ಈಡನ್ ಪಾರ್ಕ್ನಲ್ಲಿ ಇಂದು ರಾತ್ರಿ ನಡೆಯಲಿರುವ 2 ನೇ ಕೆಎಫ್ಸಿ ಟಿ 20 ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಮೂರನೇ ಟಿ 20 ಐಗೆ ಅವರ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಮುಂದಿನ ದಿನಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಮತ್ತು ಮೇಲ್ವಿಚಾರಣೆ ಮಾಡಲಾಗುವುದು” ಎಂದು ಮಾಹಿತಿ ನೀಡಲಾಗಿದೆ.
ಇನ್ನು ಒಂದು ತಿಂಗಳಲ್ಲಿ ಐಪಿಎಲ್ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ಸ್ಗೆ ಇದು ದೊಡ್ಡ ಹೊಡೆತವಾಗಲಿದೆ. ಹರಾಜಿನಲ್ಲಿನ ಸಿಎಸ್ಕೆ ಅವರನ್ನು 1.8 ಕೋಟಿ ರೂ.ಗೆ ಖರೀದಿಸಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ರಚಿನ್ ಆಟದ ಎರಡೂ ವಿಭಾಗಗಳಿಗೆ ಕೊಡುಗೆ ನೀಡಬಹುದು ಮತ್ತು ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.