Site icon Vistara News

Wimbledon 2024 : ಜೊಕೊವಿಕ್ ಮಣಿಸಿದ 2ನೇ ವಿಂಬಲ್ಡನ್​ ಟ್ರೋಫಿ ಗೆದ್ದ ಕಾರ್ಲೋಸ್ ಅಲ್ಕರಾಜ್

Carlos Alcaraz

ಬೆಂಗಳೂರು: ಭಾನುವಾರ ನಡೆದ ವಿಂಬಲ್ಡನ್​ 2024ನೇ (Wimbledon 2024) ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಸ್ಪೇನ್​​ ಕಾರ್ಲೋಸ್ ಅಲ್ಕರಾಜ್ 7 ಬಾರಿಯ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು 6-2, 6-2, 7-6 (7/4) ಸೆಟ್ ಗಳಿಂದ ಸೋಲಿಸಿ ವಿಂಬಲ್ಡನ್ ಪ್ರಶಸ್ತಿಯನ್ನು ಕಾಪಾಡಿಕೊಂಡರು. ಇದು ಅವರಿಗೆ ಸತತ ಎರಡನೇ ವಿಂಬಲ್ಡನ್ ವಿಜಯವಾಗಿದ್ದು, ಒಟ್ಟು ನಾಲ್ಮನೇ ಗ್ರ್ಯಾನ್​ ಸ್ಲಾಮ್ ಕಿರೀಟವಾಗಿದೆ. ಆಲ್ ಇಂಗ್ಲೆಂಡ್ ಕ್ಲಬ್​​ ಹುಲ್ಲು ಹಾಸಿನ ಮೇಲೆ ನಡೆಸ ಹಣಾಹಣಿಯು ಕಳೆದ ಆವೃತ್ತಿಯ ಫಲಿತಾಂಶದ ಪುನರಾವರ್ತನೆಯಾಗಿದೆ.

ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿಗಳನ್ನು ಸತತವಾಗಿ ಗೆದ್ದ ವಿಶ್ವದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಪೇನ್ ನ ಈ ಆಟಗಾರ ಪಾತ್ರರಾಗಿದ್ದಾರೆ. ವಿಶ್ವದ ಮೂರನೇ ಶ್ರೇಯಾಂಕಿತ ಕಾರ್ಲೊಸ್​, ಎರಡನೇ ಶ್ರೇಯಾಂಕದ ಜೊಕೊವಿಕ್​ ವಿರುದ್ದ ಪಾರುಪತ್ಯ ಸ್ಥಾಪಿಸಿದರು. ಅಲ್ಲದೆ, ಜೊಕೊವಿಕ್ ದಾಖಲೆಯ 25ನೇ ಗ್ರ್ಯಾನ್​ಸ್ಲಾಮ್ ಪ್ರಶಸ್ತಿ ಗೆದ್ದು ದಾಖಲೆಯ ನಿರ್ಮಿಸಲು ಬಿಡಲಿಲ್ಲ.

ಸೆಂಟರ್ ಕೋರ್ಟ್ ನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ ನಡೆದ ಫೈನಲ್​ ಪಂದ್ಯವು ಅಲ್ಕರಾಜ್​ಗೆ ಹೆಚ್ಚು ಸರಳವಾಗಿ ಕಾಣಿಡಿತು. ನೇರ ಮೂರು ಸೆಟ್​ಗಳ ಮೂಲಕ ಅವರು ವಿಜಯಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡರು. ಅಲ್ಕರಾಜ್ ಕಳೆದ ತಿಂಗಳು ಫ್ರೆಂಚ್ ಓಪನಲ್ಲಿಯೂ ಚಾಂಪಿಯನ್ ಆಗಿದ್ದರು. ಆವೆ ಮಣ್ಣಿನ ಅಂಗಣದಲ್ಲಿ ನಡೆದ ಆ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಸತತ ಎರಡನೇ ಟ್ರೋಫಿ ಗೆದ್ದು ಸಾಧನೆ ಮಾಡಿದರು. ಈ ಯುವ ಟೆನಿಸ್ ಪಟು 2022ರ ಯುಎಸ್ ಓಪನ್​ ಮೂಲಕ ತನ್ನ ಮೊದಲ ಗ್ರ್ಯಾನ್​ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಅದೇ ರೀತಿ ಪ್ರಮುಖ ಫೈನಲ್​ ಪಂದ್ಯಕ್ಕೆ ಪ್ರವೇಶಿಸಿದ ಬಳಿಕ 4-0 ಗೆಲುವು ಸೋಲಿನ ಅಂತರದ ಸಾಧನೆಯೂ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: Team India : ಆಸ್ಟ್ರೇಲಿಯಾ ಪ್ರವಾಸಕ್ಕೆ 18 ಸದಸ್ಯರ ಭಾರತ ‘ಎ’ ಮಹಿಳಾ ತಂಡ ಪ್ರಕಟ

ಇದೇ ವೇಳೆ ಬಲಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಬಲವಾದ ಪ್ರದರ್ಶನ ನೀಡಿದ್ದ 37 ವರ್ಷದ ಜೊಕೊವಿಕ್, ಎಂಟನೇ ವಿಂಬಲ್ಡನ್ ಪ್ರಶಸ್ತಿ ಮತ್ತು ಒಟ್ಟಾರೆ 25 ನೇ ಗ್ರ್ಯಾನ್​​ ಸ್ಲಾಮ್​ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದರು. ಆದರೆ ಅವರು ಆಸೆ ಕೈಗೂಡಲಿಲ್ಲ.

ಮೂರನೇ ಸೆಟ್ ನಲ್ಲಿ ಟೈಬ್ರೇಕರ್ತ ಮೊರೆ ಹೋಗಲಾಯಿತು. ಅಲ್ಲಿ ಕಾರ್ಲೊಸ್​ ಮುನ್ನಡೆ ಸಾಧಿಸಿದ ಸಂಭ್ರಮಿಸಿದರು. ಬಳಿಕ ಅವರು ಕೋಚ್​​ ಜುವಾನ್ ಕಾರ್ಲೋಸ್ ಫೆರೆರೊ ಮತ್ತು ಇತರರನ್ನು ತಬ್ಬಿಕೊಂಡರು. ಕೊನೆ ಸೆಟ್​ 14 ನಿಮಿಷಗಳಲ್ಲಿ ಕೊನೆಗೊಂಡಿತು.

Exit mobile version