ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಏಪ್ರಿಲ್ 1 ರಿಂದ ಪ್ರಾರಂಭವಾಗುವ 2024-25 ರ ಶೈಕ್ಷಣಿಕ ವರ್ಷಕ್ಕೆ 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು (CBSE Syllabus) ಬಿಡುಗಡೆ ಮಾಡಲಿದೆ. ಇದೇ ವೇಳೆ ಇತರ ತರಗತಿಗಳ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಿಬಿಎಸ್ಇ ಅಧಿಕಾರಿಗಳು ತಿಳಿಸಿದ್ದಾರೆ. 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು ಪ್ರಸ್ತುತ ಅಭಿವೃದ್ಧಿಯಲ್ಲಿವೆ ಮತ್ತು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಎನ್ಸಿಇಆರ್ಟಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ) ತಿಳಿಸಿದೆ.
ಎಲ್ಲ ಶಾಲೆಗಳು 2024-25ರ ಶೈಕ್ಷಣಿಕ ವರ್ಷದಿಂದ ಈ ಹೊಸ ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮಗಳನ್ನು ಅನುಸರಿಸಬಹುದು. ಇದರ ಪರಿಣಾಮವಾಗಿ, 2023 ರವರೆಗೆ ಎನ್ಸಿಇಆರ್ಟಿ ಪ್ರಕಟಿಸಿದ ಪಠ್ಯಪುಸ್ತಕಗಳ ಬದಲಿಗೆ 3 ಮತ್ತು 6 ನೇ ತರಗತಿಗಳಿಗೆ ಈ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಅನುಸರಿಸಲು ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಸಿಬಿಎಸ್ಇ ನಿರ್ದೇಶಕ (ಅಕಾಡೆಮಿಕ್ಸ್) ಜೋಸೆಫ್ ಇಮ್ಯಾನುಯೆಲ್ ಹೇಳಿದ್ದಾರೆ.
ಬ್ರಿಜ್ ಕೋರ್ಸ್ ಮಾರ್ಗಸೂಚಿ
ಹೆಚ್ಚುವರಿಯಾಗಿ 6ನೇ ತರಗತಿಗೆ ಬ್ರಿಡ್ಜ್ ಕೋರ್ಸ್ ಮತ್ತು 3 ನೇ ತರಗತಿಗೆ ಸಂಕ್ಷಿಪ್ತ ಮಾರ್ಗಸೂಚಿಗಳನ್ನು ಎನ್ಸಿಇಆರ್ಟಿ ಅಭಿವೃದ್ಧಿಪಡಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಹೊಸ ಬೋಧನಾ ಅಭ್ಯಾಸಗಳು ಮತ್ತು ಅಧ್ಯಯನದ ಕ್ಷೇತ್ರಗಳಿಗೆ ತಡೆರಹಿತ ಪರಿವರ್ತನೆಯನ್ನು ಸುಲಭಗೊಳಿಸುತ್ತದೆ. ಈ ಸಂಪನ್ಮೂಲಗಳನ್ನು ಎನ್ ಸಿಇಆರ್ ಟಿಯಿಂದ ಪಡೆದ ನಂತರ ಆನ್ ಲೈನ್ ನಲ್ಲಿ ಎಲ್ಲಾ ಶಾಲೆಗಳಿಗೆ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ :
“ಎನ್ಇಪಿ -2020 (ಹೊಸ ಶಿಕ್ಷಣ ನೀತಿ) ಯಲ್ಲಿ ಕಲ್ಪಿಸಲಾಗಿರುವ ಹೊಸ ಬೋಧನಾ ಕಲಿಕೆಯ ದೃಷ್ಟಿಕೋನಗಳೊಂದಿಗೆ ಅವರನ್ನು ಸಿದ್ದಗೊಳಿಸಲು ಮಂಡಳಿಯು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ” ಎಂದು ಜೋಸೆಫ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರ ಅನುಷ್ಠಾನದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣಕ್ಕಾಗಿ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ ಎನ್ಸಿಎಫ್-ಎಸ್ಇ) 2023 ಗೆ ಅನುಗುಣವಾಗಿ ಕೌನ್ಸಿಲ್ ಹೊಸ ಶಾಲಾ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ.
ಏಪ್ರಿಲ್ 1, 2024 ರಿಂದ ಪ್ರಾರಂಭವಾಗುವ 2024-25 ರ ಶೈಕ್ಷಣಿಕ ವರ್ಷಕ್ಕೆ ಪಠ್ಯಕ್ರಮ ಮತ್ತು ಇತರ ತರಗತಿಗಳ ಪಠ್ಯಪುಸ್ತಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜೋಸೆಫ್ ಹೇಳಿದ್ದಾರೆ.