Site icon Vistara News

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿಡಾರ್​​​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

high-speed road corridor

ಬೆಂಗಳೂರು: ಸರಕು ಸಾಗಾಟ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶ ಹಾಗೂ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ದೇಶಾದ್ಯಂತ ಹೊಸ ರಸ್ತೆ ಜಾಲವನ್ನು (High Speed Road Corridor) ಸೃಷ್ಟಿಸಲು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ಕೊಟ್ಟಿದೆ. ಅಂತೆಯೇ 50,655 ಕೋಟಿ ರೂ.ಗಳ ವೆಚ್ಚದಲ್ಲಿ 936 ಕಿ.ಮೀ ಉದ್ದದ 8ಎಂಟು ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೆ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

“ಸರಕು ಸಾಗಾಟದಲ್ಲಿ ವೇಗ ಹೆಚ್ಚಸಲು, ವಾಹನಗಳ ದಟ್ಟಣೆಯಿಂದ ಉಂಟಾಗುವ ಸಮಸ್ಯೆ ಕಡಿಮೆ ಮಾಡಲು ಮತ್ತು ದೇಶಾದ್ಯಂತ ರಸ್ತೆ ಸಂಪರ್ಕವನ್ನು ಹೆಚ್ಚಿಸಲು ಒಟ್ಟು 50,000 ಕೋಟಿ ರೂ.ಗಳ ವೆಚ್ಚದಲ್ಲಿ 936 ಕಿ.ಮೀ ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೆ ಕ್ಯಾಬಿನೆಟ್ ಇಂದು ಅನುಮೋದನೆ ನೀಡಿದೆ” ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಆರು ಪಥದ ಆಗ್ರಾ-ಗ್ವಾಲಿಯರ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ನಾಲ್ಕು ಪಥದ ಖರಗ್ಪುರ-ಮೊರೆಗ್ರಾಮ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ಆರು ಪಥದ ತರದ್ – ದೀಸಾ – ಮೆಹ್ಸಾನಾ – ಅಹಮದಾಬಾದ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ನಾಲ್ಕು ಪಥದ ಅಯೋಧ್ಯೆ ರಿಂಗ್ ರಸ್ತೆ, ರಾಯ್ಪುರ-ರಾಂಚಿ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್​ ಮತ್ತು ಪಥಲ್ಗಾಂವ್ ಮತ್ತು ಗುಮ್ಲಾ ನಡುವಿನ ಐದು ಪಥದ ರಸ್ತೆ , ಆರು ಪಥದ ಕಾನ್ಪುರ ರಿಂಗ್ ರಸ್ತೆ, ನಾಲ್ಕು ಪಥದ ಉತ್ತರ ಗುವಾಹಟಿ ಬೈಪಾಸ್ ಮತ್ತು ಅಸ್ತಿತ್ವದಲ್ಲಿರುವ ಗುವಾಹಟಿ ಬೈಪಾಸ್ ವಿಸ್ತರಣೆ ಹಾಗೂ ಪುಣೆ ಬಳಿಯ ನಾಸಿಕ್​ ಪಥ, ಕೇಡ್ ಕಾರಿಡಾರ್ ಇದರಲ್ಲಿ ಸೇರಿದೆ.

“140 ಕೋಟಿ ಭಾರತೀಯರು ಪ್ರಧಾನಿ ಮೋದಿಗೆ ಐತಿಹಾಸಿಕ ಜನಾದೇಶವನ್ನು ನೀಡಿದ್ದಾರೆ. ಅವರಿಗೆ ಧನ್ಯವಾದಗಳು. 60 ವರ್ಷಗಳ ನಂತರ ಸತತ ಮೂರನೇ ಅವಧಿಗೆ ಸರ್ಕಾರ ಅಧಿಕಾರಕ್ಕೆ ಮರಳಿದೆ. ವಾಧ್ವಾನ್​ ಬಂದರಿಗೂ 76,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು” ಎಂದು ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕ ಸಮೃದ್ಧಿಗೆ ಅಡಿಪಾಯವಾಗಿದೆ. ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ನಿರ್ಣಾಯಕವಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡುವ ಪ್ರತಿ ರೂಪಾಯಿ ಜಿಡಿಪಿಯ ಮೇಲೆ ಸುಮಾರು 2.5-3.0 ಪಟ್ಟು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಹೂಡಿಕೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಒಟ್ಟು ಬಂಡವಾಳ ಹೂಡಿಕೆ 2013-14ರಲ್ಲಿ 50,000 ಕೋಟಿ ರೂ.ಗಳಿಂದ 2023-24ರಲ್ಲಿ ಸುಮಾರು 3.1 ಲಕ್ಷ ಕೋಟಿ ರೂ.ಗೆ 6 ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದಿನ ಯೋಜನೆ ಆಧಾರಿತ ಅಭಿವೃದ್ಧಿ ವಿಧಾನಕ್ಕೆ ಹೋಲಿಸಿದರೆ, ಸ್ಥಿರ ಮಾನದಂಡಗಳು, ಬಳಕೆದಾರರ ಅನುಕೂಲತೆ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿ ಸರ್ಕಾರವು ಕಾರಿಡಾರ್ ಆಧಾರಿತ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ವಿಧಾನವನ್ನು ಅಳವಡಿಸಿಕೊಂಡಿದೆ.

Exit mobile version