ಬೆಂಗಳೂರು: 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ (Champions Trophy 2025 ) ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 65 ಮಿಲಿಯನ್ ಡಾಲರ್ (544 ಕೋಟಿ ರೂಪಾಯಿ) ಬಜೆಟ್ ಅನ್ನು ಬಿಡುಗಡೆಗೆ ಅನುಮೋದನೆ ನೀಡಿದೆ. ಇದರಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳೂ ಸೇರಿಕೊಂಡಿವೆ. ಯಾಕೆಂದರೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕಾರಣ ಹೆಚ್ಚುವರಿ ಮೊತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಲಾಗಿದೆ. ಪ್ರತ್ಯೇಕ ಸ್ಥಳವನ್ನು ವ್ಯವಸ್ಥೆ ಮಾಡಿದರೆ ಬಜೆಟ್ ವೆಚ್ಚ ಹೆಚ್ಚಾಗುತ್ತದೆ. ಭದ್ರತಾ ಕಾಳಜಿಗಳಿಂದಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಆತಿಥೇಯ ರಾಷ್ಟ್ರ ತನ್ನ ಮನಸ್ಸನ್ನು ಬದಲಾಯಿಸಿಲ್ಲ. ಹೀಗಾಗಿ ಕುತೂಹಲ ಮೂಡಿದೆ.
ICC approved a budget of approximately $65 million at its AGM for Champions Trophy 2025. [Cricbuzz]
— Johns. (@CricCrazyJohns) August 3, 2024
– This budget includes the costs associated with staging a few matches outside of Pakistan if India declines to travel. pic.twitter.com/LkBTNR6orS
ಕೊಲಂಬೊದಲ್ಲಿ ನಡೆದ ಕಳೆದ ಎಜಿಎಂ ಸಭೆಯಲ್ಲಿ, ಈ ವಿಷಯವನ್ನು ವಿವಿಧ ವೇದಿಕೆಗಳಲ್ಲಿ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ನಡೆಯಲಿಲ್ಲ. ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಲು ಐಸಿಸಿ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅದನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ದೃಢಪಡಿಸಿದೆ. ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್ನಲ್ಲಿನ ತನ್ನ ಸೌಲಭ್ಯಗಳನ್ನು ಅಭಿವೃದ್ದಿ ಮಾಡಲು ಪಾಕಿಸ್ತಾನಕ್ಕೆ ದೊಡ್ಡ ಮೊತ್ತವನ್ನು ನಿಗದಿಪಡಿಸಲಾಗಿದೆ. ಅದೇ ಬಜೆಟ್ ಅನ್ನು ಪಾಕಿಸ್ತಾನದ ಹೊರಗೆ ಆಯೋಜಿಸುವ ಪಂದ್ಯಗಳಿಗೂ ಬಳಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಪಿಸಿಬಿ ಆತಿಥೇಯ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಈವೆಂಟ್ ಬಜೆಟ್ ಅನ್ನು ರಚಿಸಲು ಮ್ಯಾನೇಜ್ಮೆಂಟ್ನೊಂದಿಗೆ ಕೆಲಸ ಮಾಡಿದೆ. ಅದನ್ನು ಅನುಮೋದನೆಗೆ ಸಲ್ಲಿಸಲಾಗಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವುದು ಅಗತ್ಯವಿದ್ದರೆ ಈವೆಂಟ್ ಅನ್ನು ಆಯೋಜಿಸುವ ವೆಚ್ಚದ ಹೆಚ್ಚಳದ ಅಂದಾಜನ್ನು ಮ್ಯಾನೇಜ್ಮೆಂಟ್ ಅನುಮೋದಿಸಿದೆ” ಎಂದು ಸಿಇಸಿಯ ತಿಳಿಸಿದೆ.
ಮಾರ್ಚ್ 2024 ರಲ್ಲಿ ಪಾಕಿಸ್ತಾನದಲ್ಲಿ ಯೋಜನಾ ಸಭೆ ಮತ್ತು ಉದ್ದೇಶಿತ ಪಂದ್ಯದ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಎಲ್ಲಾ ಮೂರು ಸ್ಥಳಗಳಲ್ಲಿ ಗಮನಾರ್ಹ ಪ್ರಮಾಣದ ನವೀಕರಣ ನಡೆಯುತ್ತಿವೆ” ಎಂದು ಅದು ಹೇಳಿದೆ.
ಇದನ್ನೂ ಓದಿ: IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ
ಆಟಗಾರರಿಗೆ ಮೂಲಸೌಕರ್ಯ ಮತ್ತು ಇತರ ಅಗತ್ಯ ವಸ್ತುಗಳ ಅಭಿವೃದ್ಧಿಗೆ 35 ಮಿಲಿಯನ್ ಡಾಲರ್, ಭಾಗವಹಿಸುವಿಕೆ ಮತ್ತು ಬಹುಮಾನದ ಹಣಕ್ಕಾಗಿ 20 ಮಿಲಿಯನ್ ಡಾಲರ್ ಮತ್ತು ಉತ್ಪಾದನೆಗಾಗಿ ಉಳಿದ 10 ಮಿಲಿಯನ್ ಡಾಲರ್ ನಿಗದಿಪಡಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಐಸಿಸಿ ಪಂದ್ಯಾವಳಿಯ ಕರಡು ವೇಳಾಪಟ್ಟಿ ಸಹ ವಿನ್ಯಾಸಗೊಳಿಸಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿ 20 ರಂದು ಆಡಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದೆ.