ರಾಯ್ಪುರ: ಛತ್ತೀಸ್‌ಗಢದಲ್ಲಿ ಬೋರ್‌ವೆಲ್‌ನೊಳಕ್ಕೆ ಆಕಸ್ಮಿಕವಾಗಿ ಬಿದ್ದಿದ್ದ 11 ವರ್ಷದ ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ಎತ್ತಲಾಗಿದೆ. 110 ಗಂಟೆಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ಬಾಲಕನನ್ನು ರಕ್ಷಿಸಲಾಯಿತು ಎಂದು ಸಿಎಂ ಭೂಪೇಶ್ ಬಘೇಲ್ ತಿಳಿಸಿದ್ದಾರೆ.
ಛತ್ತೀಸ್‌ಗಢದ ಪಿಹ್ರಿಡ್ ಗ್ರಾಮದಲ್ಲಿ 11 ವರ್ಷದ ಬಾಲಕ ರಾಹುಲ್ ಸಾಹು ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಶುಕ್ರವಾರ ಬಿದ್ದಿದ್ದ. ರಕ್ಷಣಾ ತಂಡದ ಸಾಹಸ, ಸ್ಥಳೀಯರ ಪ್ರಾರ್ಥನೆಯಿಂದ ರಾಹುಲ್ ಸಾಹು ಸುರಕ್ಷಿತವಾಗಿ ಪಾರಾಗಿದ್ದಾನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ 500ಕ್ಕೂ ಹೆಚ್ಚು ಸಿಬ್ಬಂದಿ ಈ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಬಾಲಕ ಕೊಳವೆ ಬಾವಿಗೆ ಬಿದ್ದ ಪರಿಣಾಮ ಬಳಲಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬೋರ್‌ವೆಲ್ ಪಕ್ಕ 70 ಅಡಿ ಆಳದ ಗುಂಡಿ ತೆಗೆದ ಬಳಿಕ 15 ಅಡಿ ಸುರಂಗ ಕೊರೆದು ಬಾಲಕನನ್ನು ರಕ್ಷಿಸಲಾಯಿತು.