Site icon Vistara News

IPL 2024 : ಧೋನಿ ಬಾರಿಸಿದ ಅಬ್ಬರದ 20 ರನ್​ಗಳ ಅಂತರದಲ್ಲಿ ಮುಂಬೈ ತಂಡವನ್ನು ಸೋಲಿಸಿದ ಚೆನ್ನೈ

IPL 2024

ಮುಂಬಯಿ: ಮತೀಶ್​ ಪತಿರಾಣಾ (4 ವಿಕೆಟ್​, 28 ರನ್​​) ಅವರ ಮಾರಕ ಬೌಲಿಂಗ್ ಹಾಗೂ ಋತುರಾಜ್ ಗಾಯಕ್ವಾಡ್​ (69 ರನ್​, 40 ಎಸೆತ, 5 ಫೋರ್, 5 ಸಿಕ್ಸರ್​) , ಶಿವಂ ದುಬೆ (66 ರನ್​, 38 ರನ್​,10 ಫೋರ್​, 2 ಸಿಕ್ಸರ್​ ) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್​ 2024ನೇ (IPL 2024) 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ. ಅಂದ ಹಾಗೆ ಚೆನ್ನೈ ಪರ ಕೊನೇ ನಾಲ್ಕು ಎಸೆತಗಳನ್ನು ಎದುರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ​ 20 ರನ್​ಗಳನ್ನು ಬಾರಿಸಿದ್ದರು. ಅದರಲ್ಲಿ 3 ಸಿಕ್ಸರ್​ಗಳಿದ್ದವು. ಅದೇ ರನ್​ಗಳ ಅಂತರದಿಂದ ಚೆನ್ನೈ ಗೆದ್ದು ಬೀಗಿದ್ದು ವಿಶೇಷ. ಆಧರೆ, ಮುಂಬಯಿ ಪರ ಏಕಾಂಗಿ ಹೋರಾಟ ನಡೆಸಿ ಅಮೋಘ 105 ರನ್ ಬಾರಿಸಿದ ರೋಹಿತ್ ಶರ್ಮಾ ಅವರ ಶತಕದ ಹೋರಾಟ ವ್ಯರ್ಥಗೊಂಡಿತು.

ಈ ಗೆಲುವು ಚೆನ್ನೈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ನಾಲ್ಕನೆಯದ್ದು. ಅದೇ ರೀತಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ನಾಲ್ಕನೇ ಸೋಲು. ಹಾರ್ದಿಕ್ ಪಾಂಡ್ಯ ಬಳಗ ತವರಿನಲ್ಲಿ ನಡೆದ ಈ ಹಿಂದಿನ ಎರಡು ಪಂದ್ಯಗಳನ್ನು ಗೆದಿದ್ದರೆ ಮೂರನೇ ಪಂದ್ಯದಲ್ಲಿ ಸೋಲು ಕಂಡಿತು. ಅಲ್ಲದೆ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಗೆಲುವಿನ ಪಾರಮ್ಯದ ಅಂತರ ಕಡಿಮೆಯಾಯಿತು ಒಟ್ಟು 36 ಪಂದ್ಯಗಳಲ್ಲಿ ಮುಂಬೈ 20 ರಲ್ಲಿ ಗೆದ್ದಿದ್ದರೆ, ಚೆನ್ನೈ 17 ಪಂದ್ಯಗಳಲ್ಲಿ ಗೆದ್ದಂತಾಯಿತು.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡದ ಅತ್ಯುತ್ತಮವಾಗಿ ಬ್ಯಾಟ್ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಳ್ಳುವಾಗ 6 ವಿಕೆಟ್​ ನಷ್ಟಕ್ಕೆ 186 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Hardik Pandya : ಕೊಹ್ಲಿ ಮನವಿಗೆ ಕಿಮ್ಮತ್ತಿಲ್ಲ; ಪಾಂಡ್ಯನನ್ನು ಮತ್ತೆ ಗೇಲಿ ಮಾಡಿದ ಮುಂಬೈ ಅಭಿಮಾನಿಗಳು

ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಬಡ್ತಿ ಪಡೆದುಕೊಂಡ ಅಜಿಂಕ್ಯ ರಹಾನೆ 8 ಎಸೆತ ಎದುರಿಸಿ 5 ರನ್ ಬಾರಿಸಿ ಔಟಾದರು. ಚೆನ್ನೈನ ಆರಂಭಿಕ ಪಂದ್ಯಗಳಲ್ಲಿ ಮಿಂಚಿದ್ದ ನ್ಯೂಜಿಲ್ಯಾಂಡ್ ಆಟಗಾರ ರಚಿನ್ ರವೀಂದ್ರ 21 ರನ್​ ಗಳಿಗೆ ತಮ್ಮ ಆಟ ಕೊನೆಗೊಳಿಸಿದರು.

ಋತುರಾಜ್​- ದುಬೆ ಭರ್ಜರಿ ಜತೆಯಾಟ

60 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡ ಚೆನ್ನೈ ತಂಡಕ್ಕೆ ಆ ಬಳಿಕ ಋತುರಾಜ್ ಗಾಯಕ್ವಾಡ್ ಹಾಗೂ ಶಿವಂ ದುಬೆ ನೆರವಾದರು. ಋತುರಾಜ್​ 40 ಎಸೆತಕ್ಕೆ 69 ರನ್​ ಬಾರಿಸಿದರು. ಅವರ ಇನಿಂಗ್ಸ್​ನಲ್ಲಿ 5 ಫೋರ್ ಹಾಗೂ 5 ಸಿಕ್ಸರ್​ಗಳಿದ್ದವು. ಅದೇ ರೀತಿ ಶಿವಂ ದುಬೆ 38 ಎಸೆತಕ್ಕೆ 66 ರನ್ ಬಾರಿಸಿದರು. ಅವರು 10 ಫೋರ್​ ಹಾಗೂ 2 ಸಿಕ್ಸರ್ ಚಚ್ಚಿದರು. ಈ ಜೋಡಿ ಮೂರನೇ ವಿಕೆಟ್​ಗೆ 90 ರನ್​ಗಳ ಜತೆಯಾಟವಾಡಿದರು. ಇವರಿಬ್ಬರ ಆಟದಿಂದಾಗಿ ತಂಡ ದೊಡ್ಡ ಮೊತ್ತದತ್ತ ಸಾಗಿತು.

ಧೋನಿ 4 ಎಸೆತಕ್ಕೆ 20 ರನ್​

ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಆಡಲು ಬಂದು ಮಹೇಂದ್ರ ಸಿಂಗ್ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಕೇವಲ 4 ಎಸೆತ ಬಳಸಿಕೊಂಡು 3 ಸಿಕ್ಸರ್​ ಬಾರಿಸಿದರು. ಅವರ ವಿಸ್ಫೋಟಕ ಬ್ಯಾಟಿಂಗ್​​ನಿಂದಾಗಿ ಚೆನ್ನೈ ತಂಡ 200ಕ್ಕಿಂತಲೂ ಅಧಿಕ ಮೊತ್ತ ಪೇರಿಸಿತು. ಮುಂಬಯಿ ಪರ ಪಾಂಡ್ಯ 2 ವಿಕೆಟ್​ ಪಡೆದರು.

ರೋಹಿತ್​ ಭರ್ಜರಿ ಆಟ

ಗುರಿ ಬೆನ್ನಟ್ಟಲು ಆರಂಭಿಸಿದ ಮುಂಬೈ ತಂಡದ ಪರ ರೋಹಿತ್ ಶರ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಿಂದಲೇ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ ಅವರು ಕೆಚ್ಚೆದೆಯ ಹೋರಾಟ ನೀಡಿದರು. ಇಶಾನ್ ಕಿಶನ್ ಜತೆಗೂಡಿದ ಅವರು ಮೊದಲ ವಿಕೆಟ್​ಗೆ ತಂಡಕ್ಕೆ 71 ರನ್ ತಂದುಕೊಟ್ಟರು. ಆದರೆ ಇಶಾನ್ ಔಟಾದ ಬಳಿಕ ಮುಂಬಯಿ ಪತನ ಶುರುವಾಯಿತು. ಸೂರ್ಯಕುಮಾರ್​ ಯಾದವ್​ ಶೂನ್ಯಕ್ಕೆ ಔಟಾದರು. ನಂತರ ಬಂದ ತಿಲಕ್ ವರ್ಮಾ 20 ಎಸೆತಕ್ಕೆ 31 ರನ್ ಬಾರಿಸಿದರು. ಮತ್ತೊಂದು ಬಾರಿ ವೈಫಲ್ಯ ಕಂಡ ನಾಯಕ ಹಾರ್ದಿಕ್ ಪಾಂಡ್ಯ 6 ಎಸೆತಕ್ಕೆ 3 ರನ್ ಮಾಡಿದರೆ ಟಿಮ್ ಡೇವಿಡ್​ 13 ರನ್​ ಕೊಡುಗೆ ಕೊಟ್ಟರು. ರೊಮಾರಿಯೊ ಶಫರ್ಡ್​ 1 ರನ್ ಗೆ ಔಟಾದರು.

ಚೆನ್ನೈ ಪರ ಮಹೀಶ್ ಪತಿರಾಣಾ .. ವಿಕೆಟ್ ಪಡೆದು ಚೆನ್ನೈ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

Exit mobile version