Site icon Vistara News

Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

Chennai Police commissioner

ಚೆನ್ನೈ: ತಮಿಳುನಾಡಿನ ಬಿಎಸ್​ಪಿ ಪಕ್ಷದ ಮುಖ್ಯಸ್ಥ ಕೆ. ಆರ್ಮ್​ಸ್ಟ್ರಾಂಗ್ ಅವರನ್ನು ಬರ್ಬರ ಕೊನೆಯಾದ ಕೆಲವೇ ದಿನಗಳ ಬಳಿಕ ತಮಿಳುನಾಡು ಸರ್ಕಾರ, ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ (Chennai Police commissioner) ಸಂದೀಪ್ ರಾಯ್ ರಾಥೋಡ್ ಅವರನ್ನು ವರ್ಗಾವಣೆ ಮಾಡಿದೆ. ಸಂದೀಪ್ ರಾಯ್ ರಾಥೋಡ್ ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಎ.ಅರುಣ್ ಅವರನ್ನು ಸೋಮವಾರ ನೇಮಿಸಲಾಗಿದೆ.

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಅಮುದಾ ಹೊರಡಿಸಿದ ಆದೇಶದ ಪ್ರಕಾರ, ಐಪಿಎಸ್ ಸಂದೀಪ್ ರೈ ರಾಥೋಡ್ ಅವರನ್ನು ಹುದ್ದೆಯಿಂದ ಇಳಿಸುವ ಮೂಲಕ ಎ.ಅರುಣ್ ಅವರನ್ನು ಗ್ರೇಟರ್ ಚೆನ್ನೈನ ಎಡಿಜಿಪಿ / ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಐಪಿಎಸ್ ರಾಜೀವ್ ಕುಮಾರ್ ನೇತೃತ್ವದ ಚೆನ್ನೈನ ಪೊಲೀಸ್ ತರಬೇತಿ ಕಾಲೇಜಿನ ಡಿಜಿಪಿಯಾಗಿ ಅವರನ್ನು ನೇಮಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಡೇವಿಡ್ಸನ್ ದೇವಸಿರ್ವಥ ಅವರನ್ನು ಈಗ ಅರುಣ್ ಅವರ ಬದಲಿಗೆ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿಯಾಗಿ ನೇಮಿಸಲಾಗಿದೆ. ಗೃಹ ಇಲಾಖೆಯ ನೇತೃತ್ವವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಹಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚೆನ್ನೈನಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ರಾಥೋಡ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು/

ಆರ್ಮ್​ಸ್ಟ್ರಾಂಗ್​ ಅವರನ್ನು ಅವರ ಬೆಂಬಲಿಗರಂತೆ ಸೋಗು ಹಾಕಿಕೊಂಡು ಬಂದ ಆರು ದುಷ್ಕರ್ಮಿಗಳು ಶುಕ್ರವಾರ ಕೊಚ್ಚಿ ಕೊಲೆ ಮಾಡಿದ್ದರು. ಅಪರಾಧ ಮಾಡಿದ ನಂತರ ದಾಳಿಕೋರರು ಬೈಕ್ ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಕೊಲೆಯ ತನಿಖೆ ನಡೆಸುತ್ತಿರುವ ಪೊಲೀಸರು ಅಪರಾಧಕ್ಕೆ ಸಂಬಂಧಿಸಿದಂತೆ ಈವರೆಗೆ ಹನ್ನೊಂದು ಜನರನ್ನು ಬಂಧಿಸಿದ್ದಾರೆ. ಆರ್ಮ್​​ಸ್ಟ್ರಾಂಗ್ ಸೂಚನೆಯ ಮೇರೆಗೆ ಒಂದು ವರ್ಷದ ಹಿಂದೆ ಹತ್ಯೆಗೀಡಾದ ದರೋಡೆಕೋರ ಆರ್ಕಾಟ್ ಸುರೇಶ್ ಹತ್ಯೆಗೆ ಸಂಬಂಧಿಸಿದ ಸೇಡಿನ ಕೊಲೆಯಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Indecent Behaviour: ಕಾಲೇಜು ಯುವತಿಯವರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್‌ ಆಗಿದ್ದವ ಪೊಲೀಸ್‌ ವಶಕ್ಕೆ

ಹತ್ಯೆಗೀಡಾದ ಬಿಎಸ್ಪಿ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಗೆ ಭೇಟಿ ನೀಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಅಪರಾಧದ ಹಿಂದಿನ ನಿಜವಾದ ಅಪರಾಧಿಗಳನ್ನು ತಮಿಳುನಾಡು ಪೊಲೀಸರು ಬಂಧಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ನಾನು ರಾಜ್ಯ ಸರ್ಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ದುರ್ಬಲ ವರ್ಗಗಳು ಸುರಕ್ಷಿತವಾಗಿರಬೇಕು. ಸರ್ಕಾರ ಗಂಭೀರವಾಗಿದ್ದರೆ ಆರೋಪಿಗಳನ್ನು ಬಂಧಿಸಬಹುದಿತ್ತು. ಹಾಗೆ ಆಗದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

Exit mobile version