Site icon Vistara News

Chikkaballapur News : ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ

Chikkaballapur News

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ(Chikkaballapur News ) ವೀರಪ್ಪಲ್ಲಿ ಗ್ರಾಮದಲ್ಲಿ ಒಂದೇ ವಯಸ್ಸಿನ ನಾಲ್ವರು ಮೃತಪಟ್ಟಿರುವ ಘಟನೆ ಸ್ಥಳೀಯರ ಆತಂತಕ್ಕೆ ಕಾರಣವಾಗಿದೆ. ಮೃತಪಟ್ಟವರೆಲ್ಲರೂ 70 ವರ್ಷ ದಾಟಿದವರಾಗಿದ್ದಾರೆ. ಹೀಗಾಗಿ ವಯೋವೃದ್ಧರಿಗೆ ಆತಂಕ ಹೆಚ್ಚಾಗಿದೆ. ಆದರೆ, ಸಾಂಕ್ರಾಮಿಕ ರೋಗದಿಂದ ಅವರ ಮೃತಪಟ್ಟಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟು ಹಿರಿಯ ವಯಸ್ಸಿನವರ ಬಗ್ಗೆ ಕಾಳಜಿ ವಹಿಸಿದ್ದಾರೆ.

ಗಂಗಮ್ಮ,(70), ಮುನಿನಾರಾಯಣಮ್ಮ(74), ಲಕ್ಷ್ಮಮ್ಮ (70), ನರಸಿಂಹಪ್ಪ (75) ಮೃತಪಟ್ಟವರು. ಎಲ್ಲರೂ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಆದರೆ, ಎಲ್ಲರೂ ಒಂದೇ ವಯಸ್ಸಿನವರು ಮೃತಪಡುತ್ತಿರುವುದು ಸ್ಥಳೀಯರ ಪಾಲಿಗೆ ವಿಶೇಷ ಎನಿಸಿದೆ. ಒಂದೇ ವಯಸ್ಸಿನವರು ಅನಾರೋಗ್ಯಕ್ಕೆ ಒಳಗಾಗುಗುವುದು ಯಾಕೆ. ಏನಾದರೂ ಸಮಸ್ಯೆ ಇದೆಯೇ ಎಂಬುದಾಗಿ ಅವರೆಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಮೃತಪಟ್ಟವರೆಲ್ಲರೂ ಕಲುಷಿತ ನೀರು ಸೇವನೆ ಮಾಡಿ ಅಸ್ವಸ್ಥಗೊಂಡಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ಹೇಳುತ್ತಿದ್ದಾರೆ. ಗ್ರಾಮದ ಹಲವರಲ್ಲಿ ಅದೇ ಲಕ್ಷಣ ಕಂಡು ಬಂದಿದೆ. ಆದರೆ ಅವರೆಲ್ಲರೂ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ, ಹೆಚ್ಚು ವಯಸ್ಸಿನವರು ಬದುಕುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಆದರೆ ವೈದ್ಯರ ಮಾತನ್ನು ತಕ್ಷಣಕ್ಕೆ ಗ್ರಾಮಸ್ಥರು ನಂಬುತ್ತಿಲ್ಲ.

ಇದನ್ನೂ ಓದಿ: Murder News : ಖಾಸಗಿ ಕ್ಷಣದ ಫೋಟೋಗಳನ್ನಿಟ್ಟು ಬೆದರಿಕೆ ಹಾಕುತ್ತಿದ್ದವನನ್ನು ಕೊಲೆ ಮಾಡಿದ ವಿವಾಹಿತ ಮಹಿಳೆ

ಅರಿವು ಮೂಡಿಸಿದ ವೈದ್ಯರು

ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೂ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸ್ಥಳಕ್ಕೆ ಡಿಎಚ್​ಒ ,ಇಒ ,ಟಿಎಚ್​​ ಒ, ಡಿ ಎಸ್ ಒ , ಡಿಎಂಒ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರೆಲ್ಲರೂ ಹೆದರಿದ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ್ಯ ತುಂಬುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಗ್ರಾಮದ ಸರ್ಕಾರಿ ಶಾಲೆಯಲ್ಲೇ ಬೀಡು ಬಿಟ್ಟಿರುವ ವೈದ್ಯಕೀಯ ಸಿಬ್ಬಂದಿ ಪ್ರಕರಣಗಳ ಬಗ್ಗೆ ಗಮನ ಹರಿಸಿದ್ದಾರೆ.

Exit mobile version