Site icon Vistara News

Lok Sabha Election : ಭಾರತದ ಚುನಾವಣೆ ವೇಳೆ ಕುತಂತ್ರಿ ಚೀನಾ ಸೈಬರ್ ಅಟ್ಯಾಕ್​; ಮೈಕ್ರೊಸಾಫ್ಟ್​ ಆರೋಪ

Lok Sabha Electon

ಬೆಂಗಳೂರು : ಕುತಂತ್ರಿ ಚೀನಾ (China) ಜಾಗತಿಕವಾಗಿ ಶಾಂತಿಯನ್ನು ಹಾಳು ಮಾಡಲು ಪ್ರತಿ ಬಾರಿಯೂ ಯತ್ನಿಸುತ್ತಿದೆ. ತನ್ನ ಪ್ರತಿಸ್ಪರ್ಧಿ ದೇಶಗಳ ಚುನಾವಣೆಯಲ್ಲಿ ಕೈಯಾಡಿಸುವ ಮೂಲಕ ಅಲ್ಲೆಲ್ಲ ಶಾಂತಿ ಕದಡುವ ಯತ್ನವನ್ನೂ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆ (Lok Sabha Election) ವೇಳೆಯೂ ಜನರ ನಡುವೆ ಕಂದಕ ಸೃಷ್ಟಿಸಲು ಚೀನಾ ಯತ್ನಿಸುತ್ತಿದೆ ಎಂಬುದಾಗಿ ಜಾಗತಿಕ ಟೆಕ್ ದೈತ್ಯ ಮೈಕ್ರೊಸಾಫ್ಟ್​ ಹೇಳಿದೆ. ಅದಕ್ಕಾಗಿ ಕೃತಕ ಬುದ್ಧಿಮತ್ತೆ ತಾಂತ್ರಿಕತೆಯನ್ನು ಬಳಸುತ್ತಿದೆ ಎಂಬುದಾಗಿ ನುಡಿದಿದೆ.

ಚುನಾವಣೆ ವೇಳೆ ಜನರ ನಡುವೆ ವಿಭಜನೆ ಮಾಡಲು ಸೋಶಿಯಲ್​ ಮೀಡಿಯಾ ಪೋಸ್ಟ್​​ಗಳನ್ನು ಮಾಡಲಿದೆ ಎಂದು ಮೈಕ್ರೋಸಾಫ್ಟ್​ ಊಹಿಸಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲು ಮತದಾರರನ್ನು ಹೆಚ್ಚು ವಿಭಜಿಸುವ ಕೆಲಸ ಮಾಡಿದ್ದನ್ನು ಇದಕ್ಕೆ ಉದಾಹರಣೆಯಾಗಿದೆ ನೀಡಿದೆ. ವಿಶ್ವದಾದ್ಯಂತ ತನ್ನ ದುಷ್ಕೃತ್ಯಗಳನ್ನು ಹೆಚ್ಚಿಸಲು ಚೀನಾ ಎಐ-ರಚಿಸಿದ ವಿಡಿಯೊಗಳ ಪ್ರಸಾರ ಹೆಚ್ಚಿಸಿದೆ. ತನ್ನ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಎಐ ತಾಂತ್ರಿಕತೆ ಬಳಸುತ್ತಿದೆ ಎಂದು ಹೇಳಿದೆ.

ಮೈಕ್ರೋಸಾಫ್ಟ್ ಥ್ರೆಟ್ ಅನಾಲಿಸಿಸ್ ಸೆಂಟರ್ (ಎಂಟಿಎಸಿ) ಪ್ರಕಟಿಸಿದ ಇತ್ತೀಚಿನ ಪೂರ್ವ ಏಷ್ಯಾ ವರದಿಯಲ್ಲಿ ಚೀನಾದ ಕುಕೃತ್ಯ ಬಯಲಾಗಿದೆ. ಚೀನಾದ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಭಾರತದ ಜನರ ಮನಸ್ಸಲ್ಲಿ ತಲ್ಲಣ ಮೂಡಿಸುವಂತ ವಿಷಯಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುವಂತೆ ಮಾಡಲಿದೆ.

ಇದನ್ನೂ ಓದಿ: Rajnath Singh : ಭಾರತ ವಿರೋಧಿಗಳು ಪಾಕ್​ನಲ್ಲಿ ಅಡಗಿದರೂ ನುಗ್ಗಿ ಹೊಡೆಯುವೆವು; ರಾಜನಾಥ್ ಸಿಂಗ್​ ಎಚ್ಚರಿಕೆ

ಇತ್ತೀಚಿನ ತಿಂಗಳುಗಳಲ್ಲಿ ಚೀನಾದ ಎಐ-ರಚಿಸಿದ ಕಂಟೆಂಟ್​ಗಳು ಹೆಚ್ಚಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಮೆರಿಕ, ಭಾರತ ಸೇರಿದಂತೆ ಎಲ್ಲ ಸ್ಥಳಗಳಲ್ಲಿ ವಿಭಜನೆ ತಂತ್ರ ಬಳಸುತ್ತಿದೆ. ನವೆಂಬರ್ 2023 ರಲ್ಲಿ ಅಮೆರಿಕದ ಕೆಂಟುಕಿಯಲ್ಲಿ ರೈಲು ಹಳಿ ತಪ್ಪಿದೆ ಎಂಬ ದೃಶ್ಯ. ಆಗಸ್ಟ್ 2023 ರಲ್ಲಿ ಮೌಯಿ ಕಾಡ್ಗಿಚ್ಚು ಆಗಿದೆ ಎಂಬ ದೃಶ್ಯ, ಜಪಾನಿನ ಪರಮಾಣು ತ್ಯಾಜ್ಯನೀರಿನ ವಿಲೇವಾರಿ ಎಂಬ ದೃಶ್ಯ, ಭಾರತದಲ್ಲಿ ಜನಾಂಗೀಯ ಉದ್ವಿಗ್ನತೆ ಎಂಬ ಕಟ್ಟಕತೆಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ರೂಪಿಸಿ ಹರಿಯ ಬಿಡುತ್ತಿದೆ. ಇದು ಚುನಾವಣೆ ಮೇಲೆ ಪ್ರಭಾವ ಬೀರಲಿ ಎಂಬುದೇ ಅವರ ಉದ್ದೇಶವಾಗಿದೆ.

ಚೀನಾದ ಭೌಗೋಳಿಕ ರಾಜಕೀಯ ಆದ್ಯತೆಗಳು ಬದಲಾಗದೆ ಉಳಿದಿವೆ. ಆದರೆ ಅದು ಬೇರೆ ದೇಶಗಳ ರಾಜಕೀಯದಲ್ಲಿ ಕೈಹಾಕುವ ಕೆಲಸ ಬಿಟ್ಟಿಲ್ಲ.

ಸ್ಟಾರ್ಮ್ -1376 ಎಂದು ಕರೆಯುವ ಗುಂಪು ಈ ಕಾರ್ಯಾಚರಣೆ ಮಾಡುತ್ತಿದೆ. ಸ್ಪಾಮೌಫ್ಲಾಜ್ ಮತ್ತು ಡ್ರ್ಯಾಗನ್ ಬ್ರಿಡ್ಜ್ ಎಂದೂ ಕರೆಯಲಾಗುತ್ತದೆ.

Exit mobile version