Site icon Vistara News

Chow Chow Bath : ‘ಚೌ ಚೌ ಬಾತ್’ ಸಿನಿಬಜಾರ್​​ ಡಿಜಿಟಲ್ ಥಿಯೇಟರ್​​ನಲ್ಲಿ ಬಿಡುಗಡೆ

'Chow Chow Bath'

ಬೆಂಗಳೂರು: ಕೇಂಜ ಚೇತನ್​ ಕುಮಾರ್ ನಿರ್ದೇಶನದ ಚೌ ಚೌ ಬಾತ್’ (Chow Chow Bath) ಈ ವರ್ಷ ಬಿಡುಗಡೆಗೊಂಡಿರುವ ಚೆಂದದ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಒಂದಷ್ಟು ಪ್ರಯೋಗಾತ್ಮಕ ಅಂಶಗಳು, ಪ್ರೇಕ್ಷಕರನ್ನೇ ತನ್ನೊಳಗಿಳಿಸಿಕೊಂಡು ಕರೆದೊಯ್ಯುವ ಗುಣದ ದೃಷ್ಯದಿಂದ ಕಳೆಗಟ್ಟಿಕೊಂಡಿದ್ದ ಚಿತ್ರ `ಚೌ ಚೌ ಬಾತ್’. ಅತ್ಯತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದ್ದ ಚೌ ಚೌ ಬಾತ್ ಇದೀಗ ಸಿನಿ ಬಜಾರ್​ ಎಂಬ ಡಿಜಿಟಲ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿದೆ.

ಸಿನಿ ಬಜಾರ್ ನಲ್ಲಿ ಬಿಡುಗಡೆಗೊಂಡ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಐವತ್ತು ದಿನಗಳ ಕಾಲ ಈ ಸಿನಿಮಾ ಸಿನಿ ಬಜಾರಿನಲ್ಲಿ ಪ್ರದರ್ಶನ ಕಾಣಲಿದೆ. ಆರಂಭದಿಂದಲೂ ಚೌ ಚೌ ಬಾತ್ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಯಶ ಕಂಡಿದ್ದೀಗ ಇತಿಹಾಸ. ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾದ್ದೊಂದು ಸಮ್ಮೋಹಕ ಶೈಲಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರು.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರೇಕ್ಷಕರಿಂದಲೇ ಈ ಚಿತ್ರ ಮೆಚ್ಚುಗೆ ಗಳಿಸಿಕೊಂಡಿತ್ತು. ಇಂಥಾ ಸದಭಿಪ್ರಾಯ ಕೇಳಿ ಸಿನಿಮಾ ಮಂದಿರಗಳಲ್ಲಿ ನೋಡಬೇಕಂದುಕೊಂಡು ಸಾಧ್ಯವಾಗದವರು, ಸಿನಿ ಬಜಾರ್ ಡಾಟ್ ಕಾಮ್ ನಲ್ಲಿ ಚೌ ಚೌ ಬಾತ್ ನ ಅಸಲೀ ಸವಿಯನ್ನು ಆಸ್ವಾದಿಸುವ ಅವಕಾಶವೀಗ ಒದಗಿ ಬಂದಿದೆ.

ಇದನ್ನೂ ಓದಿ: Maarige Daari : ‘ಮಾರಿಗೆ ದಾರಿ” ಫಸ್ಟ್ ಲುಕ್ ಟೀಸರ್ ಬಿಡುಗಡೆ, ಇಲ್ಲಿದೆ ವಿಡಿಯೊ

ಇದು ಹೈಪರ್ ಲಿಂಕ್ ರೊಮ್ಯಾಂಟಿಕ್ ಜಾನರಿನ ಚಿತ್ರ. ಕನ್ನಡದ ಮಟ್ಟಿಗಿದು ಅಪರೂಪದ ಜಾನರ್. ಮೂರು ವಿಭಿನ್ನ ಪ್ರೇಮ ಕಥನಗಳನ್ನು ತೆರೆದಿಡುವ ಚೌ ಚೌ ಬಾತ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ. ಹೀಗೊಂದು ಅಭಿಪ್ರಾಯ ನೋಡಿದವರಿಂದಲೇ ಮೂಡಿಕೊಂಡಿದೆ. ಸನಾತನಯ್ ಪಿಕ್ಚರ್ಸ್ ಮತ್ತು ಕಾಮನಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿದೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ `ಚೌ ಚೌ ಬಾತ್’ ಚಿತ್ರ ಮೂಡಿ ಬಂದಿದೆ.

Exit mobile version