ಲಾಸ್‌ಏಂಜಲೀಸ್: ಜಾಗತಿಕವಾಗಿ ಖ್ಯಾತಿ ಗಳಿಸಿರುವ ಓಪನ್‌ಹೈಮರ್ (Oppenheimer) ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರಿಗೆ 2024ನೇ ಸಾಲಿನ ಆಸ್ಕರ್ (Oscars 2024) ಪ್ರಶಸ್ತಿ ದೊರೆತಿದೆ. ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕ್ರಿಸ್ಟೋಫರ್ ನೋಲನ್ ಅವರು ಇದೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಡಂಕಿರ್ಕ್ (Dunkirk) ಸಿನಿಮಾ ನಿರ್ದೇಶನಕ್ಕಾಗಿ 2018ರಲ್ಲಿ ಕ್ರಿಸ್ಟೋಫರ್ ನೋಲನ್ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಆದರೆ, ಅವರಿಗೆ ಪ್ರಶಸ್ತಿ ಲಭಿಸಿರಲಿಲ್ಲ. ಆದರೆ, ಈ ಬಾರಿ ಕ್ರಿಸ್ಟೋಫರ್ ನೋಲನ್ ಅವರು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
What a night 🔥 pic.twitter.com/MmHGXz34Y6
— Christopher Nolan Art & Updates (@NolanAnalyst) March 11, 2024
ಓಪನ್‌ಹೈಮರ್ ಸಿನಿಮಾವು ಹಲವು ಜಾಗತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಷ್ಟೇ ಅಲ್ಲ, ʻಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ʼಫಿಲ್ಮ್ ಅವಾರ್ಡ್ಸ್ 2024ರಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
Congratulations on your win for Best Directing, Christopher Nolan! #Oscars pic.twitter.com/sVsU31eYir
— The Academy (@TheAcademy) March 11, 2024
ಕ್ರಿಸ್ಟೋಫರ್ ನೊಲನ್ ನಿರ್ದೇಶನದ ಓಪನ್‌ಹೈಮರ್ ಭಾರತದಲ್ಲಿ ಬಿಡುಗಡೆಗೊಂಡಿದ್ದಾಗ ಮಿಷನ್ ಇಂಪಾಸಿಬಲ್ 7ರ ದಾಖಲೆಯನ್ನು ಮುರಿದು ಹಾಕಿತ್ತು. ಓಪನ್‌ಹೈಮರ್ ಸಿನಿಮಾ ಭಾರತದಲ್ಲಿ ಬಿಡುಗಡೆಯಾದ ದಿನದಂದೇ 13 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿತ್ತು. ಓಪನ್‌ಹೈಮರ್ʼ ಸಿನಿಮಾವು ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ. ರೆಬಾರ್ಟ್ ʻಓಪನ್‌ಹೈಮರ್ʼ ಅವರ ಜೀವನ ಚರಿತ್ರೆಯ ಕತೆಯಾಗಿದೆ. ʻಓಪನ್‌ಹೈಮರ್ʼ ಅವರು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಆವಿಷ್ಕರಿಸಲು ಸಹಾಯ ಮಾಡಿದ್ದರು. ಅವರ ಜೀವನದ ಕುರಿತಾಗಿ ಈಗ ಬಿಡುಗಡೆಯಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: Oscars 2024: ಓಪನ್‌ಹೈಮರ್ ನಟ ಸಿಲಿಯನ್ ಮರ್ಫಿಗೆ ಆಸ್ಕರ್ ಪ್ರಶಸ್ತಿ ಗರಿ!
ನಟ ಸಿಲಿಯನ್ ಮರ್ಫಿ ಅವರು ಈ ಸಿನಿಮಾದಲ್ಲಿ ಓಪನ್‌ಹೈಮರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ನಟ ಮ್ಯಾಟ್ ಡ್ಯಾಮನ್ ಅವರು ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿದ್ದ ಜನರಲ್ ಲೆಸ್ಲಿ ಗ್ರೋವ್ಸ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಮಿಲಿ ಬ್ಲಂಟ್ ಅವರು ಓಪನ್ಹೈಮರ್ ಅವರ ಪತ್ನಿ ಕ್ಯಾಥರೀನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ