ಬೆಂಗಳೂರು: ಮಂಗಳವಾರ ಮುಂಜಾನೆ ನಡೆದ ಟಿ20 ವಿಶ್ವ ಕಪ್ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿತ್ತು. ಪಂದ್ಯದ ವೇಳೆ ಮಳೆ ಬಂದ ಕಾರಣ ಡಕ್ವರ್ತ್ (Frank Duckworth) ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ ಡಕ್ವರ್ತ್ ನಿಯಮದ ಪ್ರಕಾರ 19 ಓವರ್ಗಳಿಗೆ 114 ರನ್ ಮಾಡುವ ಗುರಿ ನೀಡಲಾಗಿತ್ತು. ಆದರೆ ಬಾಂಗ್ಲಾದೇಶ ತಂಡ 8 ರನ್ಗಳಿಂದ ಸೋತಿತ್ತು. ಇಲ್ಲಿ ಅಪಘಾನಿಸ್ತಾನ ತಂಡಕ್ಕೆ ನೆರವಾಗಿದ್ದು ಡಕ್ವರ್ತ್ ನಿಯಮ. ಇಂಥ ಅಮೋಘ ನಿಯಮದ ಸಹ ಕರ್ತೃ ಇಂಗ್ಲಿಷ್ ಸಂಖ್ಯಾಶಾಸ್ತ್ರಜ್ಞ ಫ್ರಾಂಕ್ ಡಕ್ವರ್ತ್ (84) ಮಂಗಳವಾರ ನಿಧನ ಹೊಂದಿದ್ದಾರೆ. ಈ ವಿಶೇಷ ದಿನದಂದು ಅವರು ನಿಧನದ ಸುದ್ದಿ ಪ್ರಕಟಗೊಂಡಿರುವುದು ವಿಶೇಷ. ಅ
ಮಳೆ ಪೀಡಿತ ಕ್ರಿಕೆಟ್ ಪಂದ್ಯಗಳ ಫಲಿತಾಂಶಗಳನ್ನು ನಿರ್ಧರಿಸಲು ಡಕ್ವರ್ತ್ ಮತ್ತು ಸಹ ಸಂಖ್ಯಾಶಾಸ್ತ್ರಜ್ಞ ಟೋನಿ ಲೂಯಿಸ್ ರೂಪಿಸಿದ ಡಕ್ವರ್ತ್-ಲೂಯಿಸ್ ಪ್ರಸ್ತುತ ಚಾಲ್ತಿಯಲ್ಲಿದೆ. ಐಸಿಸಿ ಅದಕ್ಕೆ ಮಾನ್ಯತೆ ನೀಡಿದೆ. ಈ ವಿಧಾನವನ್ನು ಮೊದಲ ಬಾರಿಗೆ 1997 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಳಸಲಾಯಿತು. 2001 ರಲ್ಲಿ ಮಳೆಯಿಂದ ಮೊಟಕುಗೊಂಡ ಪಂದ್ಯಗಳಲ್ಲಿ ಪರಿಷ್ಕೃತ ಗುರಿ ನಿಗದಿಪಡಿಸುವ ಪ್ರಮಾಣಿತ ವಿಧಾನವಾಗಿ ಐಸಿಸಿ ಡಿಎಲ್ಎಸ್ನ್ನು ಅಳವಡಿಸಿಕೊಂಡಿತು. ಅಂದ ಹಾಗೆ ಡಕ್ವರ್ತ್ ಅವರು ಜೂನ್ 21ಕ್ಕೆ ಮೃತಪಟ್ಟಿದ್ದಾರೆ. ಆದರೆ ವಿಷಯ ಪ್ರಕಟಗೊಂಡಿರುವುದು ಜೂನ್ 25ರಂದು ಎಂಬುದು ವಿಶೇಷ.
ಇದನ್ನೂ ಓದಿ: T20 World Cup : ಅಫಘಾನಿಸ್ತಾನ ತಂಡದ ನಾಯಕ ರಶೀದ್ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ತಾಲಿಬಾನ್ ನಾಯಕ
ಡಕ್ವರ್ತ್ ಮತ್ತು ಲೂಯಿಸ್ ಅವರ ನಿವೃತ್ತಿಯ ನಂತರ ಈ ವಿಧಾನವನ್ನು ಡಕ್ವರ್ತ್-ಲೂಯಿಸ್-ಸ್ಟರ್ನ್ ವಿಧಾನ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಬಳಕೆಯಲ್ಲಿರುವ ನಿಯಮಕ್ಕ ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್ ಸ್ಟರ್ನ್ ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ.
ಡಕ್ವರ್ತ್ ಮತ್ತು ಲೂಯಿಸ್ ಇಬ್ಬರಿಗೂ ಜೂನ್ 2010 ರಲ್ಲಿ ಎಂಬಿಇ (ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್) ಗೌರವ ನೀಡಲಾಗಿದೆ. ಡಿಎಲ್ಎಸ್ ವಿಧಾನವು ಸಂಕೀರ್ಣ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಾಗಿದೆ. ಇದು ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲು ಉಳಿದಿರುವ ವಿಕೆಟ್ಗಳು ಮತ್ತು ಕಳೆದುಕೊಂಡ ಓವರ್ನಂಥ ಅನೇಕ ಅಂಶಗಳನ್ನು ನೀಡುತ್ತದೆ.