Site icon Vistara News

Colin Munro : ನ್ಯೂಜಿಲ್ಯಾಂಡ್​ ಟಿ20 ಸ್ಪೆಷಲಿಸ್ಟ್​ ಅಟಗಾರ ನಿವೃತ್ತಿ; ಈ ಆಟಗಾರನ ಸಾಧನೆಗಳ ವಿವರ ಇಲ್ಲಿದೆ

Colin Munro

ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್​ ತಂಡದ ಟಿ20 ಸ್ಪೆಷಲಿಸ್ಟ್ ಹಾಗೂ ವಿನಾಶಕಾರಿ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ ಕಾಲಿನ್ ಮನ್ರೊ ಶುಕ್ರವಾರ (ಮೇ 10) ಅಂತರರಾಷ್ಟ್ರೀಯ ಕ್ರಿಕೆಟ್ ಅಖಾಡದಿಂದ ನಿರ್ಗಮಿಸಿದ್ದಾರೆ. ಮುಂಬರುವ ಟಿ20 ವಿಶ್ವ ಕಪ್​ನಲ್ಲಿ ಅವಕಾಶ ಪಡೆಯದ ಅವರು ನಿವೃತ್ತಿ ಘೋಷಿಸಿದ್ದಾರೆ. 2020 ರಲ್ಲಿ ಬೇ ಓವಲ್​ನಲ್ಲಿ ಭಾರತ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಕೊನೆಯ ಬಾರಿಗೆ ಬ್ಲ್ಯಾಕ್​ ಕ್ಯಾಪ್ಟ್​​ ತಂಡವನ್ನು ಅವರು ಪ್ರತಿನಿಧಿಸಿದ್ದರು. ಈ ಡೈನಾಮಿಕ್ ಎಡಗೈ ಬ್ಯಾಟ್ಸ್ಮನ್, ನ್ಯೂಜಿಲೆಂಡ್ ಕ್ರಿಕೆಟ್​​ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು 65 ಟಿ 20, 57 ಏಕದಿನ ಮತ್ತು ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಮನ್ರೊ 3,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ ಮತ್ತು ಏಳು ವಿಕೆಟ್​ಗಳನ್ನು ಪಡೆದಿದ್ದಾರೆ.

ನ್ಯೂಜಿಲ್ಯಾಂಡ್​ ತಂಡದ (ಬ್ಲ್ಯಾಕ್​ ಕ್ಯಾಪ್ಟ್​) ಜೆರ್ಸಿ ಧರಿಸಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಕಾಲಿನ್ ಮನ್ರೊ, ತಮ್ಮ ಅಂತಾರಾಷ್ಟ್ರೀಯ ಪ್ರಯಾಣವನ್ನು ಕೊನೆಗೊಳಿಸಲು ಇದು ಸೂಕ್ತ ಕ್ಷಣ ಎಂದು ಹೇಳಿದ್ದಾರೆ. “ಬ್ಲ್ಯಾಕ್ ಕ್ಯಾಪ್ಸ್ ಪರ ಆಡುವುದು ಯಾವಾಗಲೂ ನನ್ನ ವೃತ್ತಿಜೀವನದ ವಿಶೇಷ ಕ್ಷಣವಾಗಿದೆ. ಎಲ್ಲಾ ಸ್ವರೂಪಗಳ 123 ಪಂದ್ಯಗಳಲ್ಲಿ ಆ ಜರ್ಸಿಯನ್ನು ಧರಿಸಿರುವುದು ನನಗೆ ಅಪಾರ ಹೆಮ್ಮೆ ತರುವ ಸಾಧನೆಯಾಗಿದೆ” ಎಂದು ಹೇಳಿದ್ದಾರೆ.

ಮನ್ರೊ ಅವರ ಕ್ರಿಕೆಟ್ ಪಯಣ 2006 ರ ಐಸಿಸಿ ಅಂಡರ್ 19 ವಿಶ್ವಕಪ್​ನಲ್ಲಿ ಪ್ರಾರಂಭವಾಗಿತ್ತು. ನಂತರ ಅವರು 2012-13 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಹಿರಿಯರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

2016 ಮತ್ತು 2019 ರ ನಡುವೆ ಟಿ 20 ಮತ್ತು ಏಕದಿನ ಪಂದ್ಯಗಳಲ್ಲಿ ಬ್ಲ್ಯಾಕ್ ಕ್ಯಾಪ್ಸ್​​ ತಂಡಕ್ಕೆ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ವೈಟ್-ಬಾಲ್ ಕ್ರಿಕೆಟ್​ನಲ್ಲಿ ತಮ್ಮನ್ನು ತಾವು ಪರಿಗಣಿಸಲೇಬೇಕಾದ ಆಟಗಾರನಾಗಿ ರೂಪುಗೊಂಡರು 2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.

ಯಶಸ್ವಿ ಆಟಗಾರ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವ ಮುನ್ರೊ, ನ್ಯೂಜಿಲೆಂಡ್​ ತಂಡದ ಅತ್ಯಂತ ಯಶಸ್ವಿ ಟಿ20 ಬ್ಯಾಟರ್​ಗಳಲ್ಲಿ ಒಬ್ಬರಾಗಿ ತಮ್ಮ ಪರಂಪರೆ ಸೃಷ್ಟಿಸಿದ್ದರು. ಪ್ರಸ್ತುತ ಅವರು ಟಿ 20 ಪಂದ್ಯಗಳಲ್ಲಿ ಬ್ಲ್ಯಾಕ್ ಕ್ಯಾಪ್ಸ್​​ ತಂಡ ಪರ ಆರನೇ ಅತಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಪ್ರಭಾವಶಾಲಿ 31 ರ ಸರಾಸರಿ ಮತ್ತು 156.4 ಸ್ಟ್ರೈಕ್ ರೇಟ್​ನಲ್ಲಿ 1,724 ರನ್ ಗಳಿಸಿದ್ದಾರೆ.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

ಅವರು ನ್ಯೂಜಿಲೆಂಡ್​ ಪರ ಅತಿ ಹೆಚ್ಚು ಟಿ 20 ಅಂತರರಾಷ್ಟ್ರೀಯ ಶತಕಗಳ ದಾಖಲೆಯನ್ನು ಹೊಂದಿದ್ದಾರೆ. ಅಂದ ಹಅಗೆ ಅವರ ಹೆಸರಿನಲ್ಲಿ ಮೂರು ಶತಕಗಳಿವೆ.

2018ರಲ್ಲಿ ಬೇ ಓವಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮನ್ರೊ 47 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಆ ಸಮಯದಲ್ಲಿ ನ್ಯೂಜಿಲೆಂಡ್​ಪರ ವೇಗದ ಟಿ 20 ಶತಕ ಮಾತ್ರವಲ್ಲ, ಮೂರು ಟಿ 20 ಶತಕಗಳನ್ನು ದಾಖಲಿಸಿದ ತಮ್ಮ ದೇಶದ ಮೊದಲ ಆಟಗಾರ ಎಂಬ ಸ್ಥಾನಮಾನ ಹೊಂದಿದ್ದರು.

Exit mobile version