Site icon Vistara News

ಜ.11ರಿಂದ ರಾಜ್ಯಾದ್ಯಂತ ಬಸ್‌ ಯಾತ್ರೆಗೆ ಕಾಂಗ್ರೆಸ್ ಸಜ್ಜು, ಒಂದಾಗುತ್ತಾರಾ ಸಿದ್ದರಾಮಯ್ಯ- ಡಿಕೆಶಿ?

cm Siddaramaiah And DK Shivakumar

cm Siddaramaiah And DK Shivakumar

ಬೆಂಗಳೂರು: ಜನವರಿ 11ರಿಂದ ರಾಜ್ಯಾದ್ಯಂತ ನಡೆಯುವ ಕಾಂಗ್ರೆಸ್‌ ಬಸ್‌ ಯಾತ್ರೆ ಆರಂಭವಾಗಲಿದೆ. ಪಕ್ಷದ ಮುಖಂಡರಾದ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜತೆಯಾಗಿ ಜಿಲ್ಲಾ ಪ್ರವಾಸ ಮಾಡಲಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಬಸ್ ಯಾತ್ರೆ ನಿರ್ವಹಣೆಗೆ ಸಮನ್ವಯ ಸಮಿತಿ ರಚನೆಯಾಗಲಿದ್ದು, ಯಾತ್ರೆ ಯಶಸ್ಸಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮಿತಿ ರಚನೆ ಮಾಡಿದ್ದಾರೆ. ಎಐಸಿಸಿ ಸೂಚನೆಯಂತೆ ಬಸ್ ಯಾತ್ರೆಗೆ ಸಮಿತಿ ರಚನೆ ಮಾಡಲಾಗುತ್ತಿದೆ.

ಉಭಯ ನಾಯಕರ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಪೈಪೋಟಿ ನಡೆಯುತ್ತಿದ್ದು, ಹಲವು ಕಡೆ ಉಭಯ ನಾಯಕರೂ ಪ್ರತ್ಯೇಕವಾಗಿ ಪ್ರವಾಸ ಮಾಡುತ್ತಿದ್ದಾರೆ. ತಮ್ಮ ನಾಯಕ ಮುಂದಿನ ಸಿಎಂ ಆಗಲಿದ್ದಾರೆ ಎಂದು ಇಬ್ಬರೂ ನಾಯಕರ ಆಪ್ತರು ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ಬಸ್ ಯಾತ್ರೆಯಲ್ಲಿ ಯಾವುದೇ ಕಿರಿಕಿರಿ ಆಗದ ರೀತಿಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ಬಸವರಾಜ ರಾಯರೆಡ್ಡಿ ಅಧ್ಯಕ್ಷರು, ಅವರ ಜತೆಗೆ 21 ಸದಸ್ಯರ ತಂಡ ರಚಿಸಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ನಡೆಯುವ ಯಾತ್ರೆ ಸಮನ್ವಯತೆಗೆ ಜಿ.ಸಿ ಚಂದ್ರಶೇಖರ್ ನೇತೃತ್ವದ 28 ಸದಸ್ಯರ ಟೀಮ್ ರಚಿಸಲಾಗಿದೆ.

ಉಭಯ ನಾಯಕರ ನಡುವೆ ಸಮನ್ವಯತೆ ಸಾಧಿಸುವುದು ಸಮಿತಿಯ ಉದ್ದೇಶವಾಗಿದೆ. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಬ್ಬರೂ ನಾಯಕರನ್ನು ಜೊತೆಯಾಗಿ ಕರೆದುಕೊಂಡು ಕೈ ಜೋಡಿಸಿ ಹೆಜ್ಜೆ ಹಾಕಿದ್ದರು. ಅದೇ ಸಮನ್ವಯವನ್ನು ಮುಂದುವರಿಸಿಕೊಂಡು ಹೋಗಲು ಹೈಕಮಾಂಡ್‌ ಸೂಚಿಸಿದ್ದು, ಅದಕ್ಕಾಗಿ ಈ ಯಾತ್ರೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ | DK Shivakumar | ಡಿಕೆಶಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ: ಶಿವಕುಮಾರ್‌ ಹೇಳಿದ್ದೇನು?

Exit mobile version