ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha elections) ಕಾಂಗ್ರೆಸ್ನ ಪ್ರಣಾಳಿಕೆಯ ಮೊದಲ ಕರಡನ್ನು ಫೆಬ್ರವರಿ 15 ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಸಂಸದ ಶಶಿ ತರೂರ್ ಶನಿವಾರ ಹೇಳಿದ್ದಾರೆ. ಅದೇ ರೀತಿ ಅಂತಿಮ ಕರಡು ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲು ಹೊರಬರಲಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ. ಪ್ರತಿಪಕ್ಷಗಳ ಬಣ ಇಂಡಿಯಾ (I.N.D.I.A) ಮೈತ್ರಿಕೂಟದ ಪಕ್ಷಗಳ ಪ್ರಣಾಳಿಕೆಗಳಿಂದ ಕೆಲವು ಅಂಶಗಳನ್ನು ಆಯ್ಕೆ ಮಾಡಬಹುದು ಹಾಗೂ ಪ್ರಮುಖ ವಿಷಯಗಳ ಪಟ್ಟಿಯನ್ನು ಹೊಂದಿರುವ ಒಂದನ್ನು ಆಯ್ಕೆ ಮಾಡಬಹುದು ಎಂಬುದಾಗಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನಾವು ಪ್ರಣಾಳಿಕ ಸಿದ್ಧಪಡಿಸಲು ನಮ್ಮದೇ ಆಂತರಿಕ ಕಾರ್ಯವಿಧಾನಗಳನ್ನು ಹೊಂದಿದ್ದೇವೆ. ಮೊದಲ ಕರಡು ಫೆಬ್ರವರಿ 15 ರೊಳಗೆ ಸಿದ್ಧವಾಗಬೇಕು. ನಂತರ ಅದನ್ನು ನಮ್ಮ ಕಾರ್ಯಕಾರಿ ಸಮಿತಿ ಒಪ್ಪಬೇಕು ಮತ್ತು ಅಂಗೀಕರಿಸಬೇಕು. ಆದರೆ ಖಂಡಿತವಾಗಿಯೂ, ಚುನಾವಣಾ ಆಯೋಗವು ಚುನಾವಣೆಗಳನ್ನು ಘೋಷಿಸುವ ಹೊತ್ತಿಗೆ ನಮ್ಮ ಪ್ರಣಾಳಿಕೆ ಸಿದ್ಧವಾಗಿರುತ್ತದೆ” ಎಂದು ತರೂರ್ ಹೇಳಿದ್ದಾರೆ.
ಇದನ್ನೂ ಓದಿ : Union Budget 2024: ಕೇಂದ್ರ ಬಜೆಟ್; ತೆರಿಗೆದಾರರಿಗೆ ಗುಡ್‌ನ್ಯೂಸ್? ಏನೇನಿದೆ ನಿರೀಕ್ಷೆ?
ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲು ನಾಗರಿಕ ಸಮಾಜದ ವಿವಿಧ ವಿಭಾಗಗಳಿಂದ ರಚನಾತ್ಮಕ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಜಂಟಿಯಾಗಿ ಆಯೋಜಿಸಿದ್ದ ‘ಶೇಪ್ ದಿ ಫ್ಯೂಚರ್’ ಕಾರ್ಯಕ್ರಮದಲ್ಲಿ ಶಶಿ ತರೂರ್ ಭಾಗವಹಿಸಿದ್ದ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ.
ಅಂದ ಹಾಗೆ ತಿರುವನಂತಪುರಂ ಸಂಸದರಾಗಿರುವ ತರೂರು ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಸಮಿತಿಯ ಸದಸ್ಯರಾಗಿದ್ದಾರೆ. “ಪ್ರತಿಯೊಂದು ಪಕ್ಷವು ತನ್ನದೇ ಆದ ಪ್ರಣಾಳಿಕೆಯ ಮೂಲಕ ಚುನಾವಣೆಗೆ ಕೆಲಸ ಮಾಡಲಿದೆ ಎಂದು ನಾನು ಭಾವಿಸುತ್ತೇನೆ ಇಂಡಿಯಾ ಮೈತ್ರಿಕೂಟವು ಎಲ್ಲಾ ಪ್ರಣಾಳಿಕೆಗಳಿಂದ ಸಾಮಾನ್ಯ ಅಂಶಗಳನ್ನು ಆಯ್ಕೆ ಮಾಡುತ್ತದೆ ಮತ್ತು ಸಮಸ್ಯೆಗಳ ಪ್ರಮುಖ ಪಟ್ಟಿಯನ್ನು ಸಿದ್ಧಪಡಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಜ್ವಲಂತ ಸಮಸ್ಯೆಗೆಳ ಪಟ್ಟಿ
ನಿರುದ್ಯೋಗ, ಬೆಲೆ ಏರಿಕೆ, ಬಡವರಿಗೆ ಆದಾಯ ಬೆಂಬಲದ ಅಗತ್ಯತೆ, ಮಹಿಳೆಯರ ಹಕ್ಕುಗಳು, ಯುವಕರು ಮತ್ತು ರೈತರ ಸಮಸ್ಯೆಗಳ ಬಗ್ಗೆ ಪ್ರಣಾಳಿಕೆಗಳು ಕೇಂದ್ರೀಕರಿಸುತ್ತವೆ ಎಂದು ಶಶಿ ತರೂರ್ ಹೇಳಿದರು. ಕೇಂದ್ರ ಸರ್ಕಾರವು ಪರಿಹರಿಸಬೇಕೆಂದು ಭಾವಿಸಿದ ವಿಷಯಗಳ ಬಗ್ಗೆ ಸಮಾಜದ ವಿವಿಧ ವಿಭಾಗಗಳಿಂದ ನಿಷ್ಪಕ್ಷಪಾತ, ಸ್ವಯಂಪ್ರೇರಿತ ಮತ್ತು ಮೌಲ್ಯವರ್ಧಿತ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ತರೂರು ಹೇಳಿದ್ದಾರೆ.
ಶಶಿ ತರೂರ್ ಅವರು ಕೈಗಾರಿಕೆ, ಆರ್ಥಿಕತೆ, ಆರೋಗ್ಯ, ಬ್ಯಾಂಕಿಂಗ್, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ, ಸಾಹಿತ್ಯ, ಸಾಂಸ್ಕೃತಿಕ, ಕಾನೂನು ಮತ್ತು ವೈವಿಧ್ಯತೆ ವಿಭಾಗಗಳ ಪಾಲುದಾರರನ್ನು ಆಲಿಸಿದರು.
ಬಿಜೆಪಿ ಜತೆ ಹೋಗೋದಕ್ಕಿಂತ ಸಾಯೋದೇ ಮೇಲು; ನಿತೀಶ್ ಕುಮಾರ್ ಹಳೇ ವಿಡಿಯೊ ವೈರಲ್
ಪಟನಾ: ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎಂಬ ಮಾತಿದೆ. ಈ ಮಾತಿಗೆ ನಿಜ ಎಂಬಂತೆ, ಬಿಹಾರದಲ್ಲಿ ಸಮಯ ಬಂದಾಗ ಆರ್‌ಜೆಡಿ ಹಾಗೂ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಿತೀಶ್ ಕುಮಾರ್ (Nitish Kumar) ಅವರು ಅಧಿಕಾರ (Bihar Politics) ಅನುಭವಿಸಿದ್ದಾರೆ.
ಈಗ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು, ಭಾನುವಾರ ರಾಜೀನಾಮೆ ನೀಡಿ, ಬಿಜೆಪಿ ಜತೆಗೂಡಿ ಸರ್ಕಾರ ರಚಿಸಲು ನಿತೀಶ್ ಕುಮಾರ್ ಅವರು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, “ಬಿಜೆಪಿ ಜತೆ ಕೈಜೋಡಿಸುವುದಕ್ಕಿಂತ ಸಾಯೋದೇ ಮೇಲು” ಎಂದು ನಿತೀಶ್ ಕುಮಾರ್ ಅವರು ಇದಕ್ಕೂ ಮೊದಲು ನೀಡಿದ ಹೇಳಿಕೆಯ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಇದನ್ನೂ ಓದಿ : Union Budget 2024: ಕೇಂದ್ರ ಬಜೆಟ್; ತೆರಿಗೆದಾರರಿಗೆ ಗುಡ್‌ನ್ಯೂಸ್? ಏನೇನಿದೆ ನಿರೀಕ್ಷೆ?
ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆಗಷ್ಟೇ ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಅವರು 2023ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಮತ್ತೆ ಬಿಜೆಪಿ ಜತೆ ಕೈಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಅವರ, “ನಾನು ಬಿಜೆಪಿ ಜತೆ ಹೋಗುವುದಕ್ಕಿಂತ ಸಾಯೋದೇ ಮೇಲು ಎಂದು ಭಾವಿಸಿದ್ದೇನೆ. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು. ಅವರು ತೇಜಸ್ವಿ ಯಾದವ್ ಹಾಗೂ ಅವರ ತಂದೆ ಮೇಲೆ ಯಾವುದೇ ಕಾರಣ ಇಲ್ಲದೆ ಪ್ರಕರಣ ದಾಖಲಿಸಿದ್ದಾರೆ” ಎಂದಿದ್ದರು. ಆದರೆ, ಈಗ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ಜತೆ ಕೈಜೋಡಿಸುತ್ತಿರುವ ಕಾರಣ ಹಳೆಯ ವಿಡಿಯೊ ಈಗ ವೈರಲ್ ಆಗಿದೆ.
ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಲು ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಆರ್‌ಜೆಡಿ ಶಾಸಕರ ಜತೆ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಸಭೆ ನಡೆಸಿ, ಅವರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. “ಆರ್‌ಜೆಡಿಯ ಯಾವ ಶಾಸಕರೂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಅಧಿಕಾರ ಹೋಯ್ತು ಎಂದು ಹತಾಶರಾಗುವುದೂ ಬೇಡ. ತೇಜಸ್ವಿ ಯಾದವ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿ” ಎಂಬುದಾಗಿ ಲಾಲು ಪ್ರಸಾದ್ ಯಾದವ್ ಅವರು ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಬಿಜೆಪಿಯು ಸಾಲು ಸಾಲು ಸಭೆಗಳನ್ನು ನಡೆಸುತ್ತಿರುವ ಕಾರಣ ಜೆಡಿಯು ಶಾಸಕರ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.