ತುಮಕೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆ ಹಾಗೂ ಮಂಡಳಿಗಳ ಕಾಮಗಾರಿ ನಡೆಸಿದ ಗುತ್ತಿಗೆದಾದರಿಗೆ ಸೂಕ್ತ ಸಮಯಕ್ಕೆ ಬಿಲ್ ನೀಡುತ್ತಿಲ್ಲ ಎಂಬ ಆರೋಪಕ್ಕೆ ಮತ್ತೊಂದು ಬಾರಿ ಪುಷ್ಟಿ ಸಿಕ್ಕಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಮಹಾ ನಿರ್ದೇಶಕರೊಬ್ಬರು ಕಾಮಗಾರಿ ನಡೆಸಿದ 8 ಕೋಟಿ ರೂಪಾಯಿ ಬಿಡುಗಡೆ ಮಾಡದೇ ಕಿರುಕುಳ ನೀಡುತ್ತಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ (Suicide Attempt) ಮಾಡಲು ಯತ್ನಿಸಿದ ಘಟನೆ ಪಾವಗಡದಲ್ಲಿ ನಡೆದಿದೆ. ಕೆಲಸ ಮುಗಿದು ವರ್ಷಗಳೇ ಕಳೆದರೂ ಹಣ ಬಿಡುಗಡೆ ಮಾಡದೇ ಅನಗತ್ಯ ರಿಪೋರ್ಟ್ ಬರೆದು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಥಮ ದರ್ಜೆ ಗುತ್ತಿಗೆದಾರ ಸುಜಿತ್ ಸರ್ಕಾರದ ವಿರುದ್ಧ ಆರೋಪ ಮಾಡಿರುವವರು. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂ.ಡಿ ವಿರುದ್ಧ ಗಂಭೀರ ಆರೋಪ ಮಾಡುವ ವಿಡಿಯೊವನ್ನು ಚಿತ್ರೀಕರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗುತ್ತಿಗೆದಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂ.ಡಿ ಸಣ್ಣಚಿತ್ತಪ್ಪ ವಿರುದ್ಧ ಆರೋಪ ಮಾಡಿರು ಸುಜಿತ್ ಅವರ ಕಿರುಕುಳದಿಂದಾಗಿ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ಪಾವಗಡ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರನಾಗಿರುವ ಸುಜಿತ್ ಅವರು ತಾಲೂಕಿನಲ್ಲಿ ಹಲವು ಕಾಮಗಾರಿ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಕಾಮಗಾರಿ ಮುಗಿದರೂ ಹಣ ಬಿಡುಗಡೆ ಮಾಡದೇ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಸ್.ಸಿ.ಪಿ ಅಡಿ ಕಾಮಗಾರಿ ಮಾಡಿದ್ದೇನೆ. ಆದರೆ, ಕಾಮಗಾರಿ ಸರಿಯಿಲ್ಲ ಎಂದು ತನಿಖೆ ಮಾಡುವ ನೆಪದಲ್ಲಿ ಎಂ. ಡಿ ಸಣ್ಣಚಿತ್ತಪ್ಪ ಅವರು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Murder News : ಹಾಸನದಲ್ಲಿ ನಟೋರಿಯಸ್ ರೌಡಿ ಚೈಲ್ಡ್ ರವಿ ಬರ್ಬರ ಕೊಲೆ
ತನಿಖೆ ನೆಪದಲ್ಲಿ ಮುಕ್ತಾಯಗೊಂಡ ಕಾಮಗಾರಿಯ ಬಿಲ್ ನೀಡುತ್ತಿಲ್ಲ. ಸುಮಾರು 9 ಕೋಟಿ ಹಣ ಬಿಡುಗಡೆ ಆಡಬೇಕಾಗಿದೆ. ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಸುಜಿತ್ ಆರೋಪಿಸಿದ್ದಾರೆ.
ಮಂಡಳಿಯ ಅಡಿಯಲ್ಲಿ ರಸ್ತೆ ಹಾಗೂ ಚೆಕ್ ಡ್ಯಾಮ್ ಗಳನ್ನು ಮಾಡಿಸಿದ್ದೇನೆ. ಆದರೆ, ರಾಜಕೀಯ ದುರುದ್ದೇಶದಿಂದಾಗಿ ನನ್ನ ಬಿಲ್ ಬಿಡುಗಡೆ ಮಾಡುತ್ತಿಲ್ಲ ಎಂದು ಸುಜಿತ್ ಆರೋಪಿಸಿದ್ದಾರೆ.
ಮೂಲತಃ ಪಾವಗಡದವರೇ ಆಗಿರುವ ಎಂಡಿ ಸಣ್ಣಚಿತ್ತಪ್ಪ ಅವರು ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಮಾಡುತ್ತಿಲ್ಲ. ನಷ್ಟ ತಾಳಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜಿತ್ ವಿಡಿಯೊ ಮಾಡಿದ್ದಾರೆ. ನನ್ನ ಸಾವಿಗೆ ಕಾರಣ ಎಂ.ಡಿ ಸಣ್ಣ ಚಿತ್ತಪ್ಪ ಅವರೇ ಕಾರಣ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ನನ್ನ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಸುಜಿತ್ ಆರೋಪಿಸಿದ್ದಾರೆ.
ಆತ್ಮಹತ್ಯೆ ಯತ್ನ ನಡೆಸಿ ಅಸ್ವಸ್ಥಗೊಂಡಿರುವ ಸುಜಿತ್ ಅವರು ಸದ್ಯ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.