Site icon Vistara News

Election Results 2024 : ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ; ಇವಿಎಂಗಳಲ್ಲಿದ್ದ ಪಕ್ಷಗಳ ಭವಿಷ್ಯ ಬಹಿರಂಗ

Election Results 2024

ಬೆಂಗಳೂರು: ಲೋಕಸಭಾ ಚುನಾವಣೆ 2024ರ 543 ಕ್ಷೇತ್ರಗಳ ಮತ್ತು ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯ ವಿಧಾನಸಭೆಗಳ ಮತ ಎಣಿಕೆ ಜೂನ್ 4, 2024ರಂದು ಬೆಳಗ್ಗೆ 8 ರಿಂದ ಪ್ರಾರಂಭವಾಗಿದೆ. ಇದು ಚಲಾವಣೆಯಾದ ಮತ ಎಣಿಕೆ ಪೂರ್ಣಗೊಳ್ಳುವವರೆಗೆ (Election Results 2024) ನಡೆಯಲಿದೆ. ಏಪ್ರಿಲ್ 19 ರಿಂದ ಜೂನ್ 1, 2024 ರವರೆಗೆ ಏಳು ಹಂತಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಡೆದಿತ್ತು. ಫಲಿತಾಂಶಗಳು ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ results.eci.gov.in ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್​​ನಲ್ಲಿ ಲಭ್ಯವಿರುತ್ತವೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡಿತು. ಅದಕ್ಕಿಂತ ಮೊದಲು ಅಂಚೆ ಮತಗಳ ಎಣಿಕೆ ನಡೆಯಿತು. ಈ ಹಿಂದೆಯೇ ಚುನಾವಣಾ ಆಯೋಗವು ಅಧಿಕಾರಿಗಳು ಮತ್ತು ಬೂತ್​ ಏಜೆಂಟರಿಗೆ ಕೈಪಿಡಿ ಬಿಡುಗಡೆ ಮಾಡಿತ್ತು. ಎಣಿಕೆ ವ್ಯವಸ್ಥೆಗಳು, ಮತ ಎಣಿಕೆಯ ಕಾರ್ಯವಿಧಾನ ಮತ್ತು ಇವಿಎಂಗಳು ಮತ್ತು ವಿವಿಪ್ಯಾಟ್​ಗಳ ಸಂಗ್ರಹಣೆಗಾಗಿ ಸಮಗ್ರ ಸೂಚನೆಗಳನ್ನು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಾಗಿದೆ. ಎಣಿಕೆ ಪ್ರಕ್ರಿಯೆಯನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಅದು ಹೇಗೆ ಕಾರ್ಯನಿರ್ವಹಿಸಬೇಕು? ಅಕ್ರಮಗಳನ್ನು ಕಂಡರೆ ಯಾವಾಗ ಮತ್ತು ಹೇಗೆ ಆಕ್ಷೇಪಣೆಗಳನ್ನು ಎತ್ತಬಹುದು ಎಂಬುದನ್ನು ವಿವರಿಸಲಾಗಿದೆ.

ಮತಗಳನ್ನು ಹೇಗೆ ಎಣಿಕೆ ಮಾಡಲಾಗುತ್ತದೆ?

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ನಿಗದಿತ ಸಮಯದಲ್ಲಿ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಬೇಕು. ಸಂಪೂರ್ಣ ಪ್ರಕ್ರಿಯೆ ಕ್ಯಾಮೆರಾದಲ್ಲಿ ಮತ್ತು ದಿನಾಂಕ-ಸಮಯದೊಂದಿಗೆ ದಾಖಲಾಗಬೇಕು.

ಚುನಾವಣಾ ಆಯೋಗದ ಕಾರ್ಯವಿಧಾನದ ಪ್ರಕಾರ, ಮತದಾನ ಮಾಡಿದ ಇವಿಎಂ ಸ್ಟ್ರಾಂಗ್ ರೂಮ್ ಅನ್ನು ವೀಕ್ಷಕರು, ಅಭ್ಯರ್ಥಿಗಳು / ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗಿದೆ. ಲಾಗ್ ಬುಕ್​ನಲ್ಲಿ ಎಂಟ್ರಿ ಮಾಡಿದ ಬಳಿಕ ಬೀಗದ ಸೀಲ್ ತೆರೆಯಲಾಯಿತು.

ಅಂಚೆ ಮತಪತ್ರಗಳ ಎಣಿಕೆ

ಚುನಾವಣಾ ನೀತಿ ಸಂಹಿತೆ 1961 ರ ನಿಯಮ 54 ಎ ಯಲ್ಲಿ ವಿವರಿಸಿದಂತೆ, ಅಂಚೆ ಮತಪತ್ರಗಳ ಎಣಿಕೆಯು ಇವಿಎಂಗಳ ಮತ ಎಣಿಕೆ ಆರಂಭಕ್ಕೆ ಅರ್ಧಗಂಟೆ ಮೊದಲು ಆರಂಭಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆ ಪ್ರಾರಂಭವಾದ 30 ನಿಮಿಷಗಳ ನಂತರ, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಲ್ಲಿ ದಾಖಲಾದ ಮತಗಳ ಎಣಿಕೆ ಪ್ರಾರಂಭವಾಯಿತು. ಅಂತಿಮವಾಗಿ, ವಿವಿಪಿಟಿ ಸ್ಲಿಪ್​ಗಳು ಹಾಗೂ ಇವಿಎಂ ಫಲಿತಾಂಶಗಳೊಂದಿಗೆ ಹೊಂದಿಸಲಾಗಿದೆ.

ಇದನ್ನೂ ಓದಿ: Lok Sabha Election 2024:ಮತ ಎಣಿಕೆ ಮೊದಲೇ ಕಾಂಗ್ರೆಸ್ ನಾಯಕರಿಂದ ಮತಯಂತ್ರ ದೂಷಣೆ ಆರಂಭ!

ಇವಿಎಂ ಮೂಲಕ ಮತ ಎಣಿಕೆ

ಅಂಚೆ ಮತಪತ್ರಗಳ ಎಣಿಕೆ ಪ್ರಾರಂಭವಾದ ಮೂವತ್ತು ನಿಮಿಷಗಳ ನಂತರ ವಿದ್ಯುನ್ಮಾನ ಮತದಾನ ಯಂತ್ರಗಳಿಂದ (ಇವಿಎಂ) ಮತಗಳ ಎಣಿಕೆ ಪ್ರಾರಂಭವಾಗಿದೆ. ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರತಿ ನಿಯಂತ್ರಣ ಘಟಕದ ಅಭ್ಯರ್ಥಿವಾರು ಫಲಿತಾಂಶವನ್ನು ಫಾರ್ಮ್ 17 ಸಿ ಭಾಗ 2 ರಲ್ಲಿ ದಾಖಲಿಸಲಾಗುತ್ತದೆ ಮತ್ತು ಎಣಿಕೆ ಮೇಲ್ವಿಚಾರಕರು ಮತ್ತು ಅಭ್ಯರ್ಥಿ, ಮತಗಟ್ಟೆ ಏಜೆಂಟ್ ಸಹಿ ಮಾಡುತ್ತಾರೆ. ಪ್ರತಿ ಮತಗಟ್ಟೆಯ ಟ್ಯಾಬ್ಯುಲೇಷನ್ ಶೀಟ್ ಅನ್ನು ಆರ್​ಒ ಸ್ವೀಕರಿಸಲಾಗುತ್ತದೆ.

ವಿವಿಪ್ಯಾಟ್ ಸ್ಲಿಪ್ ಗಳ ಎಣಿಕೆ

ವಿವಿಪ್ಯಾಟ್ ಸ್ಲಿಪ್ ಗಳ ಎಣಿಕೆಯನ್ನು ಮತ ಎಣಿಕೆ ಪೂರ್ಣಗೊಂಡ ನಂತರವೇ ಪ್ರಾರಂಭಿಸಲಾಗುತ್ತದೆ. ಬ ವಿವಿಪ್ಯಾಟ್ ಸ್ಲಿಪ್​​​ಗಳನ್ನು ಎಣಿಕೆಯನ್ನು ವಿವಿಪ್ಯಾಟ್ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು ಅಥವಾ ಏಜೆಂಟರ ಸಮ್ಮುಖದಲ್ಲಿ ಎಣಿಕೆ ಮಾಡಲಾಗುತ್ತದೆ.

ಮರು ಎಣಿಕೆ

ಮತದಾನ ಯಂತ್ರಗಳಲ್ಲಿ ದಾಖಲಾದ ಮತಗಳ ಮರು ಎಣಿಕೆಯ ಪ್ರಶ್ನೆಯೇ ಇರುವುದಿಲ್ಲ. ಏಕೆಂದರೆ ಮತದಾನ ಯಂತ್ರಗಳು ದಾಖಲಿಸಿದ ಪ್ರತಿಯೊಂದು ಮತವು ಮಾನ್ಯವಾಗಿರುತ್ತದೆ. ಅದರ ಸಿಂಧುತ್ವ ಪ್ರಶ್ನೆಯೇ ಇರುವುದಿಲ್ಲ ಮತಯಂತ್ರಗಳ ಬಳಕೆಯಿಂದ ಮರು ಎಣಿಕೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಅಗತ್ಯವಿದ್ದರೂ ಚುನಾವಣಾ ನೀತಿ ನಿಯಮಗಳು, 1961 ರ ನಿಯಮ 63 ರಲ್ಲಿ ಮರು ಎಣಿಕೆಗೆ ಅವಕಾಶವಿದೆ.

Exit mobile version