ಯಾದಗಿರಿ: ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ (Cow Smugling) ವಾಹನವನ್ನು ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿದಿದ್ದಾರೆ. ಆ ವಾಹನದಲ್ಲಿ ನಿರ್ದಯವಾಗಿ ಹಾಕಲಾಗಿದ್ದ 7 ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವವರರ ಬಗ್ಗೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಲಾಗಿದ್ದು ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ವರ್ಕನಳ್ಳಿ ಬಳಿ ವಾಹನ ತಡೆದು ಗೋವುಗಳ ರಕ್ಷಣೆ ಮಾಡಲಾಗಿದೆ. ಮಸ್ಕನಳ್ಳಿ ಗ್ರಾಮದಿಂದ ಕಲಬುರಗಿಗೆ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
ಯಾವುದೇ ಅನುಮತಿಯಿಲ್ಲದೇ ಹಾಗೂ ನಿರ್ದಾಕ್ಷಿಣ್ಯ ರೀತಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನು ಸ್ಥಳೀಯರು ಬಜರಂಗದಳ ಕಾರ್ಯಕರ್ತರಿಗೆ ನೀಡಿದ್ದರು. ತಕ್ಷಣ ಗೋ ಸಾಗಾಟದ ವಾಹನವನ್ನು ಬೆನ್ನಟ್ಟಿ ತಡೆದು ಬಜರಂಗದಳ ಕಾರ್ಯಕರ್ತರು ಅವುಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ನೀಡಿದ್ದಾರೆ.
ಸಾಧಾರಣಾ ಟಾಟಾ ಸುಮೋ ವಾಹನದಲ್ಲಿ 7 ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕಾರಣ ಅವರುಗಳೆಲ್ಲೂ ಗಂಭೀರ ಸ್ಥಿತಿಯಲ್ಲಿದ್ದವು. ಗೋವುಗಳನ್ನು ರಕ್ಷಿಸಿ ವಾಹನ ಸಹಿತ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ
ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಇದೇ ವೇಳೆ ಕಾರ್ಯಕರ್ತರು ಆರೋಪಿಸಿದ್ದಾರೆ. ಬಕ್ರಿದ್ ಹಬ್ಬಕ್ಕೆ ಅತೀ ಹೆಚ್ಚು ಗೋವು ಸಾಗಾಣಿಕೆ ಆಗ್ತಿವೆ. ಇದರಿಂದ ಸ್ಥಳೀಯವಾಗಿ ಸಮಸ್ಯೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಿರುಪದ್ರವಿ ಗೋವುಗಳನ್ನು ತೆಗೆದುಕೊಂಡು ಹೋಗಿ ಮಾಂಸಕ್ಕಾಗಿ ಕಡಿಯಲಾಗಿತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಗೋವಿನ ರಕ್ಷಣೆ ಮಾಡಬೇಕೆಂದು ಬಜರಂಗದಳ ಮುಖಂಡ ಶಿವಕುಮಾರ ಅಗ್ರಹಿಸಿದ್ದಾರೆ.