ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ಆಟಗಾರರನ್ನು ಪರಿಗಣಿಸುವ ನಿಯಮ ಬದಲಾವಣೆ ಮಾಡುವಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಮ್ಯಾನೇಜ್ಮೆಂಟ್ಗೆ ಕೋರಿದೆ. ಅದರ ಮೂಲ ಉದ್ದೇಶ ಧೋನಿಯನ್ನು (MS Dhoni) ಉಳಿಸಿಕೊಳ್ಳುವುದು. ‘ಎಂಎಸ್ ಧೋನಿ ಅವರನ್ನು 2025 ರ ಋತುವಿನಲ್ಲಿ ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಪ್ರಸ್ತಾಪವು ಫ್ರಾಂಚೈಸಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಲೀಗ್ನಲ್ಲಿ ಆಟಗಾರರ ಮೌಲ್ಯಮಾಪನ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
Pictures from the latest event. ❤️#MSDhoni @MSDhoni #WhistlePodu #GOLD pic.twitter.com/o1Pt16Rscm
— GJ (@gautamjoshi37) July 31, 2024
ಐಪಿಎಲ್ 2008 ರಲ್ಲಿ ಪ್ರಾರಂಭವಾದ ಐಪಿಎಲ್ ಭಾರತೀಯ ಕ್ರಿಕೆಟ್ನ ಮೂಲಾಧಾರವಾಗಿದೆ. ಇಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನಿಯಮಗಳು ಬದಲಾಯಿಸಲಾಗುತ್ತದೆ. 2021 ರವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಿಂದದ ನಿವೃತ್ತಿ ಪಡೆದು ದೂರವಿದ್ದ ಆಟಗಾರರನ್ನು ಅನ್ಕ್ಯಾಪ್ಡ್ ಎಂದು ವರ್ಗೀಕರಿಸುವ ನಿಯಮವಿತ್ತು. ತಂಡಗಳ ಕೋರಿಕೆಯ ಮೇರೆಗೆ ಈ ನಿಯಮ ರದ್ದುಪಡಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ ಸಿಎಸ್ಕೆ ಈಗ ಅದರ ಪುನಃಸ್ಥಾಪನೆಯನ್ನು ಬಯಸಿದೆ. ಯಾಕೆಂದರೆ ತಂಡದಲ್ಲಿ ಧೋನಿಯನ್ನು ಅನ್ಕ್ಯಾಪ್ಡ್ ಪ್ಲೇಯರ್ ಎಂದು ಉಳಿಸಿಕೊಳ್ಳುವುದೇ ಅವರ ಉದ್ದೇಶವಾಗಿದೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಸಮಿತಿ ಮತ್ತು ಹತ್ತು ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಸಿಎಸ್ಕೆ ಹಳೆಯ ನಿಯಮವನ್ನು ಮರಳಿ ತರಲು ಪ್ರಸ್ತಾಪಿಸಿದೆ. ಆಗಸ್ಟ್ 15, 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಧೋನಿಯನ್ನು ಉಳಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಈ ಬದಲಾವಣೆ ಜಾರಿಗೆ ಬಂದರೆ ಸಿಎಸ್ಕೆ ಮುಂದಿನ ಋತುವಿನಲ್ಲಿ ಧೋನಿಯನ್ನು ಉಳಿಸಿಕೊಳ್ಳಲಿದೆ. ಅದಕ್ಕಾಗಿ ಪ್ರಸ್ತುತ ಅವರು ಹೊಂದಿರುವ 12 ಕೋಟಿ ರೂ. ವೇತನದಲ್ಲಿ ಉಳಿಕೆಯಾಗಲಿದೆ.
ಈ ಸಲಹೆಯು ಇತರ ಫ್ರಾಂಚೈಸಿಗಳಿಂದ ಪ್ರತಿರೋಧವನ್ನು ಎದುರಿಸಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರು ನಿವೃತ್ತ ಅಂತಾರಾಷ್ಟ್ರೀಯ ಆಟಗಾರರನ್ನು ಅನ್ಕ್ಯಾಪ್ಡ್ ಆಟಗಾರರು ಎಂದು ವರ್ಗೀಕರಿಸುವುದು ಅವರ ಮೌಲ್ಯಕ್ಕೆ ಅಗೌರವ ಎಂದಿದ್ದಾರೆ. ಹರಾಜು ಪ್ರಕ್ರಿಯೆಯ ಮೂಲಕ ಆಟಗಾರನ ಮೌಲ್ಯ ನಿರ್ಧರಿಸಲು ಅವಕಾಶ ನೀಡುವುದು ಹೆಚ್ಚು ಸೂಕ್ತವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಗಸ್ಟ್ 2ರಂದು ಭಾರತದ ಅಥ್ಲೀಟ್ಗಳ ಸ್ಪರ್ಧೆಯ ವಿವರ ಇಲ್ಲಿದೆ
ಇತರ ತಂಡಗಳು ಸಹ ಈ ಹೇಳಿಕೆಯನ್ನು ಬೆಂಬಲಿಸಿವೆ. ಹಲವಾರು ಫ್ರಾಂಚೈಸಿಗಳು ಮಾಜಿ ಅಂತರರಾಷ್ಟ್ರೀಯ ಆಟಗಾರರನ್ನು ಅವರ ನಿವೃತ್ತಿಯ ಅವಧಿಯನ್ನು ಲೆಕ್ಕಿಸದೆ ಅನ್ಕ್ಯಾಪ್ಡ್ ವಿಭಾಗದಲ್ಲಿ ಪರಿಗಣಿಸುವ ಆಲೋಚನೆಯನ್ನು ವಿರೋಧಿಸಿದವು.
ಭಾರತ ತಂಡದ ನಿವೃತ್ತ ಆಟಗಾರರಿಗೆ ಸಂಬಂಧಿಸಿದ ವಿಷಯದ ಬಗ್ಗೆಯೂ ಚರ್ಚೆ ನಡೆಯಿತು. ಐದು ವರ್ಷಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಭಾರತೀಯ ಆಟಗಾರರಿಗೆ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು ಕಡಿಮೆ ಮಾಡಲು ಅವಕಾಶ ನೀಡುವ ಪ್ರಸ್ತಾಪವನ್ನು ಫ್ರಾಂಚೈಸಿಗಳು ಸರ್ವಾನುಮತದಿಂದ ಒಪ್ಪಿಕೊಂಡವು.