Site icon Vistara News

CUET UG Result 2024: ಸಿಯುಇಟಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

CUET UG Result 2024

ಬೆಂಗಳೂರು: ಎನ್​​ಟಿಯ ಸಿಯುಇಟಿ ಯುಜಿ ಫಲಿತಾಂಶವನ್ನು (CUET UG Result 2024) ಪ್ರಕಟಿಸಿದೆ. ಪದವಿಪೂರ್ವ ಕೋರ್ಸ್​ಗಳಿಗೆ ಸೇರಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು cuetug.ntaonline.in ವೆಬ್​​ಸೈಟ್​ನಲ್ಲಿ ಅಂಕಗಳನ್ನು ಪರಿಶೀಲಿಸಬಹುದು. ಸಿಯುಇಟಿ ಯುಜಿ ಫಲಿತಾಂಶಗಳನ್ನು exams.nta.ac.in/CUET-UG/ ನಲ್ಲಿ ಪರಿಶೀಲಿಸಬಹುದು.

ಸಿಯುಇಟಿ ಯುಜಿ ಪರೀಕ್ಷೆಯನ್ನು ಮೇ 15, 16, 17, 18, 21, 22, 24 ಮತ್ತು 29 ರಂದು ವಿದೇಶದ 26 ನಗರಗಳು ಸೇರಿದಂತೆ 379 ನಗರಗಳಲ್ಲಿರುವ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಒಟ್ಟು 13.48 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜುಲೈ 19, 2024 ರಂದು ಮರು ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 7 ರಂದು ಬಿಡುಗಡೆ ಮಾಡಲಾಗಿತ್ತು. ಆಕ್ಷೇಪಣೆ ವಿಂಡೋವನ್ನು ಜುಲೈ 9, 2024 ರಂದು ಮುಚ್ಚಿದ್ದರು.

ಫಲಿತಾಂಶಗಳ ಜೊತೆಗೆ ಏಜೆನ್ಸಿ ಅಂತಿಮ ಉತ್ತರ ಕೀಯನ್ನು ಸಹ ಬಿಡುಗಡೆ ಮಾಡಿದೆ. ತಾತ್ಕಾಲಿಕ ಉತ್ತರ ಕೀ ವಿರುದ್ಧ ಅಭ್ಯರ್ಥಿಗಳು ಹಾಕಿದ ಪ್ರಶ್ನೆಗಳ ಆಧಾರದ ಮೇಲೆ ಅಂತಿಮ ಉತ್ತರ ಕೀಯನ್ನು ಸಿದ್ಧಪಡಿಸಲಾಗಿದೆ. ತಜ್ಞರ ಸಮಿತಿಯು ಸವಾಲುಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಿ ಘೋಷಿಸಲಾಗಿದೆ.

ಇದನ್ನೂ ಓದಿ: Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

ಎನ್​ಟಿಎ ಸಿಯುಇಟಿ ಯುಜಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.

ವಿವರಗಳಿಗಾಗಿ ಅಭ್ಯರ್ಥಿಗಳು ಸಿಯುಇಟಿ ಯುಜಿಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.

Exit mobile version