Site icon Vistara News

Hurricane Beryl : ವೆಸ್ಟ್​ ಇಂಡೀಸ್​ನಲ್ಲಿ ಚಂಡಮಾರುತ, ಸಂಕಷ್ಟದಲ್ಲಿ ಸಿಲುಕಿದ ಚಾಂಪಿಯನ್ ಭಾರತ ತಂಡ

Hurricane Beryl

ಬೆಂಗಳೂರು: ವೆಸ್ಟ್​ ಇಂಡೀಸ್​ನಲ್ಲಿ ಬಾರ್ಬಡೋಸ್​ಗೆ ಬೆರಿಲ್ ಚಂಡಮಾರುತದಿಂದಾಗಿ (Hurricane Beryl) ಅಪ್ಪಳಿಸಿದೆ. ವಿಶ್ವ ಕಪ್​ ಫೈನಲ್ ಪಂದ್ಯ ಮುಗಿದ ಮರುದಿನದೇ ಈ ಪಾಕೃತಿಕ ವಿಕೋಪ ಸಂಭವಿಸಿದೆ. ಹೀಗಾಗಿ ವಿಶ್ವ ಕಪ್​ ಗೆದ್ದು ಸಂಭ್ರಮದಲ್ಲಿರುವ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ತವರಿಗೆ ಮರಳಲು ಸಾಧ್ಯವಾಗದೇ, ಅಲ್ಲಿಯೂ ಸೂಕ್ತ ವ್ಯವಸ್ಥೆ ಇಲ್ಲದೆ ನಲುಗುವಂತಾಗಿದೆ. ಭಾರತೀಯ ತಂಡದ ಬಗ್ಗೆ ಬಿಸಿಸಿಐ ಹೊಸ ಅಪ್​​ಡೇಟ್​ ನೀಡಿದ್ದು, ಟಿ 20 ವಿಶ್ವಕಪ್ 2024 ರ ಗೆಲುವಿನ ನಂತರ ಭಾರತಕ್ಕೆ ತೆರಳಬೇಕಿದ್ದ ಟೀಮ್ ಇಂಡಿಯಾ, ಚಂಡಮಾರುತದಿಂದಾಗಿ ಬಾರ್ಬಡೋಸ್​ನಲ್ಲಿ ಸಿಲುಕಿಕೊಂಡಿದೆ ಎಂದು ಬರೆದುಕೊಂಡಿದೆ. ಎಲ್ಲಾ ಹೊರಹೋಗುವ ವಿಮಾನಗಳನ್ನು ರದ್ದುಪಡಿಸಲಾಗಿತ್ತು ಮತ್ತು ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಹೇಳಿದೆ. ಅದರ ನಡುವೆಯೂ ಅಲ್ಲಿರುವ ಆಟಗಾರರು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣ ಮಾತ್ರವಲ್ಲ, ಬಾರ್ಬಡೋಸ್​​ನ ಎಲ್ಲಾ ಹೋಟೆಲ್​​, ರೆಸ್ಟೋರೆಂಟ್​ಗಳು ಮತ್ತು ಅಂಗಡಿಗಳನ್ನು ಸಹ ಮುಚ್ಚಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ಭಾರತೀಯ ತಂಡ ಉಳಿದುಕೊಂಡಿರುವ ಹೋಟೆಲ್ ಪ್ರಸ್ತುತ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲಾಗಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೆ ಅತ್ಯ ಸೌಕರ್ಯಗಳು ಸಿಗುತ್ತಿಲ್ಲ.

ಟೀಮ್ ಇಂಡಿಯಾಗೆ ಬಿಸಿಸಿಐ ಭರವಸೆ

ಚಂಡಮಾರುತವು ಕಡಿಮೆಯಾದ ನಂತರ ಬಾರ್ಬಡೋಸ್​ನಿಂದ ಹೊರಬರಲು ಟೀಮ್ ಇಂಡಿಯಾ, ಸಹಾಯಕ ಸಿಬ್ಬಂದಿ ಮತ್ತು ಮಾಧ್ಯಮ ತಂಡಕ್ಕೆ ಸಹಾಯ ಮಾಡುವುದಾಗಿ ಬಿಸಿಸಿಐ ಭರವಸೆ ನೀಡಿದೆ. ಖ್ಯಾತ ಪತ್ರಕರ್ತ ಬೋರಿಯಾ ಮಜುಂದಾರ್ ಅವರ ವರದಿಗಳ ಪ್ರಕಾರ, ಹೋಟೆಲ್​​ನಲ್ಲಿ ಸೀಮಿತ ಸಿಬ್ಬಂದಿಯಿಂದಾಗಿ ಭಾರತೀಯ ತಂಡವು ಸರದಿಯಲ್ಲಿ ನಿಂತಿ ಕಾಗದದ ತಟ್ಟೆಗಳಲ್ಲಿ ಊಟ ಮಾಡುತ್ತಿದೆ.

ಇದನ್ನೂ ಓದಿ: ICC Team of the Tournament : ಐಸಿಸಿ ಟೀಮ್​ ಆಫ್​​ ದಿ ಟೂರ್ನಮೆಂಟ್​ನಲ್ಲಿ ಆರು

ವರದಿಗಳ ಪ್ರಕಾರ, ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ತಂಡ ಮತ್ತು ಸಹಾಯಕ ಸಿಬ್ಬಂದಿ ಚಾರ್ಟರ್ ವಿಮಾನದ ಮೂಲಕ ವಾಪಸ್ ತೆರಳಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು ಬಾರ್ಬಡೋಸ್ನಿಂದ ಹೊರಟಿದೆ. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಪರಿಹಾರವಾಗಿದೆ ಆದರೆ ಭಾರತೀಯ ತಂಡವು ದ್ವೀಪ ರಾಷ್ಟ್ರವನ್ನು ಇನ್ನೂ ತೊರೆದಿಲ್ಲ. ಅವರಿಗೆ ತಕ್ಷಣದ ಪರಿಹಾರ ಸಿಕ್ಕಿಲ್ಲ.

ಭಾರತ ತಂಡವು ಜುಲೈ 1 ರಂದು ಹೊರಡಬೇಕಿತ್ತು. ಆದರೆ ಚಂಡಮಾರುತದಿಂದಾಗಿ ಬಾರ್ಬಡೋಸ್ ನ ಆಡಳಿತ ಹೆಚ್ಚಿನ ಎಚ್ಚರಿಕೆ ವಹಿಸಿದೆ. ವಿಮಾನ ನಿಲ್ದಾಣವನ್ನು ಸೋಮವಾರ ಮಧ್ಯಾಹ್ನದವರೆಗೆ (ಬಿಎಸ್ಟಿ) ಮುಚ್ಚಲಾಗುವುದು ಮತ್ತು ಚಂಡಮಾರುತ ಕಡಿಮೆಯಾದ ನಂತರವೇ ಅದನ್ನು ಮತ್ತೆ ತೆರೆಯಲಾಗುತ್ತದೆ. ಎಲ್ಲವೂ ಸುಧಾರಿಸಿಕೊಂಡ ನಂತರ ಭಾರತ ತಂಡ ಅಲ್ಲಿಂದ ಹೊರಡಬೇಕಾಗಿದೆ.

ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ಭಾನುವಾರ ಬೆಳಿಗ್ಗೆ ಗ್ರೇಡ್​ 3 ಚಂಡಮಾರುತವಾಗಿ ಪರಿವರ್ತನೆಗೊಂಡಿದೆ ಭಾನುವಾರ ಬೆಳಿಗ್ಗೆಯೇ ಮಾರುತದ ಗಂಟೆಗೆ 120 ಕಿಲೋಮೀಟರ್​ನಷ್ಟಿತ್ತು. ಚಂಡಮಾರುತವು ಕ್ಷಣದಿಂದ ಕ್ಷಣಕ್ಕೆ ಬಲಗೊಳ್ಳುತ್ತಿದೆ.

ಪೋರ್ಟೊ ರಿಕೊದ ಆಗ್ನೇಯ ಮತ್ತು ವೆನೆಜುವೆಲಾದ ಉತ್ತರಕ್ಕೆ ವಿಂಡ್ವರ್ಡ್ ದ್ವೀಪಗಳಿಗೆ ಬೆರಿಲ್ ಚಂಡಮಾರುತ ಅಪ್ಪಳಿಸಲಿದೆ ನಿರೀಕ್ಷೆಯಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ರಾತ್ರಿ 8:30 ರ ಹೊತ್ತಿಗೆ ಬೆರಿಲ್ ಬಾರ್ಬಡೋಸ್​​ನ ಪೂರ್ವ-ಆಗ್ನೇಯಕ್ಕೆ ಸುಮಾರು 355 ಮೈಲಿ ದೂರದಲ್ಲಿ ಸಾಗಲಿದೆ. ಮುಂಬರುವ ಗಂಟೆಗಳಲ್ಲಿ ಪರಿಸ್ಥಿತಿ ತೀವ್ರವಾಗಬಹುದು ಎಂದು ವರದಿಯಾಗಿದೆ.

Exit mobile version