ಬೆಂಗಳೂರು: ದುರಂಹಕಾರಿ ಆಸ್ಟ್ರೇಲಿಯಾ ತಂಡ ವಿಶ್ವ ಕಪ್ನ ಸೂಪರ್ 8 ಹಂತದಿಂದ ಹೊರಕ್ಕೆ ಬಿದ್ದಿದೆ. ಹೀಗಾಗಿ ಆ ತಂಡಕ್ಕೆ ಆಘಾತವಾಗಿದೆ. 2021ರ ಆವೃತ್ತಿಯ ಚಾಂಪಿಯನ್ ಹಾಗೂ 2023ರ ಏಕ ದಿನ ವಿಶ್ವ ಕಪ್ ಚಾಂಪಿಯನ್ ತಂಡಕ್ಕೆ ಇದು ನಿಜವಾಗಿಯೂ ದುಃಖದ ವಿಚಾರ. ಹೀಗಾಗಿ ಸೋಲಿನ ಬಳಿಕ ಆಟಗಾರರು ಬಿಯರ್ ಕುಡಿತಾ ಬೇಸರ ಹೊರಹಾಕಿದ್ದಾರೆ ಎಂಬುದಾಗಿ ವರದಿಯಾಗಿದೆ. ಬಿಯರ್ ಅಲ್ಲಿ ಸಾಮಾನ್ಯ ಸಂಸ್ಕೃತಿಯಾಗಿರುವ ಕಾರಣ ಅದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಆದರೆ, ಜೇಕ್ ಫ್ರೇಸರ್ ಮೆಗ್ಕುರ್ಕ್ ಹಾಗೂ ಡೇವಿಡ್ ವಾರ್ನರ್ (David Warner ) ಬಿಯರ್ ಕುಡಿತಾ ಕುಳಿತಿರುವ ಫೋಟೊಗಳನ್ನು ಹಾಕಿಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ ನೇತೃತ್ವದಲ್ಲಿ ವಿಶ್ವಾಸದಿಂದಲೇ ವೆಸ್ಟ್ ಇಂಡೀಸ್ಗೆ ತೆರಳಿತ್ತು. ಆದರೆ, ಅಪಘಾನಿಸ್ತಾನ ವಿರುದ್ಧ ಸೂಪರ್ ಪಂದ್ಯವನ್ನು ಸೋತ ಬಳಿಕ ನಡುಗಿತು. ಬಳಿಕ ಭಾರತ ವಿರುದ್ಧವೂ ಹೀನಾಯವಾಗಿ ಪರಾಭವಗೊಂಡಿತು. ಗೆದ್ದೇ ಗೆಲ್ಲುತ್ತೇವೆ ಎಂಬ ಅತ್ಯುತ್ಸಾಹದಲ್ಲಿ ಸಾಗುವ ಕಾಂಗಾರೂ ಪಡೆಗಳಿಗೆ ಇದು ಸಂಪೂರ್ಣ ನಿರಾಸೆಯ ಸಂಗತಿಯಾಗಿದೆ. ಹೀಗಾಗಿ ಬಿಯರ್ ಕುಡಿಯದೇ ವಿಧಿಯಿಲ್ಲ
ಮೆಗ್ಕುರ್ಕ್ ವಿಶ್ವ ಕಪ್ ಆಸ್ಟ್ರೇಲಿಯಾ ತಂಡದ ಪರ ಬ್ಯಾಟಿಂಗ್ ಮಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಯುವ ಬ್ಯಾಟ್ಸ್ಮನ್ ಅನ್ನು ಆಸ್ಟ್ರೇಲಿಯಾ ತಂಡದ ಮುಂದಿನ ಸಂಭಾವ್ಯ ಆರಂಭಿಕ ಆಟಗಾರ ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಈ ಯುವ ಆಟಗಾರನಿಗೆ ಪ್ರೇರಣೆ.
David Warner passes the baton to Jake Fraser-McGurk 💛
— CricTracker (@Cricketracker) June 25, 2024
📸: David Warner pic.twitter.com/VwCFtjvIX0
ವಿಶೇಷವೆಂದರೆ, ಇಬ್ಬರೂ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಾರೆ. 2024 ರ ಟಿ 20 ವಿಶ್ವ ಕಪ್ನಿಂದ ಆಸೀಸ್ ಬಳಗ ಹೊರಬಿದ್ದ ನಂತರ ಅವರಿಬ್ಬರೂ ಮೈದಾನದಿಂದ ದೂರವಿದ್ದರು. ಅವರಿಬ್ಬರೂ ಜತೆಯಾಗಿ ಬಿಯರ್ ಕುಡಿದಿದ್ದಾರೆ.
ಮೆಗ್ಕುರ್ಕ್ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೂ ಆಸೀಸ್ ತಂಡದ ಟ್ರೋಫಿಗೆ ಸವಾಲೊಡ್ಡುವ ವಾತಾವರಣಕ್ಕೆ ಅವರು ತೆರೆದುಕೊಂಡರು. ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮೆಗ್ಕುರ್ಕ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಕೆರಿಬಿಯನ್ ವಾಸ್ತವ್ಯದ ಮುಕ್ತಾಯದ ನಂತರ ಬಿಯರ್ ಕುಡಿತಾ ಕುಳಿತಿದ್ದರು.
ಮೆಗ್ಕುರ್ಕ್ ಪ್ರಶ್ನೆಗಳನ್ನು ಕೇಳುತ್ತಾರೆ : ವಾರ್ನರ್
ಆಸ್ಟ್ರೇಲಿಯಾ ತಂಡದಲ್ಲಿ ಜೇಕ್ ಫ್ರೇಸರ್ ಮೆಕ್ಗುರ್ಕ್ ಅವರ ಸಂಭಾವ್ಯ ಸ್ಥಾನದ ಬಗ್ಗೆ ವಾರ್ನರ್ ಮಾತನಾಡಿದ್ದಾರೆ. ಜಾಗತಿಕ ಟೂರ್ನಿಯಿಂದ ದುರದೃಷ್ಟವಶಾತ್ ನಿರ್ಗಮಿಸಿದ ನಂತರ ಆಸ್ಟ್ರೇಲಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಮತ್ತು ಮೆಕ್ಗುರ್ಕ್ ಸ್ಥಾನ ಪಡೆಯುವ ವಿಶ್ವಾಸವನ್ನು ಅವರು ತೋರಿಸಿದ್ದಾರೆ. ಮೆಕ್ಗುರ್ಕ್, ವಿಶೇಷವಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಪರವಾಗಿ ಅಸಾಧಾರಣ ಪ್ರದರ್ಶನ ನೀಡಿದ್ದರು. ಅವರನ್ನು ಪಂದ್ಯಾವಳಿಯ ಫೈನಲ್ ಸ್ಟ್ರೈಕರ್ ಎಂದು ಕರೆಯಲಾಗಿತ್ತು. ಅವರ ಸ್ಟ್ರೈಕ್ ರೇಟ್ 200 ರ ಗಡಿಯನ್ನು ಮೀರಿತ್ತು.
ಇದನ್ನೂ ಓದಿ: Women’s Asia Cup 2024 : ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ
” ಮೆಗ್ಕುರ್ಕ್ ಅವರ ಅನುಭವವು ಉತ್ತಮವಾಗಿರುತ್ತದೆ. ಅವರು ಆಗಸ್ಟ್ ಅಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಚಿಕ್ಕ ಮಗುವಾಗಿ, ಆಟದ ಬಗ್ಗೆ, ತಂಡದ ಆಟಗಾರನಾಗಿ ಗುಂಪಿನ ಸುತ್ತಲೂ ಇರುವುದು ಹೇಗೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರು ಆಟವನ್ನು ಪ್ರೀತಿಸುತ್ತಾರೆ” ಎಂದು ವಾರ್ನರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.