Site icon Vistara News

Shikhar Dhawan : ನಿವೃತ್ತಿ ಘೋಷಣೆಯ ಮರುದಿನವೇ ಕ್ರಿಕೆಟ್ ಅಂಗಣಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಶಿಖರ್‌ ಧವನ್‌

Shikhar Dhawan

ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟರ್‌‌ ಶಿಖರ್ ಧವನ್ (Shikhar Dhawan) ಅಂತರರಾಷ್ಟ್ರೀಯ ಕ್ರಿಕೆಟ್‌‌ನಿಂದ ನಿವೃತ್ತಿ ಘೋಷಿಸಿದ ಮರು ದಿನವೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌‌ಸಿ) ಗೆ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಕೆಲವು ಮಾಜಿ ಸಹ ಆಟಗಾರರಂತೆಯೇ ಅವರು ನಿವೃತ್ತಿಯ ಬಳಿಕ ಲೀಗ್ ಲೀಗ್ ಕ್ರಿಕೆಟ್‌‌ನಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಹಿರಿಯ ವೃತ್ತಿಪರರು ಆಡುವ ಟಿ 20 ಪಂದ್ಯಾವಳಿ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌. 38 ವರ್ಷದ ಮಾಜಿ ಆರಂಭಿಕ ಆಟಗಾರ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎರಡು ದಿನಗಳ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ನಿವೃತ್ತಿಯ ಬಳಿಕ ನಿರಾಳವಾಗಿದ್ದೇನೆ. ಆದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ತಮ್ಮ ಕ್ರಿಕೆಟ್ ಸ್ನೇಹಿತರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ನನ್ನ ದೇಹವು ಆಟದ ಬೇಡಿಕೆಗಳಿಗೆ ಇನ್ನೂ ಪೂರಕವಾಗಿದೆ. ಕ್ರಿಕೆಟ್ ಮತ್ತು ನಾನು ಬೇರ್ಪಡಿಸಲಾಗದ ಬಂಧವನ್ನು ಹೊಂದಿದ್ದೇನೆ. ಅದು ಎಂದಿಗೂ ನನ್ನಿಂದ ಹೊರಹೋಗುವುದಿಲ್ಲ ಎಂದು ಧವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನನ್ನ ಕ್ರಿಕೆಟ್ ಸ್ನೇಹಿತರೊಂದಿಗೆ ಮರು ಸಂಘಟನೆಯಾಗುವೆ. ನಾವು ಒಟ್ಟಿಗೆ ಹೊಸ ನೆನಪುಗಳನ್ನು ಸೃಷ್ಟಿಸುವೆ. ನನ್ನ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರಿಸಲು ನಾನು ಉತ್ಸುಕನಾಗಿದ್ದೇನೆ, “ಎಂದು ಧವನ್‌ ಹೇಳಿದರು.

ಶಿಖರ್ ಧವನ್ ಶನಿವಾರ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟಿಗನಾಗಿ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆಯುತ್ತಿದ್ದಾರೆ ಎಂದು ದೃಢಪಡಿಸಿದರು. ಭಾರತದ ಮಾಜಿ ಆರಂಭಿಕ ಆಟಗಾರ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವ ಮೂಲಕ ತಮ್ಮ ಕನಸನ್ನು ಬದುಕಿದ್ದಾರೆ ಎಂದು ಹೇಳಿದರು. ಧವನ್ ಭಾರತ ಪರ 34 ಟೆಸ್ಟ್, 167 ಏಕದಿನ ಮತ್ತು 69 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ಆಧುನಿಕ ದಿನದ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿಶೇಷವಾಗಿ ಆಟದ 50 ಓವರ್‌ಗಳ ಸ್ವರೂಪದಲ್ಲಿ ಅವರು ಹೆಚ್ಚು ಪ್ರಭಾವಿಯಾಗಿದ್ದಾರೆ.

ಇದನ್ನೂ ಓದಿ: Narendra Modi : ಪಾಕಿಸ್ತಾನದ ವಾಯಮಾರ್ಗ ಬಳಸಿ ಪೋಲೆಂಡ್‌ನಿಂದ ಭಾರತಕ್ಕೆ ಮರಳಿದ್ದ ಪ್ರಧಾನಿ ಮೋದಿ

2021 ರಲ್ಲಿ ಸ್ಥಾಪನೆಯಾದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟಿ 20 ಪಂದ್ಯಾವಳಿಯಲ್ಲಿ ಕ್ರಿಸ್ ಗೇಲ್, ಗೌತಮ್ ಗಂಭೀರ್ ಮತ್ತು ಶೇನ್ ವ್ಯಾಟ್ಸನ್ ಸೇರಿದಂತೆ ಹಲವಾರು ಸೂಪರ್ಸ್ಟಾರ್ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. 2023 ರ ಆವೃತ್ತಿಯು ಭಾರತದ ಐದು ಸ್ಥಳಗಳಲ್ಲಿ ನಡೆದರೆ, ಮುಂಬರುವ ಋತುವಿನಲ್ಲಿ ಕತಾರ್ ಕೂಡ ಒಂದು ಸ್ಥಳವಾಗಲಿದೆ.

Exit mobile version