Site icon Vistara News

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Virat kohli

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ವಿರಾಟ್ ಕೊಹ್ಲಿ (Virat Kohli) ಅದ್ಭುತ ಫಾರ್ಮ್​ನಲ್ಲಿದ್ದಾರೆ. ಅವರು 10 ಪಂದ್ಯಗಳಲ್ಲಿ 147.49 ಸ್ಟ್ರೈಕ್ ರೇಟ್​ನಂತೆ 500 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಫಾರ್ಮ್​ನಲ್ಲಿದ್ದರೂ ಮತ್ತು ರನ್ ಗಳಿಸುತ್ತಿದ್ದರೂ, ಪ್ರಸ್ತುತ ನಡೆಯುತ್ತಿರುವ ಲೀಗ್​ನಲ್ಲಿ ನಿಧಾನಗತಿಯ ಸ್ಟ್ರೈಕ್ ರೇಟ್​ನಲ್ಲಿ (Strike Rate) ಅವರನ್ನು ಟೀಕಿಸಲಾಗುತ್ತಿಎ. ಭಾರತೀಯ ದಿಗ್ಗಜರ ಪಾಲಿಗೆ ಕೊಹ್ಲಿ ಚರ್ಚೆಯ ವಿಷಯವಾಗಿದ್ದಾರೆ.

ನಿಧಾನಗತಿಯ ಸ್ಟ್ರೈಕ್ ರೇಟ್ ಟೀಕೆಗೆ ವಿರಾಟ್ ಕೊಹ್ಲಿ ಪರ ನಿಂತ ಅವರ ಮಾಜಿ ಸಹ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಕ ಎಬಿ ಡಿ ವಿಲಿಯರ್ಸ್​ ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. ಅಂಕಿ, ಅಂಶ ಪಂಡಿತರೆಲ್ಲರೂ ಸುಮ್ಮನಿರಬೇಕು. ಕೊಹ್ಲಿಯ ಆಟ ಬಲ್ಲವನಿಗೆ ಗೊತ್ತು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪ್ರಾರಂಭದಿಂದಲೂ ನಿಧಾನಗತಿಯ ಸ್ಟ್ರೈಕ್ ರೇಟ್​ಗಾಗಿ ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ನಿಧಾನಗತಿಯ ಸ್ಟ್ರೈಕ್ ರೇಟ್ ಕುರಿತ ಚರ್ಚೆ ಆಧಾರರಹಿತ ಮತ್ತು ಅಸಮಂಜಸವಾಗಿದೆ ಎಂದು ವಿಲಿಯನ್ಸ್​ ಹೇಳಿದ್ದಾರೆ. 35 ವರ್ಷದ ಕ್ರಿಕೆಟಿಗ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಅವರು ಪ್ರತಿಪಾದಿಸಿದ್ದಾರೆ. ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ ಪ್ರಶಂಸನೀಯ ಫಾರ್ಮ್​​ನಲ್ಲಿದ್ದಾರೆ. ಆರ್​​ಸಿಬಿ ಬ್ಯಾಟಿಂಗ್ ಸಾಲಿನಲ್ಲಿ ಹಿರಿಯ ಆಟಗಾರನಾಗಿ ಅವರಿಗೆ ಕೆಲವು ಪಾತ್ರವನ್ನು ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

“ವಿರಾಟ್ ಕೊಹ್ಲಿ, ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದು ಬಹಳ ಸಮಯದಿಂದ ನಡೆಯುತ್ತಿದೆ. ನಾನು ಈಗ ಅದರಿಂದ ಬೇಸರಗೊಂಡಿದ್ದೇನೆ. ನಾನು ನಿರಾಶೆಗೊಂಡಿದ್ದೇನೆ. ಕನಿಷ್ಠ ಹೇಳಬೇಕೆಂದರೆ. ಈ ವ್ಯಕ್ತಿ ಕ್ರಿಕೆಟ್ ಆಟವನ್ನು ಆಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು ಐಪಿಎಲ್​​ನಲ್ಲಿ ನಂಬಲಾಗದ ಸಾಧನೆ ಮಾಡಿದ್ದಾರೆ. ಆರ್​​ಸಿಬಿಗಾಗಿ ಒಂದು ನಿರ್ದಿಷ್ಟ ಪಾತ್ರವನ್ನು ವಹಿಸುತ್ತಾರೆ. ಈ ವ್ಯಕ್ತಿಯನ್ನು ಟೀಕಿಸುವ ಡೇಟಾ-ಚಾಲಿತ ಪಂಡಿತರನ್ನು ನಾನು ಸಾಕಷ್ಟು ನೋಡಿದ್ದೇನೆ. ನಿಮಗೆ ನಿಜವಾಗಿಯೂ ಆಟದ ಜ್ಞಾನವಿಲ್ಲದಿದ್ದಾಗ ಲೆಕ್ಕ ಹಾಕಿ ಏನು ಪ್ರಯೋಜನ. ನೀವು ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೀರಿ/ ಎಷ್ಟು ಐಪಿಎಲ್ ಶತಕಗಳನ್ನು ಗಳಿಸಿದ್ದೀರಿ? ಎಂದು ಟೀಕಾಕಾರರಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

ಕೊಹ್ಲಿಯ ಬ್ಯಾಟಿಂಗ್​​ ನಿಧಾನಗತಿಯ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಜನರು ಮತ್ತು ತಜ್ಞರ ವಿರುದ್ಧ ಆರ್​​ಸಿಬಿ ಮಾಜಿ ಬ್ಯಾಟರ್​ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಸ್ಟಾರ್ ಆಟಗಾರನನ್ನು ಟೀಕಿಸುವ ತಜ್ಞರು ಮತ್ತು ಕ್ರಿಕೆಟ್ ಪಂಡಿತರಿಗೆ ಐಪಿಎಲ್​ ಆಟದ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ 247 ಪಂದ್ಯಗಳಲ್ಲಿ 8 ಶತಕ ಮತ್ತು 54 ಅರ್ಧಶತಕಗಳೊಂದಿಗೆ 131.02 ಸ್ಟ್ರೈಕ್ ರೇಟ್​​ನ ಲ್ಲಿ 7763 ರನ್ ಗಳಿಸಿದ್ದಾರೆ. ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 4, 2024 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ.

Exit mobile version