ಚೆನ್ನೈ: ಸಿಎಸ್ಕೆ ತಂಡದ ಪ್ರತಿಭಾನ್ವಿತ ವೇಗದ ಬೌಲರ್ ದೀಪಕ್ ಚಹರ್ (Deepak Chahar) ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಗಾಯಗೊಂಡ ಕಾರಣ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಲ್ಲ. ಹೀಗಾಗಿ ಅವರು ಟ್ರೋಲ್ಗೆ ಒಳಗಾಗಿದ್ದಾರೆ. ಪದೇ ಪದೇ ಗಾಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಚುಚ್ಚು ಮಾತುಗಳನ್ನು ಕ್ರಿಕೆಟ್ ಅಭಿಮಾನಿಗಳು ಆಡುತ್ತಿದ್ದಾರೆ. ಇದರಿಂದ ಬೇಸತ್ತ ಅವರ ಸಹೋದರಿ ಮಾಲತಿ ಚಾಹರ್ ಟ್ರೋಲ್ ಮಾಡಿದವರಿಗೆ ಸಿಕ್ಕಾಪಟ್ಟೆ ಬೈದಿದ್ದಾರೆ. ನಿಮಗೆ ಸ್ವಲ್ಪವೂ ಸಂವೇದನೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಐಪಿಎಲ್ 2024 ರ ಮುಖಾಮುಖಿಯಲ್ಲಿ ಸಿಎಸ್ಕೆ ವಿರುದ್ಧ ಪಂಜಾಬ್ ತಂಡ ಗೆದ್ದಿದೆ. ಅದಕ್ಕೆ ಕಾರಣ ಆಟಗಾರರ ಅಲಭ್ಯತೆ. ಹೀಗಾಗಿ ಚಾಹರ್ ಟ್ರೋಲ್ಗೆ ಒಳಗಾಗಿದ್ದಾರೆ ಸ್ಟ್ರೈಕ್ ವೇಗಿ ದೀಪಕ್ ಚಾಹರ್ ಕೇವಲ 2 ಎಸೆತಗಳನ್ನು ಎಸೆದ ನಂತರ ಮೈದಾನದಿಂದ ನಿರ್ಗಮಿಸಿದರು.
ಎರಡನೇ ಎಸೆತದ ನಂತರ, ಅವರು ತಮ್ಮ ತೊಡೆ ಸ್ನಾಯುವಿನ ಸೆಳತಕ್ಕೆ ಒಳಗಾದರು. ನಾಯಕ ಋತುರಾಜ್ ಗಾಯಕ್ವಾಡ್ ಅವರೊಂದಿಗೆ ದೀರ್ಘ ಮಾತುಕತೆಯ ನಂತರ ಚಹರ್ ಮೈದಾನದಿಂದ ಹೊರನಡೆಯಲು ನಿರ್ಧರಿಸಿದರು. ಸ್ಟ್ರೈಕ್ ಬೌಲರ್ ಅನುಪಸ್ಥಿತಿಯು ಸಿಎಸ್ಕೆಯು ಪಂದ್ಯವನ್ನು ಕಳೆದುಕೊಂಡಿತು. ದೀಪಕ್ ಚಹರ್ ನಿರಂತರವಾಗಿ ಗಾಯಗಳಿಗೆ ಒಳಗಾಗುತ್ತಿರುವುದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅನೇಕರು ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೋಲ್ ಮಾಡಿದರು. ಇದು ಅವರ ಸಹೋದರಿ ಮಾಲತಿ ಚಹರ್ ಅವರ ಕೋಪಕ್ಕೆ ಕಾರಣವಾಗಿದೆ.
ವೃತ್ತಿಯಲ್ಲಿ ನಟಿಯಾಗಿರುವ ಮಾಲತಿ ಚಹರ್ ತಮ್ಮ ಎಕ್ಸ್ ಖಾತೆಯಲ್ಲಿ (ಟ್ವಿಟರ್) ತಮ್ಮ ಸಹೋದರನ ಬಗ್ಗೆ ಸಂವೇದನಾರಹಿತವಾಗಿ ವರ್ತಿಸಿದ್ದಕ್ಕಾಗಿ ಅಭಿಮಾನಿಗಳನ್ನು ದೂಷಿಸಿದ್ದಾರೆ. ಯಾವುದೇ ಕ್ರೀಡಾಪಟು ಗಾಯಗೊಳ್ಳುವುದನ್ನು ಎಂದಿಗೂ ಸಂಭ್ರಮಿಸುವುದಿಲ್ಲ. ದೀಪಕ್ ಚಹರ್ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದರು. ಅವರು ಚೇತರಿಸಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾನೆ ಎಂದು ಹೇಳಿದ ಮಾಲತಿ, ತನ್ನ ಸಹೋದರನ ಪುಟಿದೇಳುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: T20 World Cup : ಈ ದಿನದಂದು ವಿಶ್ವ ಕಪ್ಗಾಗಿ ಯುಎಸ್ಎಗೆ ಹೊರಡಲಿದೆ ಟೀಮ್ ಇಂಡಿಯಾ
ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಚಹರ್ ಅವರ ಗಾಯದ ಬಗ್ಗೆ ಉತ್ತಮ ಭಾವನೆ ಹೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅದು ಮೇಲ್ನೋಟಕ್ಕೆ ಪ್ರೋತ್ಸಾಹದಾಯಕವಾಗಿಲ್ಲ. ಆದ್ದರಿಂದ, ಫಿಸಿಯೋಗಳು ಮತ್ತು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರನ್ ಗಾಗಿ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಬುಧವಾರ ನಡೆದ ಪಂಜಾಬ್ ಲಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತೋರಿದ ವರ್ತನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಧೋನಿ ಇಷ್ಟೊಂದು ಸ್ವಾರ್ಥಿಯಾಗಬಾರದೆಂದು ಟೀಕಿಸಿದ್ದಾರೆ.
ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಧೋನಿಯ ಈ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ, ಪಂಬಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.
ಚೆನ್ನೈ ಬ್ಯಾಟಿಂಗ್ ಇನಿಂಗ್ಸ್ನ ಅಂತಿಮ ಓವರ್ನಲ್ಲಿ ಅರ್ಷದೀಪ್ ಎಸೆದ ಈ ಓವರ್ನ ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಚೆಂಡು ಬೌಂಡರಿ ಲೈನ್ ಬಳಿ ಹೋದರೂ ಕೂಡ ಧೋನಿ ರನ್ ಓಡದೆ ಸ್ವಾರ್ಥ ತೋರಿದರು. ನಾನ್ಸ್ಟ್ರೈಕ್ನಲ್ಲಿದ್ದ ಡೇರಿಯಲ್ ಮಿಚೆಲ್ ಅವರು ರನ್ಗಾಗಿ ಓಡಿ ಕ್ರೀಸ್ ಬಳಿ ಬಂದರು. ಈ ವೇಳೆ ಧೋನಿ ಅವೇಶದಲ್ಲಿಯೇ ಮಿಚೆಲ್ಗೆ ಹಿಂದೆ ಹೋಗುವಂತೆ ತಿಳಿಸಿದರು. ಸ್ಟ್ರೈಕ್ ತನಕ ಓಡಿದ್ದ ಮಿಚೆಲ್ ಮತ್ತೆ ನಾನ್ಸ್ಟ್ರೈಕರ್ ಬಳಿಗೆ ಓಡಿ ಬಂದರು. ಮುಂದಿನ ಎಸೆತವನ್ನು ಧೋನಿ ಬೀಟ್ ಮಾಡಿದರು. 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಅಂತಿಮ ಎಸೆತದಲ್ಲಿ ರನೌಟ್ ಆದರು.