Site icon Vistara News

WPL 2024 : ದೀಪ್ತಿ ಶರ್ಮಾ ಆಲ್​ರೌಂಡ್ ಆಟ, ಯುಪಿ ತಂಡಕ್ಕೆ1 ರನ್​ ಗೆಲುವು

UP Warier

ನವ ದೆಹಲಿ: ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2024) ಅಭಿಮಾನಿಗಳು ರೋಚಕ ಪಂದ್ಯವೊಂದಕ್ಕೆ ಶುಕ್ರವಾರ ಸಾಕ್ಷಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಮತತ್ತು ಯುವಿ ವಾರಿಯರ್ಸ್​ ನಡುವಿನ ಹಣಾಹಣಿಯ ಫಲಿತಾಂಶದ ಮೂಲಕ ಲೀಗ್​ನ ರೋಚಕತೆ ಹೆಚ್ಚಿದೆ. ಗೆಲುವಿಗೆ 2 ರನ್ ಬೇಕಿದ್ದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಲ್​​ಔಟ್ ಆಗುವ ಮೂಲಕ ಮೂಲಕ ಯುಪಿ ವಾರಿಯರ್ಸ್ ತಂಡಕ್ಕೆ 1 ರನ್​ ರೋಚಕ ಗೆಲುವು ಲಭಿಸಿತು. ಕೊನೆಯಲ್ಲಿ ಸತತವಾಗಿ ಆರು ವಿಕೆಟ್​ ಕಳೆದುಕೊಂಡ ಡೆಲ್ಲಿ ತಂಡ ಕೈಯಲ್ಲಿದ್ದ ಪಂದ್ಯವನ್ನು ಕಳೆದುಲಕೊಂಡಿತು. ಗೆಲ್ಲಲೇಬೇಕಾದ ಪರಿಸ್ಥಿಲ್ಲಿ ಗೆದ್ದ ಯುಪಿ ವಾರಿಯರ್ಸ್ ಪ್ಲೇಆಫ್​ ಕನಸನ್ನು ಮತ್ತಷ್ಟು ಜೀವಂತವಾಗಿಟ್ಟುಕೊಂಡಿತು.

ಕೊನೆಯ ಎರಡು ಓವರ್​​​ಗಳಲ್ಲಿ ಡೆಲ್ಲಿ ಗೆಲುವಿಗೆ 15 ರನ್ ಬೇಕಿತ್ತು. ಕೇವಲ ನಾಲ್ಕು ವಿಕೆಟ್​ ಉರುಳಿತ್ತು. ತಂಡದ ಮೊತ್ತ ​ 124ಕ್ಕೆ 4 ಆಗಿತ್ತು. ಆದರೆ 19ನೇ ಓವರ್​​​ ಬೌಲಿಂಗ್ ಎಸೆದ ದೀಪ್ತಿ ಶರ್ಮಾ ಮೊದಲ ಎರಡು ಎಸೆತಗಳಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಅರುಂಧತಿ ರೆಡ್ಡಿ ಅವರನ್ನು ಔಟ್ ಮಾಡಿದರು. ನಾಲ್ಕನೇ ಎಸೆತದಲ್ಲಿ ಶಿಖಾ ಪಾಂಡೆ ವಿಕೆಟ್ ಪಡೆದರು.

20ನೇ ಓವರ್​​ನಲ್ಲಿ ಡೆಲ್ಲಿ ಗೆಲುವಿಗೆ 10 ಅಗತ್ಯ ಬೇಕಾಗಿತ್ತು. ರಾಧಾ ಯಾದವ್ ಸಿಕ್ಸರ್ ಬಾರಿಸಿದರು ಮರು ಎಸೆತದಲ್ಲಿ ರಾಧಾ 2 ರನ್ ಗಳಿಸಿದರು. ಇದರೊಂದಿಗೆ ಡೆಲ್ಲಿಗೆ ಗೆಲ್ಲುವ ಅವಕಾಶ ಸೃಷ್ಟಿಯಾಯಿತು. ಆದರೆ 3ನೇ ಬಾಲ್​​​ನಲ್ಲಿ ರಾಧಾ ಔಟಾದರು. 4ನೇ ಎಸೆತದಲ್ಲಿ ತಾನಿಯಾ ಭಾಟಿಯಾ ಸಿಂಗಲ್ ಕದಿಯಲು ಯತ್ನಿಸಿದರು. ಈ ವೇಳೆ ನಾನ್​ಸ್ಟ್ರೈಕ್​ನಿಂದ ಸ್ಟ್ರೈಕ್​​ಗೆ ಓಡಿದ ಜೆಸ್ ಜೊನಾಸೆನ್ ರನೌಟ್ ಆದರು. ಇನ್ನು ಕೊನೆಯ ಎರಡು ಎಸೆತಗಳಿಗೆ 2 ರನ್ ಬೇಕಿತ್ತು. 5ನೇ ಎಸೆತವನ್ನು ಎದುರಿಸಿದ ಟಿಟಾಸ್ ಸಧು, ನೇರವಾಗಿ ಡೇನಿಯಲ್ ವ್ಯಾಟ್​ಗೆ ಕ್ಯಾಚ್​ ನೀಡಿದರು. ಈ ಕ್ಯಾಚ್​​ನೊಂದಿಗೆ ಯುಪಿ ತಂಡದ ಗೆಲುವು ಖಾತರಿಯಾಯಿತು.

ಬ್ಯಾಟಿಂಗ್​ನಲ್ಲಿ ದೀಪ್ತಿ 59 ರನ್ ಬಾರಿಸಿದರೆ ಬೌಲಿಂಗ್​ನಲ್ಲಿ 19 ರನ್​ಗಳಿಗೆ 4 ವಿಕೆಟ್​ ಪಡೆದರು.

ಇದನ್ನೂ ಓದಿ : IPL 2024 : ಆರ್​ಸಿಬಿ ಅನ್​ಬಾಕ್ಸ್​ ಟಿಕೆಟ್​ ಮಾರಾಟ ಶುರು, ಎಲ್ಲಿ ಮಾಡಬಹುದು ಖರೀದಿ?

ಯುಪಿಗೆ 6 ಅಂಕ

ಯುಪಿ ವಾರಿಯರ್ಸ್ ರೋಚಕ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6 ಅಂಕ ತನ್ನದಾಗಿಸಿಕೊಂಡಿದೆ. ಆದರೆ ಇದು ಆರ್​​​ಸಿಬಿಗೆ ಮುಳುವಾಗುವ ಸಾಧ್ಯತೆ ಇದೆ. ಉಭಯ ತಂಡಗಳು ತಲಾ 6 ಅಂಕ ಸಂಪಾದಿಸಿವೆ. ಆದರೆ, ನೆಟ್​ ರನ್​ರೇಟ್​ನಲ್ಲಿ ಆರ್​ಸಿಬಿ ಪ್ಲಸ್ ಇದೆ. ಯುಪಿ ಮೈನಸ್​​ನಲ್ಲಿದೆ. ಯುಪಿಗೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಮುಂದಿನ ಎರಡೂ ಪಂದ್ಯಗಳಲ್ಲಿ ಆರ್​ಸಿಬಿ ಗೆಲುವು ಸಾಧಿಸಲೇಬೇಕಿದೆ.

Exit mobile version