Site icon Vistara News

Delhi News : ಆಟಿಕೆಯೆಂದು ಭಾವಿಸಿ ಅಪ್ಪನ ಪಿಸ್ತೂಲ್‌ ಶಾಲೆಗೆ ತೆಗೆದುಕೊಂಡು ಹೋದ 10 ವರ್ಷದ ಬಾಲಕ

Delhi News

ನವದೆಹಲಿ: 10 ವರ್ಷದ ಶಾಲಾ ಬಾಲಕನೊಬ್ಬ ತನ್ನ ಮನೆಯಲ್ಲಿಟ್ಟಿದ್ದ ಪಿಸ್ತೂಲ್ ಅನ್ನು ಆಟಿಕೆಯೆಂದು ತಪ್ಪಾಗಿ ಭಾವಿಸಿ ಅದನ್ನು ತನ್ನ ಶಾಲೆಗೆ ತಂದ ಘಟನೆ ಆಗಸ್ಟ್ 24 ರಂದು ದೆಹಲಿಯಲ್ಲಿ (Delhi News) ನಡೆದಿದೆ. ದೀಪಕ್‌ ವಿಹಾರ್‌ನ ಗ್ರೀನ್ ವ್ಯಾಲಿ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯಿಂದ ಕರೆ ಬಂದ ನಂತರ ಪೊಲೀಸರು ವಿದ್ಯಾರ್ಥಿಯ ಚೀಲದಿಂದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

ಆಡಳಿತ ಮಂಡಳಿ ತಕ್ಷಣ ಬಾಲಕನ ತಾಯಿಯನ್ನು ಕರೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಯ ತಾಯಿ, ಪಿಸ್ತೂಲ್‌ ಕೆಲವು ತಿಂಗಳ ಹಿಂದೆ ನಿಧನರಾದ ಬಾಲಕನ ತಂದೆಗೆ ಸೇರಿದ್ದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂದೂಕಿಗೆ ಪರವಾನಗಿ ಇದೆ ಎಂದು ಅವಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್‌ ಮಾಡಲು ಪಿಸ್ತೂಲ್ ಅನ್ನು ಹೊರಗೆ ಇಟ್ಟಿದ್ದೆ ಎಂದು ತಾಯಿ ಹೇಳಿದ್ದಾರೆ.

ಇದನ್ನೂ ಓದಿ: Shocking Video : ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಪೊಲೀಸ್‌ ವಶಕ್ಕೆ

ಪರಿಶೀಲನೆಯ ನಂತರ ಪಿಸ್ತೂಲ್‌‌ನ ಪರವಾನಗಿ ಮಾನ್ಯವೆಂದು ಕಂಡುಬಂದಿದ್ದರಿಂದ ಗುರುತಿಸಬಹುದಾದ ಅಪರಾಧ ನಡೆದಿಲ್ಲ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ವಿದ್ಯಾರ್ಥಿಯ ತಾಯಿ ಪಿಸ್ತೂಲ್ ಅನ್ನು ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಮಾಡಿದ್ದಾರೆ.

Exit mobile version