Site icon Vistara News

Dhawal Kulkarni : ಭಾರತ ತಂಡದ ಮಾಜಿ ವೇಗದ ಬೌಲರ್​ ಕ್ರಿಕೆಟ್​ನಿಂದ ನಿವೃತ್ತಿ

Dhawal Kulkarni

ಮುಂಬಯಿ: ರಣಜಿ ಟ್ರೋಫಿಯ (Ranji Cricket) ನಾಕೌಟ್ ಹಂತ ಮುಗಿದ ನಂತರ ಧವಳ್ ಕುಲಕರ್ಣಿ (Dhawal Kulkarni) ಕ್ರಿಕೆಟ್​ನಿಂದ ನಿವೃತ್ತರಾಗಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಅವರು ಭಾರತಕ್ಕಾಗಿ 12 ಏಕದಿನ ಮತ್ತು ಎರಡು ಟಿ 20 ಪಂದ್ಯಗಳನ್ನು ಆಡಿದ್ದಾರೆ. ರಣಜಿ ಟ್ರೋಫಿಯ ಗ್ರೂಪ್ ಹಂತದ ನಂತರ ಧವಳ್ ಕುಲಕರ್ಣಿ ಕ್ರಿಕೆಟ್​ನಿಂದ ನಿವೃತ್ತರಾಗಲು ನಿರ್ಧರಿಸಿದ್ದರು. ಆದರೆ ಎಂಸಿಎ ಆಯ್ಕೆದಾರರು ಮತ್ತು ತರಬೇತುದಾರರು ಋತುವಿನ ಅಂತ್ಯದವರೆಗೆ ಅಲ್ಲಿಯೇ ಉಳಿಯುವಂತೆ ಕೇಳಿಕೊಂಡರು. ಧವಳ್ ಕುಲಕರ್ಣಿ 2014ರಲ್ಲಿ ಎಜ್​ಬಾಸ್ಟನ್​ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.

ಧವಳ್ ಕುಲಕರ್ಣಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 95 ಪಂದ್ಯಗಳಲ್ಲಿ 281 ವಿಕೆಟ್​ಗಳನ್ನು ಪಡೆದಿದ್ದರೆ, ಲಿಸ್ಟ್ ಎ 130 ಪಂದ್ಯಗಳಲ್ಲಿ 223 ವಿಕೆಟ್​ಗಳ ಗಮನಾರ್ಹ ಸಾಧನೆ ಮಾಡಿದ್ದಾರೆ. ಟಿ20ಯಲ್ಲಿ 27.99ರ ಸರಾಸರಿಯಲ್ಲಿ 154 ವಿಕೆಟ್​ ಪಡೆದಿದ್ದಾರೆ. 2008 ರಲ್ಲಿ ಮುಂಬೈ ಪರ ರಣಜಿಗೆ ಪಾದಾರ್ಪಣೆ ಮಾಡಿದ ಧವಳ್ ಕುಲಕರ್ಣಿ ತಮ್ಮ ಚೊಚ್ಚಲ ರಣಜಿ ಋತುವಿನಲ್ಲಿ 42 ವಿಕೆಟ್ ಉರುಳಿಸುವ ಮೂಲಕ ಆ ಋತುವಿನ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು.

ದೇಶೀಯ ಕ್ರಿಕೆಟ್​ನಲ್ಲಿ ಅವರ ಪ್ರದರ್ಶನದ ನಂತರ ಧವಳ್ ಕುಲಕರ್ಣಿ ಅವರನ್ನು 2009ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತ ತಂಡಕ್ಕೆ ಸೇರಿಸಲಾಯಿತು. ಆದಾಗ್ಯೂ ಆ ಪ್ರವಾಸದಲ್ಲಿ ಆಡಲು ಅವರಿಗೆ ಒಂದು ಪಂದ್ಯ ಸಿಕ್ಕಿರಲಿಲ್ಲ. ಭಾರತಕ್ಕಾಗಿ ಪಾದಾರ್ಪಣೆ ಮಾಡಲು ಇನ್ನೂ ಐದು ವರ್ಷ ಕಾಯಬೇಕಾಯಿತು. 2014ರಲ್ಲಿ, ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ಸರಣಿಯಲ್ಲಿ, ಅವರು ನಾಲ್ಕನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಕ್ಯಾಪ್ ಪಡೆದರು ಮತ್ತು ನಂತರ ವರ್ಷದ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ತವರು ಏಕದಿನ ಸರಣಿಯಲ್ಲಿ 18.62 ಸರಾಸರಿಯಲ್ಲಿ ಎಂಟು ವಿಕೆಟ್​​ಗಳನ್ನು ಪಡೆದರು.

2008-09, 2012-13 ಮತ್ತು 2015-16ರ ರಣಜಿ ಟ್ರೋಫಿ ಫೈನಲ್ ಸೇರಿದಂತೆ ದೊಡ್ಡ ಪಂದ್ಯಗಳಲ್ಲಿ ಮುಂಬೈ ಪರ ಆಡಿದ್ದಾರೆ. 2009-10ರ ಫೈನಲ್​​ನಲ್ಲಿ ಕರ್ನಾಟಕ ವಿರುದ್ಧದ ಎರಡನೇ ಇನ್ನಿಂಗ್ಸ್ನಲ್ಲಿ 87 ರನ್ ಗಳಿಸುವ ಮೂಲಕ ಮುಂಬೈ ತಂಡದ ಹೀರೋ ಆಗಿದ್ದರು.

18 ವರ್ಷಗಳ ವೃತ್ತಿ ಕ್ರಿಕೆಟ್​ಗೆ ವಿದಾಯ ಹೇಳಿದ ಭಾರತ ತಂಡದ ಮಾಜಿ ಆಟಗಾರ

ಬೆಂಗಳೂರು : ಭಾರತ ತಂಡದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwari) ಪ್ರಥಮ ದರ್ಜೆ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಅವರ ತಮ್ಮ 18 ವರ್ಷಗಳ ವೃತ್ತಿ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ತಿವಾರಿ ಹಿಂದೊಮ್ಮೆ ನಿವೃತ್ತಿ ಪಡೆದುಕೊಂಡು ಬಳಿಕ ತಮ್ಮ ನಿರ್ಧಾರ ಬದಲಿಸಿದ್ದರು. ಅನುಭವಿ ಬ್ಯಾಟ್ಸ್​​ಮನ್ ಈಗ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ಬಂಗಾಳ ಮತ್ತು ಬಿಹಾರ ನಡುವಿನ ರಣಜಿ ಟ್ರೋಫಿ ಪಂದ್ಯದ ನಂತರ ರೆಡ್-ಬಾಲ್ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಬಂಗಾಳ ತಂಡದ ಯಶಸ್ವಿ ನಾಯಕ ತಿವಾರಿ ಸಾಮಾಜಿಕ ಜಾಲತಾಣಗಳಲ್ಲಿ ವಿದಾಯದ ಹೃದಯಸ್ಪರ್ಶಿ ಘೋಷಣೆ ಮಾಡಿದದ್ದಾರೆ. ತಮ್ಮ ಕ್ರಿಕೆಟ್ ಕನಸಿನ ತೊಟ್ಟಿಲು ಈಡನ್ ಗಾರ್ಡನೊಂದಿಗಿನ ತಮ್ಮ ಆಳವಾದ ಸಂಬಂಧವನ್ನು ಅವರು ವ್ಯಕ್ತಪಡಿಸಿದ್ದಾರೆ. ತಮ್ಮ ಭಾವನಾತ್ಮಕ ವಿದಾಯದ ಸಂದೇಶದಲ್ಲಿ ಅವರು ತಮ್ಮ ಅಂತಿಮ ಪ್ರದರ್ಶನಕ್ಕೆ ಸಾಕ್ಷಿಯಾಗಲು ಅವರು ತಮ್ಮ ಅಭಿಮಾನಿಗಳನ್ನು ಆಹ್ವಾನಿಸಿದರು.

ಇದನ್ನೂ ಓದಿ : Ravindra Jadeja : ತವರು ನೆಲದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದ ರವೀಂದ್ರ ಜಡೇಜಾ

“ಇದು ಕೊನೆಯ ಆಟದ ಸಮಯ. ಬಹುಶಃ ಕೊನೆಯ ಬಾರಿಗೆ 22 ಗಜಗಳ ಪಿಚ್​ಗಳ ನಡುವಿನ ದೀರ್ಘ ನಡಿಗೆ ಮಾಡಲಿದ್ದೇನೆ.. ನಾನು ಕ್ರಿಕೆಟ್​ ಪ್ರೀತಿಯ ಪ್ರತಿಯೊಂದು ಅಂಶವನ್ನು ಕಳೆದುಕೊಳ್ಳುತ್ತೇನೆ. ಇಷ್ಟು ವರ್ಷಗಳ ಕಾಲ ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಮತ್ತು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಬಂಗಾಳವನ್ನು ಹುರಿದುಂಬಿಸಲು ನೀವೆಲ್ಲರೂ ನಾಳೆ ಮತ್ತು ಮರುದಿನ ನನ್ನ ನೆಚ್ಚಿನ ಈಡನ್​ಗಾರ್ಡನ್ಸ್​ಗೆ ಬನ್ನಿ. ಕ್ರಿಕೆಟ್​​ನ ನಿಷ್ಠಾವಂತ ಸೇವಕ ನಿಮ್ಮ ಮನೋಜ್ ತಿವಾರಿ, “ಎಂದು ಅವರು ‘ಎಕ್ಸ್’ ನಲ್ಲಿ ಬರೆದಿದ್ದಾರೆ.

2006 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ ತಿವಾರಿ, ಶೀಘ್ರದಲ್ಲೇ ಪ್ರತಿಭೆಗಳ ಆಗರವಾದರು. 2008 ರ ವೇಳೆಗೆ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಸಂಕ್ಷಿಪ್ತವಾಗಿದ್ದರೂ, 12 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಒಳಗೊಂಡಿವೆ. ಆದರೆ ಅವರ ದೇಶೀಯ ಟೂರ್ನಿಗಳ ಪರಾಕ್ರಮವು ಎಂದಿಗೂ ಕಡಿಮೆಯಾಗಲಿಲ್ಲ. 12 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ತಿವಾರಿ 26.09ರ ಸರಾಸರಿಯಲ್ಲಿ 287 ರನ್ ಗಳಿಸಿದ್ದಾರೆ. 3ಟಿ 20 ಪಂದ್ಯಗಳಲ್ಲಿ ಅವರು ಆಡಿದ ಏಕೈಕ ಇನ್ನಿಂಗ್ಸ್​ನಲ್ಲಿ ಕೇವಲ 15 ರನ್ ಗಳಿಸಲು ಸಾಧ್ಯವಾಗಿದೆ.

Exit mobile version