Site icon Vistara News

Dina Bhavishya: ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನದಂತೆ ತೋರುತ್ತದೆ!

Dina Bhavishya

ಚಂದ್ರನು ಸಿಂಹ ರಾಶಿಯಿಂದ ಬುಧವಾರ 01:38ಕ್ಕೆ ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಕನ್ಯಾ ರಾಶಿಯವರಿಗೆ ಹಣಕಾಸು, ವ್ಯಾಪಾರ- ವ್ಯವಹಾರಗಳಲ್ಲಿ ಲಾಭ. ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಮೀನ ರಾಶಿಯವರು ಆಪ್ತರೊಂದಿಗೆ ಅನಿವಾರ್ಯ ಕಾರಣದಿಂದ ಮುನಿಸಿಕೊಳ್ಳುವ ಸಾಧ್ಯತೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (13-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಸಪ್ತಮಿ 21:32 ವಾರ: ಗುರುವಾರ
ನಕ್ಷತ್ರ: ಪೂರ್ವ ಪಾಲ್ಗುಣಿ 29:07 ಯೋಗ: ವಜ್ರ 18:03
ಕರಣ: ಗರಜ 08:21 ಅಮೃತ ಕಾಲ: ರಾತ್ರಿ 9:57 ರಿಂದ 11:45 ವರೆಗೆ
ದಿನದ ವಿಶೇಷ: ಬೆಂಗಳೂರು ಕೋಟೆ ರಥ

ಸೂರ್ಯೋದಯ : 05:42   ಸೂರ್ಯಾಸ್ತ : 07:07

ರಾಹುಕಾಲ: ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ಯಾರಾದರೂ ನಿಮ್ಮ ಸಹಾಯ ಕೇಳಬಹುದು. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಬಂಧದ ಆ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ಪ್ರೇಮಿಗಳಿಗೆ ಇಂದು ಹೊಸ ಆಶಾಭಾವನೆ ಮೂಡಿಸಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

ವೃಷಭ: ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ. ಸಾಮಾಜಿಕ ಕಾರ್ಯಗಳಲ್ಲಿ ಹಾಜರಾಗಲು ಅವಕಾಶಗಳು ಬರಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯಕ್ಕೆ ಬಹಳಷ್ಟು ಮೆಚ್ಚುಗೆ ಸಿಗುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣ, ಹಣಕಾಸು ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಮಧ್ಯಮ ಫಲ. ಅದೃಷ್ಟ ಸಂಖ್ಯೆ: 1

ಮಿಥುನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಹಣಕಾಸು ಯೋಜನೆಗಳ ಕುರಿತಾಗಿ ಆಲೋಚನೆ, ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುತ್ತಾನೆ, ಆದ್ದರಿಂದ ಕೆಲವೊಮ್ಮೆ ನಿಮ್ಮ ಮೇಲೆ ಕೋಪವನ್ನು ಸಹ ತೋರಿಸಬಹುದು. ಅವರ ಕೋಪಕ್ಕೆ ಕೋಪಗೊಳ್ಳುವುದಕ್ಕಿಂತ ಅವರ ಮಾತುಗಳನ್ನು ನೀವು ಅರ್ಥಮಾಡಿಕೊಳ್ಳುವುದು ಉತ್ತಮ. ಹಳೆ ಸ್ನೇಹಿತರೊಂದಿಗೆ ಭೇಟಿ, ಮಾತನಾಡಲು ಯೋಜಿಸಬಹುದು. ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ, ಕೌಟುಂಬಿಕ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

ಕಟಕ: ಅನಗತ್ಯ ಖರ್ಚಿನ ಹೊರತಾಗಿಯೂ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನಿಮ್ಮ ಆಕರ್ಷಿತ ವ್ಯಕ್ತಿತ್ವವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ವಾಹನ ಚಾಲನೆ ಮಾಡುವಾಗ ಜಾಗೃತೆ ಅವಶ್ಯವಾಗಿ ವಹಿಸಿ, ಅಪಘಾತ ಸಂಭವ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ.ಮನದ ಬಯಕೆ ಇಡೆರುವ ಆಶಾಭಾವನೆ ಮೂಡಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಸಿಂಹ: ಭೂಮಿ ಸಂಬಂಧಿ ವ್ಯವಹಾರ ನಡೆಯುವ ಸಾಧ್ಯತೆ ಇದ್ದು, ನಿಮಗೆ ಲಾಭದಾಯಕವಾಗಲಿದೆ. ನಿಮ್ಮ ಪ್ರೀತಿ ಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಉದ್ಯೋಗಿಗಳಿಗೆ ನಿಧಾನಗತಿಯಿಂದಾಗಿ ಸ್ವಲ್ಪ ಒತ್ತಡ ತರುವ ಸಾಧ್ಯತೆ. ಸಂಗಾತಿಯ ಮಾತುಗಳು ಹಿತವೇನಿಸುವುದು. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಕನ್ಯಾ: ಒತ್ತಡ ಮುಕ್ತವಾಗಿ ಶಾಂತ ವಾತಾವರಣ ನಿರ್ಮಾಣವಾಗಲಿದೆ. ಹಣಕಾಸು, ವ್ಯಾಪಾರ- ವ್ಯವಹಾರಗಳಲ್ಲಿ ಲಾಭ. ಅನಿವಾರ್ಯ ಕಾರಣ ನೀವು ಖರ್ಚು ಮಾಡುವ ಸಾಧ್ಯತೆಯಿಂದಾಗಿ ಮನಸ್ಸಿಗೆ ಕೊಂಚ ಬೇಸರ. ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನದಂತೆ ತೋರುತ್ತದೆ. ನಿಮಗೆ ಅಗತ್ಯವಿಲ್ಲದ ವಿಷಯಗಳ ಮೇಲೆ ಇಂದು ನಿಮ್ಮ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡವುದು ಬೇಡ. ಆರೋಗ್ಯ ಪರಿಪೂರ್ಣ. ಸಂಗಾತಿಯ ಮಾತುಗಳು ಅಹಿತವೆನಿಬಹುದು. ಕಲಹಗಳಿಗೆ ಆಸ್ಪದ ಕೊಡಬೇಡಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಪ್ರೇಮ ಪ್ರಕರಣ ಹದಗೆಡುವ ಸಾಧ್ಯತೆ. ಅನಿವಾರ್ಯ ಪ್ರಸಂಗಗಳಿಂದಾಗಿ ಪ್ರಯಾಣ ಸಾಧ್ಯತೆ. ಸಂಬಂಧಿಕರ ಹಸ್ತಕ್ಷೇಪ ದಾಂಪತ್ಯ ಜೀವನದಲ್ಲಿ ವೈರತ್ವ ಮೂಡುವಂತೆ ಮಾಡಬಹುದು, ಅದಕ್ಕೆ ಅವಕಾಶ ಕೊಡಬೇಡಿ. ಆರೋಗ್ಯ ಪರಿಪೂರ್ಣ, ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಆರ್ಥಿಕ ಸ್ಥಿತಿ ಉತ್ತಮ.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

ವೃಶ್ಚಿಕ : ನಿಮ್ಮ ಆಕರ್ಷಿತ ವ್ಯಕ್ತಿತ್ವ ಇತರರನ್ನು ಸೆಳೆಯಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದ್ದು, ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಪಾಲಕರು ಮತ್ತು ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸಲು ಅವರಿಗೆ ಸಾಧ್ಯವಾದುದ್ದನ್ನೆಲ್ಲ ಮಾಡುತ್ತಾರೆ. ಇಂದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿ ನಿಮ್ಮ ಬಹುನಿರೀಕ್ಷಿತ ಕಲ್ಪನೆಗಳನ್ನು ಸಾಕ್ಷಾತ್ಕಾರ ಮಾಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಭವಿಷ್ಯದ ಹೂಡಿಕೆ ಬಗೆಗೆ ಆಲೋಚನೆ. ಆಪ್ತರ ಆಗಮನದಿಂದ ಕಾರ್ಯದಲ್ಲಿ ವಿಳಂಬ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಧನಸ್ಸು: ಹಣಕಾಸು ಹೂಡಿಕೆ ಬಗೆಗೆ ಆಲೋಚನೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಮನೆಯಲ್ಲಿನ ವ್ಯತಿರಿಕ್ತ ವಾತಾವರಣ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ. ಅದರಿಂದ ದೂರ ಇರಿ. ನಿಮ್ಮ ಆಪ್ತರೊಂದಿಗೆ ವಿಷಯ ಹಂಚಿಕೊಳ್ಳುವ ಸಾಧ್ಯತೆ. ಆದರೆ ಗೌಪ್ಯ ವಿಷಯಗಳು ಗೌಪ್ಯವಾಗಿದ್ದರೆ ಚೆನ್ನ. ದೈಹಿಕ ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

ಮಕರ: ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಅತಿಥಿಗಳ ಆಗಮನ ಕೊಂಚ ಮಟ್ಟಿಗೆ ಸಮಾಧಾನ ತರಿಸಬಹುದು. ಉದ್ಯೋಗದ ಸ್ಥಳದಲ್ಲಿ ಮಾತಿನ ನಿಯಂತ್ರಣ ತಪ್ಪಿ ಅಪಾಯ ತಂದು ಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

ಕುಂಭ: ನಿಮ್ಮ ಅಪಾರ ವಿಶ್ವಾಸ ನಿಮಗೆ ಯಶಸ್ಸು ತಂದುಕೊಡಲಿದೆ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ. ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಮನಸ್ಸಿಗೆ ನೋವುಂಟು ಆಗುವ ಸಾಧ್ಯತೆ. ನೀವು ಅತೀ ಉದಾರಿಯಾಗಿದ್ದಲ್ಲಿ – ನಿಮ್ಮ ನಿಕಟ ಜನರು ನಿಮ್ಮ ಅನುಚಿತ ಲಾಭ ತೆಗೆದುಕೊಳ್ಳಬಹುದು. ಸ್ನೇಹಿತರೊಬ್ಬನೊಂದಿಗೆ ಇಂದು ಸಮಯವನ್ನು ಕಳೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ, ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಮೀನ: ವೃಥಾ ಗಾಳಿಯಲ್ಲಿ ಗೋಪುರ ಕಟ್ಟಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬದಲಿಗೆ ಏನಾದರೂ ಅರ್ಥಪೂರ್ಣವಾದುದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಆಪ್ತರೊಂದಿಗೆ ಅನಿವಾರ್ಯ ಕಾರಣದಿಂದ ಮುನಿಸಿಕೊಳ್ಳುವ ಸಾಧ್ಯತೆ. ಇದಕ್ಕೆ ಅವಕಾಶ ಕೊಡದೆ ನಿಮ್ಮ ಹಾಸ್ಯ ಮನೋಭಾವನೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಸಂಗಾತಿಯ ಮಾತುಗಳು ಹಿತವೆನಿಸುತ್ತದೆ. ಆರೋಗ್ಯ ಮಧ್ಯಮ. ಆರ್ಥಿಕ ಪ್ರಗತಿ ಸಾಧಾರಣ.ಕೌಟುಂಬಿಕವಾಗಿ ಶುಭ ಫಲ ಅದೃಷ್ಟ ಸಂಖ್ಯೆ: 5

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version