ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದೆಲ್ಲ ಮಾಹಿತಿ ಅಲ್ಲ. ಅದರಲ್ಲೂ, ಜಾಲತಾಣ ಈಗ ತುಂಬ ಪ್ರಭಾವಿಯಾಗಿರುವುದರಿಂದ ಸುಳ್ಳು ಮಾಹಿತಿ, ವದಂತಿಗಳಿಗೆ ಬರವಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮದ್ಯ ಸೇವಿಸುತ್ತ, ಲ್ಯಾಪ್‌ಟಾಪ್‌ನಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯನ್ನು ವೀಕ್ಷಿಸುತ್ತಿದ್ದಾರೆ ಎಂಬ ಮಾಹಿತಿ (Fact Check) ಹರಡುತ್ತಿದೆ.
ಸ್ಮೃತಿ ಇರಾನಿ ಅವರು ಲ್ಯಾಪ್‌ಟಾಪ್ ನೋಡುತ್ತ ಕುಳಿತಿದ್ದು, ಸ್ಕ್ರೀನ್ ಮೇಲೆ ರಾಹುಲ್ ಗಾಂಧಿ ಫೋಟೊ ಇದೆ. ಹಾಗೆಯೇ, ಟೇಬಲ್ ಮೇಲೆ ಮದ್ಯ ತುಂಬಿರುವ ಗ್ಲಾಸ್ ಇದೆ. ಹಾಗಾಗಿ, ಮೇಲ್ನೋಟಕ್ಕೆ ಯಾರು ನೋಡಿದರೂ, ಸ್ಮೃತಿ ಇರಾನಿಯವರು ರಾಹುಲ್ ಗಾಂಧಿ ಅವರ ಯಾತ್ರೆಯ ವಿಡಿಯೊ ನೋಡುತ್ತ, ಮದ್ಯ ಸೇವಿಸುತ್ತಿದ್ದಾರೆ ಎಂದು ಅನಿಸುತ್ತದೆ. ಆದರೆ, ಇದು ಎಷ್ಟರಮಟ್ಟಿಗೆ ನಿಜವಾದ ಸುದ್ದಿ ಅಥವಾ ಫೋಟೊ ಎಂಬುದೇ ಪ್ರಶ್ನೆಯಾಗಿದೆ.
ವಾಸ್ತವವೇನು?
ಸ್ಮೃತಿ ಇರಾನಿಯವರು ಕುಳಿತು ಲ್ಯಾಪ್‌ಟಾಪ್ ನೋಡುತ್ತಿರುವುದೇನೋ ನಿಜ, ಆದರೆ ಅವರು ರಾಹುಲ್ ಗಾಂಧಿ ಅವರ ವಿಡಿಯೊ ನೋಡುತ್ತಿರಲಿಲ್ಲ. ಹಾಗೆಯೇ, ಟೇಬಲ್ ಮೇಲೆ ಇದ್ದ ಗ್ಲಾಸ್‌ನಲ್ಲಿ ಮದ್ಯದ ಬದಲು ನೀರು ಇರುವುದು ಸ್ಮೃತಿ ಇರಾನಿ ಅವರೇ ಪೋಸ್ಟ್ ಮಾಡಿದ ಫೋಟೊದಿಂದ ಬಯಲಾಗಿದೆ. ಹಾಗಾಗಿ, ಸ್ಮೃತಿ ಇರಾನಿ ಅವರ ಫೋಟೊವನ್ನು ತಿರುಚಿ, ಅದನ್ನು ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ | Fact Check | ಮೋದಿ ಚೀತಾ ಬಿಡುವ ವೇದಿಕೆ ರಚನೆಗೆ ಮರ ಕಡಿಯಲಾಯಿತೇ? ಇಲ್ಲಿದೆ ವಾಸ್ತವ