Site icon Vistara News

Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ

Dust Storm

ಮುಂಬೈ: ಇಲ್ಲಿನ ಘಾಟ್​ಕೋಪರ್​ನಲ್ಲಿ ಧೂಳು ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಜಾಹೀರಾತು ಫಲಕ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 59 ಜನರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್​​ಡಿಆರ್​) ಒಂದು ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುತ್ತಿದೆ. ಧೂಳು ಗಾಳಿಗೆ ಅನೇಕ ಕಡೆ ಅನಾಹುತಗಳು ಸಂಭವಿಸಿವೆ.

ಭಯಾನಕ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿಯ ಬರ್ಕತ್ ಅಲಿ ನಾಕಾದಲ್ಲಿ ಘಟನೆ ನಡೆದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಒಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ಈ ಹಿಂದೆ ಮೇ 13 ರಂದು ನಗರದ ಕೆಲವು ಭಾಗಗಳಿಗೆ ಯೆಲ್ಲೊ ಅಲರ್ಟ್​ (Yellow Alret) ಎಚ್ಚರಿಕೆ ನೀಡಿತ್ತು. ವಿಶೇಷವಾಗಿ ಥಾಣೆ ಮತ್ತು ರಾಯಗಡ್ ಜಿಲ್ಲೆಗಳಲ್ಲಿ ಭಾರಿ ಮಳೆ, ಗುಡುಗು ಮತ್ತು ಶುಷ್ಕ, ವೇಗದ ಗಾಳಿಯ ಎಚ್ಚರಿಕೆ ನೀಡಿತ್ತು.

2024 ರ ಮೇ 16 ರಿಂದ ವಾಯುವ್ಯ ಭಾರತದಲ್ಲಿ ಹೊಸ ಶಾಖದ ಅಲೆ ಪ್ರಾರಂಭವಾಗುವ ಸಾಧ್ಯತೆಯಿದೆ. 2. 2024 ರ ಮೇ 17 ರವರೆಗೆ ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲಿ ಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ಪ್ರತ್ಯೇಕ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಕ್ಸ್ ನಲ್ಲಿ ಪೋಸ್ಟ್​ನಲ್ಲಿ ತಿಳಿಸಿತ್ತು.

ಇದನ್ನೂ ಓದಿ: Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

ಹೋರ್ಡಿಂಗ್ ಬಿದ್ದ ಕಾರಣ ಪೂಜಾ ಜಂಕ್ಷನ್ (ವಡಾಲಾ) ನಾರ್ತ್ ಬೌಂಡ್ ಮತ್ತು ಫ್ರೀವೇ ಟನಲ್ ಟ್ರಾಂಬೆ ಸೌತ್ ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಮುಂಬೈ ಮೆಟ್ರೋದ ಸಂಚಾರಕ್ಕೂ ಸಮಸ್ಯೆಯಾಗಿದೆ. ಭಾರೀ ಗಾಳಿಯಿಂದಾಗಿ, ಏರ್ಪೋರ್ಟ್ ರಸ್ತೆ ಮೆಟ್ರೋ ನಿಲ್ದಾಣದ ಬಳಿಯ ಒಹೆಚ್ಇಯಲ್ಲಿ ಬಟ್ಟೆ ಸಿಲುಕಿಕೊಂಡಿತು/ ಇದರ ಪರಿಣಾಮವಾಗಿ ಮೆಟ್ರೋ ಸೇವೆಗೆ ಅಡ್ಡಿಯಾಯಿತು. ರೈಲುಗಳು ಈಗ ನಿಗದಿತ ಸಮಯಕ್ಕೆ ತಲುಪಲಿಲ್ಲ ಎಂದು ಹೇಳಿದ್ದರು.

Exit mobile version