ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (KOMUL)ದಲ್ಲಿ 2023ರಲ್ಲಿ ನಡೆದಿದೆ ಎನ್ನಲಾದ ನೇಮಕ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯವು ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ ಪತ್ರ ಬರೆದಿದೆ. ಕಾಂಗ್ರೆಸ್ ಶಾಸಕರೊಬ್ಬರ (Congress MLA) ನೇತೃತ್ವದಲ್ಲಿ ನಡೆದಿದೆ ಎನ್ನಲಾದ ನೇಮಕ ದ ಬಗ್ಗೆ ಎಫ್ಐಆರ್ ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮತ್ತು ಅವರ ಸಹಚರರ ವಿರುದ್ಧ ಜನವರಿಯಲ್ಲಿ ಫೆಡರಲ್ ಏಜೆನ್ಸಿ ನಡೆಸಿದ ಶೋಧದ ವೇಳೆ ‘ಉದ್ಯೋಗಕ್ಕಾಗಿ ಲಂಚ” ದಂಧೆ ಬೆಳಕಿಗೆ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅನರ್ಹ ವ್ಯಕ್ತಿಗಳಿಗೆ 150 ಕೋಟಿ ರೂ.ಗಳ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಅವರ ಮೇಲೆ ದಾಳಿ ನಡೆಸಿ ತನಿಖೆ ನಡೆಸಲಾಗಿತ್ತು. ಈ ವೇಳೆ ಉದ್ಯೋಗದ ಅಕ್ರಮ ಬೆಳಕಿಗೆ ಬಂದಿತ್ತು.
2023ರ ಸೆಪ್ಟೆಂಬರ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಲಿಖಿತ ಪರೀಕ್ಷೆಯ ಮೂಲಕ 81 ಹುದ್ದೆಗಳಿಗೆ ನೇಮಕಾತಿ ನಡೆಸುವುದಾಗಿ ಕೋಮುಲ್ ಘೋಷಿಸಿತ್ತು. ಕೊಮುಲ್ ಅಧ್ಯಕ್ಷ ನಂಜೇಗೌಡ, ಕೊಮುಲ್ ಮಂಡಳಿಯ ನಿರ್ದೇಶಕ ಕೆ.ಎನ್.ನಾಗರಾಜ್, ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್ ಲಿಂಗರಾಜು, ಕರ್ನಾಟಕ ಹಾಲು ಮಹಾಮಂಡಳದ ಪ್ರತಿನಿಧಿ ಬಿ.ಪಿ.ರಾಜು ಮತ್ತು ಕೋಮುಲ್ ಎಂಡಿ ಗೋಪಾಲ ಮೂರ್ತಿ ನೇತೃತ್ವದ ನೇಮಕಾತಿ ಸಮಿತಿಯು ಲಿಖಿತ ಪರೀಕ್ಷೆ (ಶೇ.85ಅಂಕ ) ನಂತರ ಸಂದರ್ಶನ (ಶೇಕಡಾ 15 ಅಂಕ) ಗಳ ಆಧಾರದಲ್ಲಿ ನೇಮಕ ಮಾಡಲಾಗಿತ್ತು.
ಇದನ್ನೂ ಓದಿ Kangana Ranaut : ಇದೆಂಥಾ ನಾಲಗೆ? ಬಿಜೆಪಿ ಅಭ್ಯರ್ಥಿ ಕಂಗನಾರನ್ನು ವೇಶ್ಯೆ ಎಂದು ಕರೆದ ಬಿಹಾರದ ರಾಜಕಾರಣಿ
2023 ರ ಡಿಸೆಂಬರ್ನಲ್ಲಿ 320 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ 75 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕೋಮುಲ್ ಮಂಡಳಿ ಅನುಮೋದಿಸಿತ್ತು. ಈ ಅಭ್ಯರ್ಥಿಗಳನ್ನು ನಂತರ ಫಲಿತಾಂಶಗಳನ್ನು ಪ್ರಕಟಿಸದೆ ತರಬೇತಿಗೆ ಕಳುಹಿಸಲಾಗಿತ್ತು.
ದಾಖಲೆಗಳ ತಿರುಚುವಿಕೆ ಆರೋಪ
ಅಧಿಕೃತ ದಾಖಲೆಗಳ ಪ್ರಕಾರ, “ತಿರುಚಿದ” ಒಎಂಆರ್ ಶೀಟ್ಗಳು ಅಭ್ಯರ್ಥಿಗಳ ಹೆಸರುಗಳು ಮತ್ತು ಅವರಿಂದ ಸಂಗ್ರಹಿಸಿದ ಹಣವನ್ನು ಹೊಂದಿರುವ ಸಡಿಲ ಹಾಳೆಗಳು, ತಮ್ಮ ನೆಚ್ಚಿನ ಅಭ್ಯರ್ಥಿಗಳ ಆಯ್ಕೆಗಾಗಿ ರಾಜಕಾರಣಿಗಳಿಂದ ಪಡೆದ “ಶಿಫಾರಸುಗಳು ” ಮತ್ತು ವಿಶ್ವವಿದ್ಯಾಲಯ ಮತ್ತು ಕೋಮುಲ್ ನಿರ್ದೇಶಕರ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ಫೋನ್ ಕರೆಗಳು ಮತ್ತು ವಾಟ್ಸಾಪ್ ಚಾಟ್ಗಳಂಥ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸುವಂತೆ ಇಡಿ ಸೂಚನೆ ನೀಡಿತ್ತು.
ಈ ಸಂಶೋಧನೆಗಳು ಮತ್ತು ಪುರಾವೆಗಳನ್ನು ಜಾರಿ ನಿರ್ದೇಶನಾಲಯವು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಕರ್ನಾಟಕ ರಾಜ್ಯಪಾಲರು ಮತ್ತು ರಾಜ್ಯ ಲೋಕಾಯುಕ್ತ ಸಂಸ್ಥೆಗೆ ಸೂಚನೆ ನೀಡಿತ್ತು. ಎಲ್ಲ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸುವಂತೆ ಹೇಳಿದೆ.