Site icon Vistara News

Narendra Modi : ಭಾರತೀಯ ಮೌಲ್ಯಗಳನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆ ಅಗತ್ಯ; ಮೋದಿ

Narendra Modi

Arunachal Is, Was, Will Always be Part of Bharat: PM Narendra Modi on China's Claim

ಟಂಕಾರಾ (ಗುಜರಾತ್): ಭಾರತೀಯ ಮೌಲ್ಯಗಳನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆಯು ಇಂದಿನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಹೇಳಿದ್ದಾರೆ. ಆರ್ಯ ಸಮಾಜದ (Arya Samaj) ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆಯ ಅಂಗವಾಗಿ ಗುಜರಾತ್​​ನ ಮೊರ್ಬಿ ಜಿಲ್ಲೆಯ ಅವರ ಜನ್ಮಸ್ಥಳ ಟಂಕರಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಭಾಷಣ ಮಾಡಿ, ಸಮಾಜ ಸುಧಾರಕರನ್ನು ನೆನೆದರು.

ಜನರು ಗುಲಾಮಗಿರಿಯಲ್ಲಿ ಸಿಲುಕಿರುವ ಮತ್ತು ಮೂಢನಂಬಿಕೆಗಳು ದೇಶವನ್ನು ಆವರಿಸಿರುವ ಸಮಯದಲ್ಲಿ ಭಾರತೀಯ ಸಮಾಜವು ವೇದಗಳಿಗೆ ಮರಳಬೇಕೆಂದು ಕರೆ ನೀಡಿದ ಸಮಾಜ ಸುಧಾರಕ ದಯಾನಂದ ಸರಸ್ವತಿ ಅವರನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮೊದಲಾಗಿ ಸ್ಮರಿಸಿದರು.

ಭಾರತೀಯ ಮೌಲ್ಯಗಳನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆಯು ಪ್ರಸಕ್ತ ಸಮಯದ ಅಗತ್ಯವಾಗಿದೆ. ಆರ್ಯ ಸಮಾಜದ ಶಾಲೆಗಳು ಇದಕ್ಕೆ ಕೇಂದ್ರವಾಗಿವೆ. ದೇಶವು ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಅದನ್ನು ವಿಸ್ತರಿಸುತ್ತಿದೆ. ಹೊಸ ಪ್ರಯತ್ನಗಳೊಂದಿಗೆ ಸಮಾಜದಲ್ಲಿ ಬದಲಾವಣೆ ತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತೀಯರು ಗುಲಾಮಗಿರಿ ಮತ್ತು ಸಾಮಾಜಿಕ ಪಿಡುಗುಗಳಲ್ಲಿ ಸಿಲುಕಿದ್ದ ಸಮಯದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಜನಿಸಿದರು. “ಸಂಪ್ರದಾಯ ಮತ್ತು ಮೂಢನಂಬಿಕೆಗಳ ನಮ್ಮ ದೇಶವನ್ನು ಆವರಿಸಿವೆ. ನಮ್ಮ ವೈಜ್ಞಾನಿಕ ಚಿಂತನೆಗಳನ್ನು ದುರ್ಬಲಗೊಳಿಸಿವೆ ಎಂದು ಸ್ವಾಮಿ ದಯಾನಂದರು ದೇಶಕ್ಕೆ ತಿಳಿಸಿದ್ದರು. ಅಂತೆಯೇ ಇದೀಗ ಸಾಮಾಜಿಕ ದುಷ್ಕೃತ್ಯಗಳು ನಮ್ಮ ಏಕತೆಯ ಭಂಗ ತರುತ್ತಿವೆ ” ಎಂದು ಪ್ರಧಾನಿ ಮೋದಿ ಹೇಳಿದರು.

ವೇದಗಳಿಗೆ ಮರಳಿ

ಸಮಾಜದ ಒಂದು ವರ್ಗವು ನಿರಂತರವಾಗಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಿಂದ ದೂರ ಸರಿಯುತ್ತಿದೆ. ಅಂತಹ ಕಷ್ಟದ ಸಮಯದಲ್ಲಿ, ಸ್ವಾಮಿ ದಯಾನಂದರು ವೇದಗಳಿಗೆ ಮರಳಲು ಕರೆ ನೀಡಿದ್ದಾರೆ. ಹೀಗಾಗಿ ಭಾರತೀಯತೆಯತ್ತ ಮರಳಬೇಕು ಎಂದು ಮೋದಿ ಹೇಳಿದರು.

ಇದನ್ನೂ ಓದಿ : Narendra Modi : ದಲಿತರು, ಒಬಿಸಿಗಳೇ ಮೋದಿ ಗ್ಯಾರಂಟಿಯ ಫಲಾನುಭವಿಗಳು ಎಂದ ಪ್ರಧಾನಿ

ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜಯಂತಿ ಭಾರತವು ಅಮೃತಕಾಲಕ್ಕೆ ಪ್ರವೇಶ ಪಡೆಯುವ ವರ್ಷಗಳಲ್ಲಿ ಬಂದಿದೆ ಎಂದು ಪ್ರಧಾನಿ ಹೇಳಿದರು. ಸ್ವಾಮಿ ದಯಾನಂದ ಸರಸ್ವತಿ ಅವರು ಭಾರತದ ಉಜ್ವಲ ಭವಿಷ್ಯದ ಕನಸು ಕಂಡಿದ್ದರು. ಅವರಿಂದ ಸ್ಫೂರ್ತಿ ಪಡೆದು ನಾವೆಲ್ಲರೂ ಈ ಅಮೃತ ಕಾಲದಲ್ಲಿ ಭಾರತವನ್ನು ಆಧುನಿಕತೆಯತ್ತ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.

ದೇಶ ಮತ್ತು ವಿದೇಶಗಳಲ್ಲಿ 2,500 ಕ್ಕೂ ಹೆಚ್ಚು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ನಡೆಸುತ್ತಿರುವ ಮತ್ತು 400 ಕ್ಕೂ ಹೆಚ್ಚು ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಆರ್ಯ ಸಮಾಜವು 21 ನೇ ಶತಮಾನದ ಪ್ರಸ್ತುತ ದಶಕದಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಹೊಸ ಹುರುಪಿನಿಂದ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದರು.

Exit mobile version