Site icon Vistara News

CWG- 2022 | ಟ್ರಿಪಲ್‌ ಜಂಪ್‌ನಲ್ಲಿ ಡಬಲ್‌ ಸ್ವೀಪ್‌, ಬಂಗಾರ ಗೆದ್ದ ಎಲ್ದೋಸ್‌, ಬೆಳ್ಳಿ ಗೆದ್ದ ಅಬೂಬಕರ್‌

CWG-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಭಾರತದ ಎಲ್ಡೋಸ್‌ ಪೌಲ್‌ ಚಿನ್ನದ ಪದಕ ಗೆದ್ದಿದ್ದರೆ, ಅಬ್ದುಲ್ಲಾ ಅಬೂಬಕರ್‌ ನರಂಗೋಲಿನ್ಟೆವಿಡ್‌ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್ವೆಲ್ತ್‌ ಗೇಮ್ಸ್‌ನ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರದ ದೊರೆಯುತ್ತಿರುವುದು ಇದೇ ಮೊದಲಾದರೆ, ಇದೇ ಸ್ಪರ್ಧೆಯಲ್ಲಿ ಎರಡೆರಡು ಪದಕಗಳನ್ನು ಗೆದ್ದಿರುವುದು ಕೂಡ ಹೊಸ ದಾಖಲೆಯಾಗಿದೆ.

ತಮ್ಮ ಮೂರನೇ ಪ್ರಯತ್ನದಲ್ಲಿ ೧೭.೦೩ ಮೀಟರ್‌ ದೂರಕ್ಕೆ ಜಿಗಿದ ಎಲ್ದೋಸ್‌ ಪೌಲ್‌ ಬಂಗಾರದ ಪದಕ ಗೆದ್ದುಕೊಂಡರೆ, ೧೭.೦೨ ಮೀಟರ್‌ ದೂರಕ್ಕೆ ಜಿಗಿದಿರುವ ಅಬ್ದುಲ್ಲಾ ಅಬೂಬಕರ್‌ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ಬರ್ಮುಡಾ ದೇಶದ ಜಾ ನಿ ಪೆರಿನ್ಸ್‌ಚೀಪ್‌ ೧೬. ೯೨ ಮೀಟರ್ ದೂರಕ್ಕೆ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಭಾರತದ ಇನ್ನೊಬ್ಬ ಸ್ಪರ್ಧಿ ಪ್ರವೀಣ್‌ ಚಿತ್ರವೇಲ್ ೧೬.೮೯ ಮೀಟರ್‌ ದೂರಕ್ಕೆ ಜಿಗಿದು ೩ ಮಿಲಿ ಸೆಂಟಿಮೀಟರ್‌ ಅಂತರದೊಂದಿಗೆ ಮೂರನೇ ಸ್ಥಾನ ಕಳೆದುಕೊಂಡರು. ಇಲ್ಲದಿದ್ದರೆ, ಮೂರೂ ಪದಕಗಳು ಭಾರತದ ಪಾಲಾಗುತ್ತಿದ್ದವು.

ಚಿನ್ನ ಗೆದ್ದಿದ್ದ ಎಲ್ದೋಸ್‌ ಅವರು ಮೊದಲ ಪ್ರಯತ್ನದಲ್ಲಿ ೧೪.೬೨ ಮೀಟರ್‌ ದೂರ ಜಿಗಿದ್ದಿದ್ದರು. ಈ ವೇಳೆ ಕಂಚು ಗೆದ್ದಿದ್ದ ಪೆರಿನ್ಸ್‌ಚೀಪ್‌ ಮೊದಲ ಜಿಗಿತದಲ್ಲಿಯೇ ೧೬. ೯೨ ಮೀಟರ್‌ ದೂರಕ್ಕೆ ಜಿಗಿದು ಮೊದಲ ಸ್ಥಾನ ಪಡೆದುಕೊಂಡರು. ಆದರೆ, ಮೂರನೆ ಯತ್ನದಲ್ಲಿ ಎಲ್ದೋಸ್ ಚಿನ್ನದ ಜಿಗಿತ ಜಿಗಿದರು. ಅಬೂಬಕರ್‌ ಅವರು ಐದನೇ ಪ್ರಯತ್ನದಲ್ಲಿ ಬೆಳ್ಳಿಯ ಜಿಗಿತ ಹಾರಿದರು.

ಇದನ್ನೂ ಓದಿ | CWG- 2022 | ನೀತೂ ಗಂಗಾಸ್‌ ಪಂಚ್‌ಗೆ ಒಲಿದ ಬಂಗಾರದ ಪದಕ

Exit mobile version