Site icon Vistara News

Mohammed Shami : ಪುತ್ರಿ ಐರಾ ದೂರವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶಮಿ

Mohammed Shami

ಬೆಂಗಳೂರು: ಭಾರತ ತಂಡದ ಪರ ತಮ್ಮ ಉತ್ತುಂಗದ ಪ್ರದರ್ಶನ ನೀಡುವುದರ ಹೊರತಾಗಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami ) ಅನೇಕ ಪ್ರತಿಭೆಗಳ ವ್ಯಕ್ತಿ. ಆದಾಗ್ಯೂ, 33 ವರ್ಷದ ಶಮಿ ಅವರ ವೈಯಕ್ತಿಕ ಜೀವನ ಚೆನ್ನಾಗಿಲ್ಲ. ಪತ್ನಿಯಿಂದ ಬೇರ್ಪಟ್ಟ ಹೊರತಾಗಿಯೂ ಅವರು ಕೋರ್ಟ್​ ಕೇಸ್​ಗಾಗಿ ಪರಿತಪಿಸುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ, ಶಮಿ ತಮ್ಮ ಮಗಳು ಆಯಿರಾಳ ಪ್ರೀತಿಯನ್ನು ನಷ್ಟ ಮಾಡಿಕೊಳ್ಳುತ್ತಿರುವ ವಿಷಯವನ್ನು ಬೇಸರದಿಂದ ಹೇಳಿಕೊಂಡಿದ್ದಾರೆ. ತನ್ನ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಐರಾಗೆ ತನ್ನೊಂದಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

ಶಮಿ ತಮ್ಮ ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಯಾರೂ ತಮ್ಮ ರಕ್ತ ಸಂಬಂಧವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಹೇಳಿದ್ದಾರೆ.. ತಮ್ಮ ವಿಚ್ಛೇದಿತ ಹೆಂಡತಿ ಅನುಮತಿ ನೀಡಿದಾಗ ಮಾತ್ರ ತಾನು ಮಗಳೊಂದಿಗೆ ಮಾತನಾಡುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಯಾರು ತಮ್ಮ ಮಕ್ಕಳು ಮತ್ತು ಕುಟುಂಬವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ನಿಸ್ಸಂಶಯವಾಗಿ, ಎಲ್ಲವೂ ನಿಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಆದರೆ ನಾನು ಅವಳನ್ನು (ಮಗಳನ್ನು) ಮಿಸ್ ಮಾಡಿಕೊಳ್ಳುತ್ತಿದ್ದೇನೆಯೇ ಎಂದು ನೀವು ನನ್ನನ್ನು ಕೇಳಿದರೆ, ಯಾರೂ ನಮ್ಮನ್ನೇ ಬೇರ್ಪಡಿಸಲು ಸಾಧ್ಯವಿಲ್ಲ”ಎಂದು ಶಮಿ ಹೇಳಿದ್ದಾರೆ.

“ನಾನು ಕೆಲವೊಮ್ಮೆ ಅವಳೊಂದಿಗೆ ಮಾತನಾಡುತ್ತೇನೆ. ಅವಳು (ಹಸೀನ್ ಜಹಾನ್) ಮಾತನಾಡಲು ಅನುಮತಿ ನೀಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ನಾನು ಇನ್ನೂ ಅವಳನ್ನು ಭೇಟಿ ಮಾಡಿಲ್ಲ. ನಾನು ಅವಳಿಗೆ ಉತ್ತಮ ಆರೋಗ್ಯ ಮತ್ತು ಸಾಕಷ್ಟು ಯಶಸ್ಸನ್ನು ಹಾರೈಸಲು ಬಯಸುತ್ತೇನೆ. ಅವಳ ತಾಯಿ ಮತ್ತು ನನ್ನ ನಡುವೆ ಏನು ನಡೆಯುತ್ತಿದೆ ಅದು ಮುಖ್ಯವಲ್ಲ. ಪುತ್ರಿ ಆರೋಗ್ಯಕರ ಜೀವನವನ್ನು ನಡೆಸಲಿ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಶಮಿ ಹೇಳಿದ್ದಾರೆ.

ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿಯೇ ಬಂದಿದೆ ಎಂದ ಮೊಹಮ್ಮದ್​ ಶಮಿ

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ಸಾದಾ ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. ಕ್ರಿಕೆಟ್ ಮೈದಾನದಲ್ಲಾಗಲಿ, ಸಾಮಾಜಿಕ ಮಾಧ್ಯಮವಾಗಲಿ ಪಾಕಿಸ್ತಾನವನ್ನು ಎದುರಿಸಲು ಮತ್ತು ನಿಂದಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇದು ನನ್ನ ರಕ್ತದಲ್ಲಿಯೇ ಬಂದಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Rohit Sharma : ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೊ ಮಾಡಿಕೊಂಡ ರೋಹಿತ್, ಪಾಂಡ್ಯ!

ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಿರೂಪಕರೊಬ್ಬರು, ನೀವು ಪಾಕಿಸ್ತಾನವನ್ನು ಹೆಚ್ಚು ನಿಂದಿಸುತ್ತೀರಿ ಎಂದು ಹೇಳಿದರು. ಇದಕ್ಕೆ ತಕ್ಷಣ ಉತ್ತರ ನೀಡಿದ ಶಮಿ, ಇದು ನನ್ನ ರಕ್ತದಲ್ಲಿದೆ(“ವೋ ತೋ ಖೂನ್ ಮೇ ಹೈ) ಎಂದು ಹೇಳಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದ ಹಸನ್​ ರಾಝಾ ಅವರಿಗೆ ಶಮಿ ಅವರು ತಕ್ಕ ತಿರುಗೇಟು ನೀಡಿದ್ದರು. ಭಾರತ ತಂಡಕ್ಕೆ ಐಸಿಸಿ ಮತ್ತು ಬಿಸಿಸಿಐ(ICC And BCCI) ಸೇರಿಕೊಂಡು ವಿಶೇಷ ಚೆಂಡನ್ನು ನೀಡುತ್ತಿದೆ. ಹೀಗಾಗಿ ಶಮಿ ಮತ್ತು ಉಳಿದ ಬೌಲರ್​ಗಳು ವಿಕೆಟ್​ ಈ ರೀತಿ ವಿಕೆಟ್​ ಕೀಳುತ್ತಿದ್ದಾರೆ ಎಂದು ಹಸನ್​ ರಾಝಾ ಹೇಳಿದ್ದರು. ಇದಕ್ಕೆ ತಿರಿಗೇಟು ನೀಡಿದ್ದ ಶಮಿ, ‘ಇದು ಗಲ್ಲಿ ಕ್ರಿಕೆಟ್​ ಅಲ್ಲ. ವಿಶ್ವಕಪ್ ಟೂರ್ನಿ. ಇಲ್ಲಿ ಆಟಗಾರರಿಂದ ಇಂತಹ ಪ್ರದರ್ಶನಗಳೇ ಮೂಡಿ ಬರುವುದು” ಎಂದು ಶಮಿ ರಾಝಾಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದರು.

Exit mobile version