Site icon Vistara News

IND vs ENG : ಭಾರತದ ವಿರುದ್ಧ ಹೂಡಲಿರುವ ತಂತ್ರಗಳನ್ನು ವಿವರಿಸಿದ ಇಂಗ್ಲೆಂಡ್ ಕೋಚ್​ ಮ್ಯಾಥ್ಯೂ ಮಾಟ್​

IND vs ENG

ಬೆಂಗಳೂರು : 2024 ರ ಟಿ 20 ವಿಶ್ವಕಪ್ (T20 World Cup 2024)ಸೆಮಿಫೈನಲ್​ನಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತವು ಒಡ್ಡಲಿರುವ ತಂತ್ರಗಳ ಬಗ್ಗೆ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಇಂಗ್ಲೆಂಡ್ (IND vs ENG) ಮುಖ್ಯ ಕೋಚ್ ಮ್ಯಾಥ್ಯೂ ಮಾಟ್ ತನ್ನ ತಂಡದ ಆಟಗಾರರಿಗೆ ಹೇಳಿದ್ದಾರೆ. ಜತೆಗೆ ಭಾರತವು ಯಾವ ತಂತ್ರವನ್ನು ಹೂಡಲಿದೆ ಎಂಬುದನ್ನು ಹೇಳಿದ್ದಾರೆ. ಆದಾಗ್ಯೂ ಭಾರತಕ್ಕೆ ಸೆಡ್ಡು ಹೊಡೆಯುವುದು ಖಚಿತ ಎಂಬುದಾಗಿ ಹೇಳಿದ್ದಾರೆ.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರ 2 ನೇ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಲಿವೆ. 2022 ರಲ್ಲಿ ಅಡಿಲೇಡ್ ಓವಲ್​ನಲ್ಲಿ ನಡೆದ ಹಿಂದಿನ ಟಿ 20 ವಿಶ್ವಕಪ್ ಸೆಮಿಯಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 10 ವಿಕೆಟ್​​ಗಳಿಂದ ಸೋಲಿಸಿತ್ತು. ಅದಕ್ಕೆ ಪ್ರತಿಕಾರ ತೀರಿಸಲು ಭಾರತ ಸಜ್ಜಾಗಿದೆ. ಆದರೆ, ಜೋಸ್​ ಬಟ್ಲರ್​ ಪಡೆ ಪ್ರಶಸ್ತಿ ಉಳಿಸಿಕೊಳ್ಳುವುದಕ್ಕೆ ಉತ್ತಮ ಅಭಿಯಾನ ಮಾಡಿದೆ. ತಂಡವು ಅತ್ಯುತ್ತಮವಾಗಿ ಕಾಣುತ್ತಿದೆ ಮತ್ತು ಉತ್ತಮ ಫಲಿತಾಂಶ ಪಡೆದುಕೊಂಡಿದೆ.

ಇಂಗ್ಲೆಂಡ್​ ಖಂಡಿತವಾಗಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ತಂಡವಾಗಿದೆ. ಕಳೆದ ವರ್ಷ 50 ಓವರ್​ಗಳ ವಿಶ್ವಕಪ್​ನಿಂದ ಸಾಕಷ್ಟು ಕಲಿತಿದೆ ಮತ್ತು ಆ ಸುಧಾರಣೆ ಈ ಟೂರ್ನಿಯಲ್ಲಿ ಅನಾವರಣಗೊಂಡಿದೆ. ಆದಾಗ್ಯೂ ಸೆಮಿಫೈನಲ್​​ನಲ್ಲಿ ಅಜೇಯ ಭಾರತ ತಂಡವನ್ನು ಸೋಲಿಸಬೇಕಾಗಿದೆ. ಹಿಂದಿನ ಟಿ 20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಜೋಸ್ ಬಟ್ಲರ್ ಬಳಗವು ಭಾರತವನ್ನು ಸುಲಭವಾಗಿ ಎದುರಿಸಿತ್ತು. ಈ ಬಾರಿ ಪರಿಸ್ಥಿತಿ ಹಾಗಿಲ್ಲ ಎಂದು ಹೇಳಿದ್ದಾರೆ.

ವಿಭಿನ್ನ ತಂಡ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ವಿಭಿನ್ನವಾಗಿ ಕಾಣುತ್ತಿದೆ ಎಂದು ಮ್ಯಾಥ್ಯೂ ಮಾಟ್​​ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮ್ಯಾಥ್ಯೂ , 2024 ರ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡವು ಎಷ್ಟು ವಿಭಿನ್ನವಾಗಿ ಕಾಣುತ್ತದೆ. ಅಡಿಲೇಡ್ ಓವಲ್​​ನಲ್ಲಿ ಉತ್ತಮ ಪಿಚ್​ನಲ್ಲಿ 2022 ರ ಸೆಮೀಸ್​​ನಷ್ಟು ಸುಲಭವಿಲ್ಲ. ರೋಹಿತ್​ ಪಡೆಯ ವಿರುದ್ದ ಗೆಲ್ಲಬೇಕಾದರೆ ಎಷ್ಟು ರನ್​ ಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

ರೋಹಿತ್ ಶರ್ಮಾ ಮತ್ತು ಅವರ ಮೆನ್ ಇನ್ ಬ್ಲೂ ಈ ಬಾರಿ ಇಂಗ್ಲೆಂಡ್ ವಿರುದ್ಧ ಕಠಿಣ ಹೋರಾಟ ನಡೆಸಲಿದೆ ಎಂದು ಮ್ಯಾಥ್ಯೂ ಮೊಟ್ ಹೇಳಿದ್ದಾರೆ. ಭಾರತವು ದೊಡ್ಡ ಮೊತ್ತವನ್ನು ದಾಖಲಿಸಲಿದೆ ಮತ್ತು ಹಾಲಿ ಚಾಂಪಿಯನ್ಸ್ ಆಗಿರುವ ತಮ್ಮ ತಂಡದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತದೆ ಎಂದು ಮೊಟ್ ಅಭಿಪ್ರಾಯಪಟ್ಟಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ಅತ್ಯಂತ ಸಮತೋಲಿತ ಎರಡು ತಂಡಗಳ ನಡುವೆ ಉತ್ತಮ ಸ್ಪರ್ಧೆಯಾಗಲಿದೆ ಎಂದು ಇಂಗ್ಲೆಂಡ್ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ಪವರ್​ಪ್ಲೇ ಅವಧಿಯನ್ನು ಬಳಸಿಕೊಳ್ಳಲಿದೆ. ಸ್ಕೋರ್ ನಮ್ಮ ಕೈಗೆಟುಕದಂತೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇಂದಿನ ಪಂದ್ಯವು ಎರಡು ಉತ್ತಮ ಬ್ಯಾಟಿಂಗ್ ಲೈನ್ಅಪ್​ಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ, ಬೌಲರ್​ಗಳು ಸಹ ಕ್ಲಾಸ್ ಆಗಿದ್ದಾರೆ. ಆದ್ದರಿಂದ ಆ ಪರಿಸ್ಥಿತಿಗಳನ್ನು ಯಾರು ಬಳಸಿಕೊಳ್ಳುತ್ತಾರೆ ಎಂಬುದೇ ನಿರ್ಣಾಯಕ ಮ್ಯಾಥ್ಯೂ ಮಾಟ್ ತಿಳಿಸಿದ್ದಾರೆ.

Exit mobile version