ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (EPFO) ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ಮಾಡಿಕೊಳ್ಳಲು ಉದ್ಯೋಗಿಗಳಿಗೆ ಮೇ 3ರ ಗಡುವನ್ನು ನೀಡಿದೆ. ಸುಪ್ರೀಂಕೋರ್ಟ್ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಗೆ ನಾಲ್ಕು ತಿಂಗಳಿನ ಗಡುವನ್ನು ಕೊಟ್ಟಿತ್ತು. 2014ರ ಸೆಪ್ಟೆಂಬರ್ 1ಕ್ಕೆ ಹಾಲಿ ಇಪಿಎಸ್ ಸದಸ್ಯರಾಗಿರುವವರಿಗೆ ತಮ್ಮ ಮೂಲ ವೇತನದ 8.33% ಪಾಲನ್ನು ಪಿಂಚಣಿ ನಿಧಿಗೆ ಪಾವತಿಸಲು ಸುಪ್ರೀಂಕೋರ್ಟ್ ನವೆಂಬರ್ 4ರಂದು ಅನುಮತಿ ಕೊಟ್ಟಿತ್ತು. ಮಾಸಿಕ 15,000 ರೂ. ಪಿಂಚಣಿಗೆ ಅರ್ಹ ವೇತನದ ಮಿತಿಯಾಗಿದೆ. ಗಡುವು ಸಮೀಪಿಸುತ್ತಿದ್ದರೂ, ಇಪಿಎಫ್‌ಒ ಕಳೆದ ವಾರವಷ್ಟೇ ಹೆಚ್ಚಿನ ಪಿಂಚಣಿಯ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಿತ್ತು.
ಪ್ರಸ್ತುತ ಉದ್ಯೋಗಿಗಳು ಮತ್ತು ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ, ತುಟ್ಟಿಭತ್ಯೆಯ 12%ರಷ್ಟನ್ನು ಇಪಿಎಫ್‌ಗೆ ಸಲ್ಲಿಸಲಾಗುತ್ತದೆ. ಉದ್ಯೋಗಿಗಳ 12% ದೇಣಿಗೆ ಪೂರ್ಣವಾಗಿ ಇಪಿಎಫ್‌ಗೆ ಸಂದಾಯವಾಗುತ್ತದೆ. ಉದ್ಯೋಗಿಗಳ 12% ಪಾಲಿನಲ್ಲಿ 3.67% ಇಪಿಎಫ್‌ಗೆ ಹೋಗುತ್ತದೆ. ಉಳಿದ 8.33% ಇಪಿಎಸ್‌ಗೆ ಹೋಗುತ್ತದೆ. ಸರ್ಕಾರ ಉದ್ಯೋಗಿಯ ಪಿಂಚಣಿಗೆ 1.6% ನೀಡುತ್ತದೆ. ಆದರೆ
ಇದೀಗ ಉದ್ಯೋಗಿಗಳೂ ಇಪಿಎಸ್‌ಗೆ ಹೆಚ್ಚುವರಿ ದೇಣಿಗೆ ನೀಡುವ ಮೂಲಕ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ ಸೃಷ್ಟಿಯಾಗಿದೆ.