Site icon Vistara News

Euro 2024 : ಸ್ಕಾಟ್ಲೆಂಡ್​ ವಿರುದ್ಧ ಜರ್ಮನಿಗೆ 5-1 ಗೋಲ್​ಗಳ ಭರ್ಜರಿ ವಿಜಯ

Euro 2024

ಮ್ಯೂನಿಚ್: ಯೂರೊ ಕಪ್​ ಫುಟ್ಬಾಲ್​​ 2024ನೇ (Euro 2024) ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಜರ್ಮನಿಯ ವಿರುದ್ಧ 5-1 ಗೋಲ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಪಾಲ್ಗೊಂಡಿರುವ ಇತರ ತಂಡಗಳಿಗೆ ಸ್ಪಷ್ಟ ಸಂದೇಶ ರವಾನಿಸಿತು. ಜರ್ಮನಿ ಪರ ಅಮೋಘ ಗೆಲುವಿನಲ್ಲಿ ಜಮಾಲ್ ಮುಸಿಯಾಲಾ, ನಿಕ್ಲಾಸ್ ಫುಲ್ಕ್ರುಗ್ ಮತ್ತು ಟೋನಿ ಕ್ರೂಸ್ ದೊಡ್ಡ ಪಾತ್ರ ವಹಿಸಿದರು. ಪಂದ್ಯದ 10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಜರ್ಮನಿ ಪರ ಗೋಲ್ ಬಾರಿಸಿದ್ದರೆ, ಮೊದಲಾರ್ಧ ಮುಗಿಯುವುದರೊಳಗೆ ಜಮಾಲ್ ಮುಸಿಯಾಲಾ, ಕೈ ಹ್ಯಾವರ್ಟ್ಜ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು.

ಅಲಿಯನ್ಸ್ ಅರೆನಾದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದುಕೊಂಡಿತು. ಹೀಗಾಗಿ ಬಲಿಷ್ಠ ಎದುರಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಬದಲಿ ಆಟಗಾರರಾದ ನಿಕ್ಲಾಸ್ ಫುಲ್ಕ್ರುಗ್ ಮತ್ತು ಎಮ್ರೆ ಕ್ಯಾನ್ ಅವರ 2 ಗೋಲುಗಳನ್ನು ಗಳಿಸಿದ ಕಾರಣ 1-5 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.

ಜರ್ಮನಿ-ಸ್ಕಾಟ್ಲೆಂಡ್ ಮುಖಾಮುಖಿ
10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಗಳಿಸಿದ ಗೋಲಿನಿಂದ ಜರ್ಮನಿ ಮೇಲುಗೈ ಸಾಧಿಸಿತು. ಪ್ಲೋರಿನ್ ಗೋಲ್ ಪೋಸ್ಟ್ ಕಡೆಗೆ ಒದ್ದ ಚೆಂಡನ್ನು ತಡೆಯಲು ಸ್ಕಾಟ್ಲೆಂಡ್​ನ ಗೋಲ್​ ಕೀಪರ್ ಆಂಗನ್​ ಗನ್​ ಯತ್ನಿಸಿದರೂ ಚೆಂಡು ಗೋಲ್ ಪೋಸ್ಟ್ ಹಿಂಬದಿಯ ನೆಟ್​ ತನಕ ನುಗ್ಗಿತು.

ಮ್ಯೂನಿಚ್ ಫುಟ್ಬಾಲ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 19ನೇ ನಿಮಿಷದಲ್ಲಿ ಜಮಾಲ್ ಮುಸಿಯಾಲಾ ಮತ್ತೊಂದು ಗೋಲ್ ಬಾರಿಸುವ ಮೂಲಕ ಮೂಲಕ ಮೂರು ಬಾರಿಯ ಯುರೋಪಿಯನ್ ಚಾಂಪಿಯನ್ಸ್ ತಂಡ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಇನ್ನು ಹ್ಯಾವಟ್ಜ್​​ ಮತ್ತೊಂದು ಗೋಲ್​ ಬಾರಿಸುವುದರೊಂದಿಗೆ ಜರ್ಮನಿ 3-0 ಮುನ್ನಡೆ ಕಾಪಾಡಿಕೊಂಡಿತು.

ಇದನ್ನೂ ಓದಿ: T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

ಪಂದ್ಯದ ಕೊನೆಯಲ್ಲಿ ಆಂಟೋನಿಯೊ ರುಡಿಗರ್ ಅವರ ಗೋಲಿನಿಂದ ಸ್ಕಾಟ್ಲೆಂಡ್ ಸ್ಕೋರ್ ಶೀಟ್ ನಲ್ಲಿ ತನ್ನ ಖಾತೆ ತೆರೆಯಿತು. ವನಂತರ ಎಮ್ರೆ ಕ್ಯಾನ್ ಆತಿಥೇಯ ಜರ್ಮನಿ ತಂಡಕ್ಕಾಗಿ ಗೋಲು ಗಳಿಸಿದರು. ಮುಂದಿನ ಪಂದ್ಯದಲ್ಲಿ ‘ಎ’ ಗುಂಪಿನಲ್ಲಿ ಜರ್ಮನಿ ಹಂಗೇರಿ ವಿರುದ್ಧ ಸೆಣಸಲಿದ್ದು, ಸ್ಕಾಟ್ಲೆಂಡ್ ಸ್ವಿಟ್ಜರ್ಲೆಂಡ್ ವಿರುದ್ಧ ಸೆಣಸಲಿದೆ.

ಯೂರೂ ಕಪ್​ ಫುಟ್ಬಾಲ್​ ಬಗ್ಗೆ

ಇಂಗ್ಲೆಂಡ್, ಫ್ರಾನ್ಸ್, ಪೋರ್ಚುಗಲ್ ಮತ್ತು ಸ್ಪೇನ್ ನಂತಹ ಉನ್ನತ ಫುಟ್ಬಾಲ್​ ಆಡುವ ಯುರೋಪಿಯನ್ ಅಂತರರಾಷ್ಟ್ರೀಯ ತಂಡಗಳು ಜೂನ್ 15 ರಿಂದ ಜರ್ಮನಿಯ ಆತಿಥ್ಯದಲ್ಲಿ ನಡೆಯತ್ತಿರುವ ಯುಇಎಫ್ ಎ ಯೂರೋ 2024 ನಲ್ಲಿ ಹೋರಾಟ ಆರಂಭಿಸಿದೆ. ಪಶ್ಚಿಮ ಜರ್ಮನಿಯು ಈ ಸ್ಪರ್ಧೆಯ 1988 ರ ಆವೃತ್ತಿಯನ್ನು ಆಯೋಜಿಸಿದ ನಂತರ, ಜರ್ಮನಿಯು ಆತಿಥೇಯ ರಾಷ್ಟ್ರವಾಗಿ ಯುರೋಪಿಯನ್ ಸ್ಪರ್ಧೆಯನ್ನು ನಡೆಸುತ್ತಿರುವುದು ಇದೇ ಮೊದಲು. 2021 ರ ಯೂರೋ ಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಇಟಲಿ ಚಾಂಪಿಯನ್ ಆಗಿತ್ತು.

ಯೂರೋ 2024 24 ತಂಡಗಳನ್ನು ಒಳಗೊಂಡಿದ್ದು, ಅವುಗಳನ್ನು ಎ, ಬಿ, ಸಿ, ಡಿ, ಇ, ಎಫ್ ಎಂಬ ನಾಲ್ಕು ತಂಡಗಳ 6 ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯಾವಳಿಯ ಗುಂಪು ಹಂತದ ಪಂದ್ಯಗಳು ಜೂನ್ 27 ರವರೆಗೆ ನಡೆಯಲಿದ್ದು, ನಾಕೌಟ್ ಪಂದ್ಯಗಳು ಜೂನ್ 29 ರಿಂದ ರೌಂಡ್ ಆಫ್ 16 ನೊಂದಿಗೆ ಪ್ರಾರಂಭವಾಗುತ್ತವೆ. ಯುರೋಪಿಯನ್ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ, ಕೈಲಿಯನ್ ಎಂಬಪೆ, ಲುಕಾ ಮೊಡ್ರಿಕ್, ಟೋನಿ ಕ್ರೂಸ್ ಮತ್ತು ಹ್ಯಾರಿ ಕೇನ್ ಈಗಾಗಲೇ ಪ್ರತಿಷ್ಠಿತ ಮತ್ತು ಹೆಚ್ಚು ಸ್ಪರ್ಧಾತ್ಮಕ ಯೂರೋ 2024 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯುಇಎಫ್ಎ ಯುರೋ 2024 ಅನ್ನು ಯಾವ ತಂಡಗಳು ಆಡುತ್ತಿವೆ?

ಗ್ರೂಪ್ ಎ: ಜರ್ಮನಿ, ಹಂಗೇರಿ, ಸ್ಕಾಟ್ಲೆಂಡ್, ಸ್ವಿಟ್ಜರ್ಲೆಂಡ್
ಬಿ ಗುಂಪು: ಕ್ರೊಯೇಷಿಯಾ, ಇಟಲಿ, ಸ್ಪೇನ್, ಅಲ್ಬೇನಿಯಾ
ಸಿ ಗುಂಪು: ಇಂಗ್ಲೆಂಡ್, ಡೆನ್ಮಾರ್ಕ್, ಸೆರ್ಬಿಯಾ, ಸ್ಲೊವೇನಿಯಾ
ಗ್ರೂಪ್ ಡಿ: ಫ್ರಾನ್ಸ್, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಪೋಲೆಂಡ್
ಗ್ರೂಪ್ ಇ: ಬೆಲ್ಜಿಯಂ, ರೊಮೇನಿಯಾ, ಸ್ಲೋವಾಕಿಯಾ, ಉಕ್ರೇನ್
ಗ್ರೂಪ್ ಎಫ್: ಪೋರ್ಚುಗಲ್, ಜೆಕ್ ಗಣರಾಜ್ಯ, ಜಾರ್ಜಿಯಾ, ಟರ್ಕಿ

Exit mobile version