Site icon Vistara News

Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ ; ಜೆಡಿಎಸ್​ಗೆ +1

Exit poll 2024

ಬೆಂಗಳೂರು: ಲೋಕ ಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಫಲಿತಾಂಶ ಬಿಜೆಪಿಗೆ 2019ರ ಚುನಾವಣೆಯಷ್ಟು ಪೂರಕವಾಗಿಲ್ಲ (Exit Poll 2024 ) ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಈ ಬಾರಿ ಕರ್ನಾಟಕದಲ್ಲಿ 18 ಸೀಟುಗಳು ಬಿಜೆಪಿಗೆ ದೊರೆಯಲಿದ್ದು, 8 ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ ಎಂದು ಪೋಲ್​​ ಸ್ಟಾಟ್ ಹೇಳಿದೆ. ಜೆಡಿಎಸ್​​ ರೀತಿ ಸ್ಪರ್ಧಿಸಿರುವ ಒಟ್ಟು 3ರಲ್ಲಿ ಎರಡು ಸ್ಥಾನಗಳನ್ನು ಜೆಡಿಎಸ್​ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ದೇಶಾದ್ಯಂತ ಬಿಜಪಿಗೆ ಹಿಂದಿಗಿಂತ ಹೆಚ್ಚು ಸೀಟುಗಳು ಸಿಗಲಿವೆ ಎಂಬ ಟ್ರೆಂಡ್ ಇರುವ ಹೊರತಾಗಿಯೂ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗಿದೆ. 2019ರಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ತಲಾ ಒಂದು ಸ್ಥಾನವನ್ನು ಹಂಚಿಕೊಂಡಿತ್ತು. ಪಕ್ಷೇತರರಾದ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರು.

ವಿಸ್ತಾರ ನ್ಯೂಸ್​- COPS ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ 18ರಿಂದ-22 ಸ್ಥಾನಗಳು ದೊರಕಿದೆ, ಕಾಂಗ್ರೆಸ್​ಗೆ 08ರಿಂದ 10 ಸ್ಥಾನಗಳು ಲಭಿಸಲಿವೆ. ಜೆಡಿಎಸ್​ಗೆ 2ರಿಂದ 3 ಸ್ಥಾನ ಸಿಗುವುದು ಎಂದು ಹೇಳಲಾಗಿದೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20ರಿಂದ 22, ಕಾಂಗ್ರೆಸ್ 3ರಿಂದ 5 ಮತ್ತು ಜೆಡಿಎಸ್ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ . ಇಂಡಿಯಾ ಟುಡೆ ಪ್ರಕಾರ ಕರ್ನಾಟದಲ್ಲಿ ಬಿಜೆಪಿಗೆ 23ರಿಂದ 25 ಹಾಗೂ ಕಾಂಗ್ರೆಸ್​ಗೆ 04ರಿಂದ 05 ಹಾಗೂ ಜೆಡಿಎಸ್​ಗೆ 1ರಿಂದ 3ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.

ಜನ್​ಕಿ ಬಾತ್​ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್​ಗೆ 4ರಿಂದ 8 ಹಾಗೂ ಜೆಡಿಎಸ್​ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ. ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್​ಗೆ 4ರಿಂದ 5 ಹಾಗೂ ಜೆಡಿಎಸ್​​ 01ರಿಂದ 3 ಸೀಟುಗಳು ಸಿಗಲಿವೆ.

ಇದನ್ನೂ ಓದಿ: Exit Poll 2024: ಮೋದಿ ಹ್ಯಾಟ್ರಿಕ್‌ ಖಚಿತ, ಇಂಡಿಯಾ ಒಕ್ಕೂಟಕ್ಕೆ ಸೋಲು ನಿಶ್ಚಿತ; ಇಲ್ಲಿದೆ ಎಕ್ಸಿಟ್‌ ಪೋಲ್‌ ವರದಿ

ಅಭ್ಯರ್ಥಿಗಳ ಆಯ್ಕೆ ಮತ್ತು ಕೆಲವೊಂದು ಗೊಂದಲಗಳ ಕಾರಣ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದು ಎಂಬುದಾಗಿ ರಾಜಕೀಯ ವಿಶ್ಲೇಷಕರು ಈ ಹಿಂದೆಯೇ ಅಂದಾಜಿಸಿದ್ದರು. ಚುನಾವಣೋತ್ತರ ಸಮೀಕ್ಷೆಯಲ್ಲೂ ಅದು ಪ್ರತಿಫಲನಗೊಂಡಿದೆ. ಬಿಜೆಪಿ ಕಳೆದ ಬಾರಿಗಿಂತ 3ರಿಂದ 5 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕಂಡಿವೆ. ಏತನ್ಮಧ್ಯೆ ಕಾಂಗ್ರೆಸ್​ ತನಗೆ ಭಾಗ್ಯಗಳು ಕೈ ಹಿಡಿಯಬಹುದು ಎಂದು ಅಂದಾಜಿಸಿತ್ತು. ಹೀಗಾಗಿ 10ಕ್ಕಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲಬಲ್ಲೆವು ಎಂದು ಆಂತರಿಕವಾಗಿ ಹೇಳಿಕೊಂಡಿತ್ತು. ಆದರೆ, ಅವರ ಲೆಕ್ಕಾಚಾರವೂ ತಪ್ಪಾಗಿದೆ. ಇವೆಲ್ಲದರ ನಡುವೆ ಜೆಡಿಎಸ್​ ಬಿಜೆಪಿ ಜತೆಗಿನ ಮೈತ್ರಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಸಮೀಕ್ಷೆಗಳ ಪ್ರಕಾರ ಈ ಪಕ್ಷ ಕನಿಷ್ಠ2 ಸೀಟ್​ ಗೆಲ್ಲುವು ಖಾತರಿ. ಇನ್ನೊಂದು ಸೀಟ್​ ಕೂಡ ಅವರ ಪರವಾಗಬಹುದು ಎಂದು ಹೇಳಲಾಗಿದೆ.

2024 ರ ಲೋಕಸಭಾ ಚುನಾವಣೆ ಎರಡು ಪ್ರಮುಖ ಮೈತ್ರಿಕೂಟಗಳಾದ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಎನ್ಡಿಎ ಬಣಗಳ ನಡುವೆ ತೀವ್ರ ಹೋರಾಟವಾಗಿ ರೂಪುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ನಿರ್ಧರಿಸಿದ್ದರೆ, ಬಿಜೆಪಿ ಮೈತ್ರಿಕೂಟವು ಅಸಮಾಧಾನದ ಗೆಲುವನ್ನು ಸಂಘಟಿಸಲು ದಣಿವರಿಯದೆ ಕೆಲಸ ಮಾಡುತ್ತಿದೆ. ಈ ಚುನಾವಣೆಯ ಫಲಿತಾಂಶವು ರಾಷ್ಟ್ರದ ರಾಜಕೀಯ ಭೂದೃಶ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.

ಕರ್ನಾಟಕದಲ್ಲಿ ಹೀಗಿದೆ ಚುನಾವಣಾ ಫಲಿತಾಂಶ ಸಮೀಕ್ಷೆ

Exit mobile version