Site icon Vistara News

Fireworks Blast : ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 8 ಮಂದಿಯ ದುರ್ಮರಣ

fireworks blast

ಶಿವಕಾಶಿ: ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ (Fireworks Blast) 8 ಜನರು ಸಾವನ್ನಪ್ಪಿದ್ದಾರೆ. ಭಾರತದ ಪಟಾಕಿ ಕೇಂದ್ರ ಎಂದು ಕರೆಯಲ್ಪಡುವ ಶಿವಕಾಶಿ (Sivakashi) ಬಳಿಯ ಪಟಾಕಿ ಉತ್ಪಾದನಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೃತಪಟ್ಟಿರುವವರ ಜತೆ ಇನ್ನೂ ಹನ್ನೆರಡು ಮಂದಿ ಗಂಭೀರ ಪ್ರಮಾಣದ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ದುರ್ಘಟನೆ ನಡೆದ ಕಾರ್ಖಾನೆ ಲೈಸನ್ಸ್​ ಪಡೆದ ಕಾರ್ಖಾನೆಯಾಗಿದೆ.

ಸ್ಫೋಟದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪೊಲೀಸರೊಂದಿಗೆ ಸ್ಥಳೀಯ ತನಿಖಾ ಸಂಸ್ಥೆಗಳು ತನಿಖೆ ಪ್ರಾರಂಭಿಸಿವೆ. ದುರಂತ ಘಟನೆಗೆ ಕಾರಣವಾದ ಸಂಭಾವ್ಯ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿವೆ. ಭಾರತದ ಪಟಾಕಿ ಉತ್ಪಾದನಾ ಕೇಂದ್ರವೆಂದು ಪ್ರಸಿದ್ಧವಾಗಿರುವ ಶಿವಕಾಶಿ ಭಾರತದಲ್ಲಿ ಅತಿ ಹೆಚ್ಚು ಪಟಾಕಿಗಳು ತಯಾರಿಸುವ ಕೇಂದ್ರವಾಗಿದೆ. ಇಲ್ಲಿ ಅದೇ ರೀತಿ ಸ್ಟೇಷನರಿ ವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಘಟನೆಯಿಂದಾಗಿಸ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ.

ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಮೇ 4ರಂದು ಭಾರತೀಯ ವಾಯುಪಡೆಯ ಬೆಂಗಾವಲು ಪಡೆಯ (Indian Air Force) ಎರಡು ವಾಹನಗಳ ಮೇಲೆ ದಾಳಿ ನಡೆಸಿದ ಉಗ್ರರ (Poonch Terrorists) ಫೋಟೊಗಳು, ಅವರ ಹೆಸರು ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಉಗ್ರರ ಫೋಟೊಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರತೀಯ ಸೇನೆಯು (Indian Army) ಇವರನ್ನು ಹೊಡೆದುರುಳಿಸಲು ಪ್ಲಾನ್‌ ರೂಪಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಾಯುಪಡೆ ವಾಹನಗಳ ಮೇಲೆ ದಾಳಿ ಮಾಡಿದ ಮೂವರನ್ನು ಇಲಿಯಾಸ್‌ (ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ), ಲಷ್ಕರೆ ತಯ್ಬಾ ಕಮಾಂಡರ್‌ ಅಬು ಹಮ್ಜಾ ಹಾಗೂ ಹದೂನ್‌ ಎಂಬುದಾಗಿ ಗುರುತಿಸಲಾಗಿದೆ. ಇಲಿಯಾಸ್‌ನ ಕೋಡ್‌ ನೇಮ್‌ (ಗೌಪ್ಯ ಹೆಸರು) ಫೌಜಿ ಎಂಬುದಾಗಿದೆ ಎಂದು ಕೂಡ ತಿಳಿದುಬಂದಿದೆ. ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಪೀಪಲ್ಸ್‌ ಆ್ಯಂಟಿ-ಫ್ಯಾಸಿಸ್ಟ್‌ ಫ್ರಂಟ್‌ ಎಂಬ ಅಂಗಸಂಸ್ಥೆಯ ಪರವಾಗಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇ 4ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ವಾಯುಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಪೂಂಚ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಮೊದಲೇ ಸೇನೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅರೆ ಸೈನಿಕ ಪಡೆ ಮತ್ತು ಪೊಲೀಸರು ಅವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಸಿಸಿಟಿವಿ ದೃಶ್ಯಗಳು ಹಾಗೂ ಫೋಟೊಗಳನ್ನು ಪರಿಶೀಲನೆ ಮಾಡುತ್ತಿರುವ ಭಾರತೀಯ ಸೇನೆಯು ರಾಜೌರಿ ಹಾಗೂ ಪೂಂಚ್‌ನ ಅರಣ್ಯ ಪ್ರದೇಶದಲ್ಲಿ‌ ಮೂವರ ಹತ್ಯೆಗಾಗಿ ಬೃಹತ್ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಕೆಲವೆಡೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೂಂಚ್‌ ದಾಳಿಯ ಬಳಿಕ ಕುಲ್ಗಾಮ್‌ನಲ್ಲಿ ಲಷ್ಕರೆ ತಯ್ಬಾದ ಮೂವರು ಉಗ್ರರನ್ನು ಹೊಡೆದುರುಳಿಸುವ ಮೂಲಕ ಯೋಧರು ಸೇಡು ತೀರಿಸಿಕೊಂಡಿದ್ದರು. ಮೇ 6ರಂದು ಕುಲ್ಗಾಮ್‌ನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಒಟ್ಟು ಮೂವರು ಹತ್ಯೆಗೈದಿದ್ದರು.

Exit mobile version