Site icon Vistara News

Zika virus : ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ; ಶಿವಮೊಗ್ಗದ ವ್ಯಕ್ತಿ ಸಾವು

Zika virus

ಬೆಂಗಳೂರು : ಅಪಾಯಕಾರಿ ಜೀಕಾ ವೈರಸ್​ಗೆ (Zika virus ) ಕರ್ನಾಟದಲ್ಲಿ ಮೊದಲ ಬಲಿಯಾಗಿದೆ. ಜೀಕಾ ವೈರಸ್​ ಸೋಂಕಿನಿಂದ ಬಳಸುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. 73 ವರ್ಷದ ವ್ಯಕ್ತಿ ಮೃತಪಟ್ಟವರು ಎಂದು ಮೂಲಗಳು ತಿಳಿಸಿವೆ. ಅವರಿಗೆ ಕೆಲವು ದಿನಗಳಿಂದ ಜೀಕಾ ವೈರಸ್​ನಿಂದ ಆಗುವ ಸೋಂಕು ಇತ್ತು. ಜತೆಗೆ ಅವರಿಗೆ ಕೋಮಾರ್ಬಿಟಿಸ್ ಕೂಡ ಇತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್​ ಸೋಂಕು ಕಂಡು ಬಂದಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್​ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣೀ ಎಂದು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: RAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

ವೈರಸ್ ಗೆ ತುತ್ತಾದ ಗರ್ಭಿಣಿಯ ಆರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗರ್ಭಿಣಿಯರ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಇದೇ ವೇಳೆ ಆರೋಗ್ಯ ವೈರಸ್ ಕಾಣಿಸಿಕೊಂಡ ರೋಗಿಗಳ ವಿವರವನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಜಿಗಣಿಯಲ್ಲಿ ಝೀಕಾ ವೈರಸ್ ಕಂಡುಬಂದ ಗರ್ಭಿಣಿಗೆ ಹೆರಿಗೆಯಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಇನ್ನುಳಿದ ನಾಲ್ವರಿಗೆ ಮುಂದುವರೆದ ಚಿಕಿತ್ಸೆ ಮುಂದುವರಿದಿದೆ.

Exit mobile version